
ಡಾ.ರಾಜ್‌ಕುಮಾರ್ ಅವರ 94ನೇ ಜನ್ಮ ದಿನದಂದು ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ನನಗೂ ಅಜ್ಜಿಗೂ ಶ್ಯಾಪಿಂಗ್ ವಿಚಾರದಲ್ಲಿ ತುಂಬಾ ವ್ಯತ್ಯಾಸವಿತ್ತು ಎಂದ ನಟಿ...
ಅಣ್ಣಾವ್ರ ಬಗ್ಗೆ:
'ನನ್ನ ತಾತನ ಅಗಲಿಕೆ ನೋವು ತುಂಬಾ ಇದೆ. ನನ್ನ ತಾಯಿ ಮತ್ತು ನಾನು ಆಗಷ್ಟೇ ಪೇರೆಂಟ್ ಟೀಚರ್ ಮೀಟಿಂಗ್ ಮುಗಿಸಿಕೊಂಡು ಮನೆ ತಲುಪಿದ್ವಿ. ನನ್ನ ಮಾರ್ಕ್ಸ್‌ಗಳನ್ನು ವಿಚಾರಿಸಿಕೊಂಡರು ನನ್ನ ಸಹೋದರ ಧಿರೇನ್ ರಾಮ್‌ಕುಮಾರ್ Sanskrit ಕಲಿಯುತ್ತಿದ್ದ ಎಂದು ತುಂಬಾ ಖುಷಿ ಪಟ್ಟರು. ನಾನು ಕೂಡ ಕಲಿಯಬೇಕು ಅನ್ನೋದು ಅವರ ಆಸೆ ಆಗಿತ್ತು. ಈ ಮಾತುಕತೆ ಮುಗಿದ ಮೇಲೆ ಅಕ್ಕಪಕ್ಕದ ಮನೆಯವರ ಜೊತೆ ಆಟವಾಡಲು ಓಡಿ ಹೋದೆ. ಅವರ ಕೊನೆ ಮಾತು ನನಗೆ ನೆನಪು ಇರುವ ಪ್ರಕಾರ ಏನೆಂದರೆ ಯಾರಾದರೂ ಫ್ಯಾನ್ ಆನ್ ಮಾಡಬೇಕಿತ್ತು ಕೆಲವು ನಿಮಿಷಗಳ ಕಾಲ ನೆಮ್ಮದಿಯಾಗಿ ನಿದ್ರೆ ಮಾಡಬೇಕು ಎಂದುಕೊಂಡಿದ್ದರು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಧನ್ಯಾ ಮಾತನಾಡಿದ್ದಾರೆ.
ತಾತ ಕೋಪ ಯಾರಿಗೂ ಗೊತ್ತಿಲ್ಲ; ಅಣ್ಣಾವ್ರ ಮುದ್ದಿನ ಅಮ್ಮಿ ಧನ್ಯಾ ರಾಮ್‌ಕುಮಾರ್ ಮಾತುಗಳು
'15 ನಿಮಿಷಗಳ ನಂತರ ನನ್ನ ತಾಯಿ ಜೋರಾಗಿ ಕೂಗುತ್ತಿರುವುದನ್ನು ಕೇಳಿಸಿಕೊಂಡೆ. ಅವರ ಜೊತೆಗಿದ್ದ ಕೊನೆ ಕ್ಷಣ ನಾನು ಎಂದೂ ಮರೆಯುವುದಿಲ್ಲ. ನಾನು ಬೆಳೆಯುವ ಕ್ಷಣ ಅವರು ನಮ್ಮೊಟ್ಟಿಗರ ಇರಬೇಕಿತ್ತು ಅನ್ನೋ ಆಸೆ ಇತ್ತು. ಅವರಿಂದ ತುಂಬಾ ಸಲಹೆಗಳು ಸಿಗುತ್ತಿತ್ತು. ನನ್ನ ಬಿಗ್ ಇನ್‌ಫ್ಲೋಯನ್ಸರ್ ಆಗಿದ್ದು ತಾತ. ನಟರಾಗಿ ಮಾತ್ರವಲ್ಲ ಒಳ್ಳೆಯ ವ್ಯಕ್ತಿತ್ವದವಾರಗಿ ಇಷ್ಟವಾಗುತ್ತಿದ್ದರು. ಒಬ್ಬರ ಬಗ್ಗೆ ಒಳ್ಳೆ ವಿಚಾರ ಮಾತನಾಡಲು ಇಲ್ಲ ಅಂದ್ರೆ ಏನೂ ಮಾತನಾಡಬೇಡಿ ಎನ್ನುವ ಮಾತಿದೆ ಅದನ್ನು ತಾತ ಪಾಲಿಸುತ್ತಿದ್ದರು. ಎಂದೂ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೀವಿ ನಾವೆಲ್ಲ ನಮ್ಮ ತಾತ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ಎಂದು' ಎಂದು ಧನ್ಯಾ ಹೇಳಿದ್ದಾರೆ.
ಪಾರ್ವತಮ್ಮ ಅಜ್ಜಿ:
ಅಜ್ಜಿ ಪಾರ್ವತಮ್ಮ ಅವರ ಬಗ್ಗೆ ತುಂಬಾ ವಿಚಾರಗಳನ್ನು ಹೇಳಬಹುದು ಏಕೆಂದರೆ ಅವರ ಜೊತೆ ಹೆಚ್ಚಿಗೆ ಸಮಯ ಕಳೆದಿರುವೆ. ಶಾಪಿಂಗ್ ವಿಚಾರದಲ್ಲಿ ನನಗೂ ಅಜ್ಜಿಗೂ ತುಂಬಾ ವ್ಯತ್ಯಾಸವಿತ್ತು. ಸಣ್ಣ ಪುಟ್ಟ ವಿಚಾರಗಳನ್ನು ನಾವಿಬ್ಬರೂ ಒಪ್ಪಿಕೊಳ್ಳುತ್ತಿರಲಿಲ್ಲ ಆದರೆ ಕೊನೆಯಲ್ಲಿ ಅಜ್ಜಿ ಬಂದು ನನ್ನನ್ನು ಸಾಮಾಧಾನ ಮಾಡುತ್ತಿದ್ದರು. ಅಜ್ಜಿ ಜೊತೆ ಏನಾದರೂ ಜೋರಾಗಿ ಮಾತನಾಡುವುದು ಎದುರು ಉತ್ತರ ಕೊಟ್ಟರೆ ಹಾಗೆ ಮಾತನಾಡಬಾರದು ಎಂದು ಅಜ್ಜಿ ಹೇಳುತ್ತಿದ್ದರು. ನನ್ನ ತಾಯಿ ಜೊತೆ ನಾನು ಸಿಕ್ಕಾಪಟ್ಟೆ ಕ್ಲೋಸ್ ಆಗಿರಲು ಕಾರಣವೇ ನನ್ನ ತಾಯಿ ಅವರ ತಾಯಿ(ಪಾರ್ವತಮ್ಮ) ಅವರ ಜೊತೆ ಒಳ್ಳೆ ಸಂಬಂಧ ಹೊಂದಿದ್ದರು. ನಮ್ಮ ಕುಟುಂಬದ ಶಕ್ತಿ ನಮ್ಮ ಅಜ್ಜಿ ಏಕೆಂದರೆ ಇಡೀ ಮನೆ, ನಿರ್ಮಾಣ ಸಂಸ್ಥೆ ಮತ್ತು ವಿತರಣೆ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಅಜ್ಜಿ ಸಾಧನೆ ಮಾಡಿರುವುದರಲ್ಲಿ ಅರ್ಧ ಸಾಧಿಸಿದರು ಹೆಮ್ಮೆ ಪಡುವೆ ಎಂದಿದ್ದಾರ ಧನ್ಯಾ.
ಜೀವನಕ್ಕೆ ಹುಮ್ಮಸ್ಸು ತಂದ ಡಾ. ರಾಜ್ ಹಾಡುಗಳಿದು; ನೀವು ಕೇಳಿದ್ದೀರಾ?
ಸ್ಪೆಷಲ್ ಹಾಡು:
'ಅಪ್ಪು ಮಾಮ ಸದಾ ಹೇಳುತ್ತಿದ್ದರು ನಾನು ಹಾಡುವ ರೀತಿ ಅವರಿಗೆ ತುಂಬಾ ಇಷ್ಟ ಎಂದು. ಅವರು ಸಲಹೆ ಪಡೆದು ಇದು ಸರಿಯಾದ ಮಾರ್ಗ ಎಂದು ಹಾಡಲು ಶುರು ಮಾಡಿದೆ. ಕಳೆದ ವರ್ಷ ಕೂಡ ಹಾಡು ಹಾಡಿರುವೆ ಈ ವರ್ಷ ತಾತ ಮತ್ತು ಅಪ್ಪು ಮಾಮ ಅವರಿಗೆ ಆ ದೇವರ ಹಾಡಿದು ಹಾಡನ್ನು ಹಾಡಿರುವೆ. ಇದು ಅಪ್ಪು ಮಾಮ ಮೊದಲ ಚಿತ್ರದ ಹಾಡು ನಮ್ಮ ತಾತ ಹಾಡಿರುವುದು. ಹೀಗಾಗಿ ಮನಸ್ಸಿಗೆ ತುಂಬಾ ಹತ್ತಿರ. ಹಾಡುವ ಪ್ರಯತ್ನ ಮಾಡಿರುವೆ ಎಂದು ಧನ್ಯಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.