ಅದ್ಧೂರಿಯಾಗಿ ರಿಲೀಸ್ ಆದ ಕೈವ ಸಿನಿಮಾ. ನೆಗೆಟಿವ್ ಕಾಮೆಂಟ್ ಮತ್ತು ನೆಗೆಟಿವ್ ವಿಮರ್ಶೆ ನೀಡುತ್ತಿರುವವರಿಗೆ ಉತ್ತರ ಕೊಟ್ಟ ಚಿತ್ರತಂಡ.
ಧನ್ವೀರ್ ಮತ್ತು ಮೇಘಾ ಶೆಟ್ಟಿ ನಟಿಸಿರುವ ಕೈವ ಸಿನಿಮಾ ರಿಲೀಸ್ ಆಗಿದೆ. ಜಯತೀರ್ಥ ನಿರ್ದೇಶನ ಮಾಡಿರುವ ಈ ಚಿತ್ರ 8ರ ದಶಕದಲ್ಲಿ ಬೆಂಗಳೂರು ಕರಗ ನಡೆಯುವ ಸಮಯದಲ್ಲಿ ನಡೆದ ನೈಜ ಘಟನೆ ಹೇಳುತ್ತದೆ. ಸಿನಿಮಾ ಟ್ರೈಲರ್ ಮತ್ತು ಟೀಸರ್ ಸಿನಿ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿತ್ತು. ತಕ್ಕ ಮಟ್ಟಕ್ಕೆ ಸಿನಿಮಾ ಓಡುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ವಿಮರ್ಶೆ ಓಡಾಡುತ್ತಿದೆ. ಅದರಲ್ಲೂ ಧನ್ವೀರ್‌ಗೆ ಸದಾ ಸಪೋರ್ಟ್ ಮಾಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋವನ್ನು ಡಿಪಿ ಮಾಡಿಕೊಂಡು ಕಾಮೆಂಟ್ ಮಾಡುತ್ತಿರುವುದು ಬೇಸರದ ವಿಚಾರ. ಈ ಬೇಸರದಲ್ಲಿ ಚಿತ್ರತಂಡ ಉತ್ತರ ಕೊಟ್ಟಿದೆ.
'ಧರ್ಮದ ಏಟು ತಪ್ಪಿದ ಬಹುದು ಆದರೆ ಕರ್ಮದ ಏಟು ತಪ್ಪಿಸಲು ಆಗುವುದಿಲ್ಲ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಇದೇ ನಮ್ಮ ಉತ್ತರ. ಕಾಯಬೇಕು ತಾಳ್ಮೆ ಇರಬೇಕು ಅಷ್ಟೆ. ಮಾಧ್ಯಮಗಳ ನಿಜವಾದ ವಿಮರ್ಶೆ ಕೊಡುವವರು. ಸಿನಿಮಾ ರಿಲೀಸ್ ಆದ್ಮೇಲೆ ಜನರು ಬಂದು ಕೇಳಿ ವಿಮರ್ಶೆ ಪಡೆಯುವವರು ನಿಜವಾದ ಸಿನಿಮಾ ಲವರ್ಸ್‌ಗಳು. ಹಿಂದೆ ಎಲ್ಲೋ ರಿವ್ಯೂಯರ್ಸ್ ಅಂತ ಹೇಳ್ಕೊಂಡು ಏನ್ ಏನ್ ಬರೆದುಕೊಂಡು ತುಳಿತಿರುತ್ತಾರೆ ಅವರು ನಿಜವಾದ ಸಿನಿಮಾ ಲವರ್ಸ್ ಅಲ್ಲ ಹೊಟ್ಟೆ ಪಾಡಿಗೆ ಈ ರೀತಿ ಕೆಲಸ ಮಾಡಿಕೊಂಡು ಕೂರುತ್ತಾರೆ. ಯಾರೋ ಏನೋ ಹೇಳ್ತಾರೆ ಕೊಡ್ತಾರೆ ಅಂತ ಸುದ್ದಿ ಹೊಡೆಯುತ್ತಾರೆ. ಜನರು ಏನು ಮಾಡುತ್ತಾರೋ ಮಾಡಲಿ ಧರ್ಮ ಕರ್ಮ ಸಮಯ ಬರುತ್ತದೆ ಅದಕ್ಕೆ ಕಾಯುತ್ತೀನಿ' ಎಂದು ನಟ ಧನ್ವೀರ್ ಮಾತನಾಡಿದ್ದಾರೆ.
ಪ್ರೀತಿಯಲ್ಲಿ ಬಿದ್ದ ಮೇಘಾ ಶೆಟ್ಟಿ; ಡಿಸೆಂಬರ್ 8 ರಿವೀಲ್ ಆಗಲಿದೆ ಗುಡ್ ನ್ಯೂಸ್!
'ಕಳೆದ ಸಿನಿಮಾ ರಿಲೀಸ್ ಸಮಯದಲ್ಲೂ ಹೀಗೆ ಆಯ್ತು. ಇರಲಿ ಪರ್ವಾಗಿಲಿ. ನಮ್ಮ ದೊಡ್ಡವರು ಒಂದೇ ಮಾತು ಹೇಳುವುದು ಬೆಳೆಯಬೇಕು ಅಂತ ಇದ್ಯಾ.. ಬೆಳೆಯುತ್ತಿರುವೆ...ಬೆಳೆದ ಮೇಲೆ ಕಾಂಟ್ರವರ್ಸಿ ಅನ್ನೋದು ಶುರುವಾಗುವುದು ತಲೆ ಕೆಡಿಸಿಕೊಳ್ಳಬೇಡ ಎಂದು' ಎಂದು ಧನ್ವೀರ್ ಹೇಳಿದ್ದಾರೆ.
46ನೇ ವಯಸ್ಸಿನಲ್ಲಿ ಕಿರುತೆರೆ ನಟಿ ಜೊತೆ ಹಸೆಮಣೆ ಏರಿದ ಹಾಸ್ಯ ನಟ; ಮೈಸೂರಿನಲ್ಲಿ ಸರಳ ಮದುವೆ!
'ಸಿನಿಮಾ ನೋಡದೆ ಮನೆಯಲ್ಲಿ ತುಳಿತುಕೊಂಡು ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ವ್ಯಕ್ತಿಗಳಿಗೆ ಒಂದು ಮಾತು ಹೇಳುತ್ತೀನಿ. ನಿಮ್ಮ ಮನೆಯಲ್ಲೂ ಅಕ್ಕ-ತಂಗಿ ಇದ್ದಾರೆ..ನೀವು ಸಿನಿಮಾ ಮಾಡಿ ನಾವು ಬಂದು ನಿಂತುಕೊಳ್ಳುತ್ತೀವಿ. ದಯಮಾಡಿ ಕನ್ನಡ ಚಿತ್ರರಂಗವನ್ನು ಸೋಲಿಸಬೇಡಿ. ನಮ್ಮ ಕೈವ ಸಿನಿಮಾ ಮಾತ್ರವಲ್ಲ ಕನ್ನಡ ಚಿತ್ರರಂಗವನ್ನು ಸೋಲಿಸುತ್ತಿದ್ದೀರಿ. ನಮ್ಮ ಕಲೆ ಬಗ್ಗೆ ನನಗೆ ನಂಬಿಕೆ ಇದೆ ನಮ್ಮ ಸಿನಿಮಾ ಗೆಲ್ಲುತ್ತದೆ. ದಯವಿಟ್ಟು ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹ ನೀಡಿ. ಎಷ್ಟು ಜನರಿಗೆ ನಾನು ಸಪೋರ್ಟ್ ಮಾಡಿದ್ದೀನಿ. ಬೈಕ್‌ನಲ್ಲಿ ಓಡಾಡಿಕೊಂಡು ಸಿನಿಮಾ ಮಾಡಿದ್ದೀನಿ..ಅದೆಷ್ಟೋ ಚಿತ್ರತಂಡದ ಜೊತೆ ಕೆಲಸ ಮಾಡಿದ್ದೀನಿ ಸಪೋರ್ಟ್ ಮಾಡಿದ್ದೀನಿ. ವರ್ಷಕ್ಕೆ ಎರಡು ಕಥೆ ಬರೆಯಲಿ ಎಂದು ಹೇಳುತ್ತಾರೆ ಆದರೆ ಒಂದು ಕಥೆ ಬರೆಯಲು 6 ತಿಂಗಳು ಬೇಕು. ಅಪರೂಪಕ್ಕೆ ಒಳ್ಳೆ ಸಿನಿಮಾ ಬಂದಾಗ ಸಪೋರ್ಟ್ ಮಾಡಿ' ಎಂದು ಚಿತ್ರ ನಿರ್ದೇಶಕ ಜಯತೀರ್ಥ ಉತ್ತರ ಕೊಟ್ಟಿದ್ದಾರೆ.