ತಾತ ಕೋಪ ಯಾರಿಗೂ ಗೊತ್ತಿಲ್ಲ; ಅಣ್ಣಾವ್ರ ಮುದ್ದಿನ ಅಮ್ಮಿ ಧನ್ಯಾ ರಾಮ್‌ಕುಮಾರ್ ಮಾತುಗಳು

Published : Apr 24, 2023, 04:29 PM IST
ತಾತ ಕೋಪ ಯಾರಿಗೂ ಗೊತ್ತಿಲ್ಲ; ಅಣ್ಣಾವ್ರ ಮುದ್ದಿನ ಅಮ್ಮಿ ಧನ್ಯಾ ರಾಮ್‌ಕುಮಾರ್ ಮಾತುಗಳು

ಸಾರಾಂಶ

ಊಟ ಮಾಡುವಾಗ ಮಕ್ಕಳು ಕಾಣಿಸಿಕೊಂಡರೆ ತಪ್ಪದೆ ಕೈ ತುತ್ತು ಕೊಡುತ್ತಿದ್ದರು. ಮಟನ್ ಅದ್ರೆ ಸಖತ್ ಇಷ್ಟ...ತಾತನ ಬಗ್ಗೆ ಧನ್ಯಾ ಮಾತು...

'ಅಮ್ಮಿ ಎಂದು ತಾತ ಡಾ.ರಾಜ್‌ಕುಮಾರ್ ಅವರು ನನ್ನನ್ನ ಕರೆಯುತ್ತಿದ್ದರು ಎಂದು ನಟಿ ಧನ್ಯಾ ರಾಮ್‌ಕುಮಾರ್ ತಾತನ ಬಗ್ಗ ಹೆಮ್ಮೆಯಿಂದ ಮಾತನಾಡಿದ್ದಾರೆ. ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಣ್ಣಾವ್ರ ಮೊಮ್ಮಗಳು, ರಾಮ್‌ಕುಮಾರ್ ಮತ್ತು ಪೂರ್ಣಿಮಾ ಅವರ ಮುದ್ದಿನ ಪುತ್ರಿ ಧನ್ಯಾ ರಾಮ್. ಕಾಲೇಜ್‌ ದಿನಗಳಿಂದ ಮಾಡಲಿಂಗ್ ಫೋಟೋ ಶೂಟ್ ಮತ್ತು ಇವೆಂಟ್‌ಗಳಲ್ಲಿ ಭಾಗಿಯಾಗಿ ಧನ್ಯಾ ಕ್ಯಾಮೆರಾ ಮುಂದೆ ತುಂಬಾ ಫ್ರೆಂಡ್ಲಿಯಾಗಿದ್ದಾರೆ. 'ಸಿನಿಮಾ ಬ್ಯಾಕ್‌ಗ್ರೌಂಡ್‌ ಇದೆ ಅಂತ ಸಿನಿಮಾಗೆ ಬಂದಿಲ್ಲ ಅಥವಾ ಸುಲಭವಾಗಿ ಜರ್ನಿ ಆರಂಭಿಸಿಲ್ಲ' ಎನ್ನುತ್ತಾರೆ ಧನ್ಯಾ. ಚಿತ್ರರಂಗದಲ್ಲಿ ಉಳಿಯುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆತ್ಮಸ್ಥೈರ್ಯ ಅನ್ನೋದು ಧನ್ಯಾ ಯೊಚನೆ.

ವರನಟ ಡಾ ರಾಜ್‌ಕುಮಾರ್ ಅವರ 94ನೇ ಜನ್ಮ ದಿನದ ಸವಿನೆನಪದನ್ನು ಮತ್ತಷ್ಟು ಸವಿ ಮಾಡಲು ಧನ್ಯಾ ವಿಶೇಷ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. 'ತೆರೆ ಮೇಲೆ ತಾತಾ ರಾಜ್‌ಕುಮಾರ್ ಅವರಿಗೆ ಹಲವಾರು ವ್ಯಕ್ತಿಗಳನ್ನು ಪ್ರದರ್ಶಿಸಿದ್ದಾರೆ - ಲವರ್ ಬಾಯ್ ಆಗಿ ಆಕ್ಷನ್ ಹೀರೋ ಅಗಿ, ಬಾಂಡ್ ಅಗಿ, ಪೊಲೀಸ್ ಆಫೀಸ್ ಹೀಗೆ ಸಾಕಷ್ಟು. ನಮ್ಮ ಕುಟುಂಬದಲ್ಲಿರುವ ಪ್ರತಿ ಸದಸ್ಯರನ್ನು ತುಂಬಾ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಫಸ್ಟ್‌ ಸರ್ಕಲ್ ಮೇಲೆ ಮಾತ್ರ ಪ್ರೀತಿ ಅಲ್ಲ ಎಲ್ಲರ ಮೇಲೂ. ನನ್ನ ತಾಯಿ ಪೂರ್ಣಿಮಾ ಅವರ ಎರಡನೇ ಪ್ರೆಗ್ನೆನ್ಸಿ ತುಂಬಾನೇ ಸೀರಿಯಸ್ ಅಗಿತ್ತು ತಡೆಯಲಾಗಷ್ಟು ನೋವಿತ್ತು ಆಗ ನನ್ನ ತಾತ ವೈದ್ಯರ ಜೊತೆ ಮಾತನಾಡಿ ಮಗಳ ಅರೋಗ್ಯ ಮುಖ್ಯ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂದು ಚರ್ಚೆ ಮಾಡಿದ್ದರು. ನಾನು ಹುಟ್ಟಿದ ಮೇಲೆ ನನ್ನನ್ನು ಹಿಡಿದುಕೊಂಡು ಇಷ್ಟೊಂದು ಮುದ್ದಾಗಿರುವ ಮಗು ಬೇಡ ಎಂದ ಹೇಳಲು ಆಗ ನನಗೆ ಹೇಗೆ ಮನಸ್ಸು ಬಂತು ಗೊತ್ತಿಲ್ಲ ಎಂದಿದ್ದರಂತೆ' ಎಂದು ಧನ್ಯಾ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಜೀವನಕ್ಕೆ ಹುಮ್ಮಸ್ಸು ತಂದ ಡಾ. ರಾಜ್ ಹಾಡುಗಳಿದು; ನೀವು ಕೇಳಿದ್ದೀರಾ?

ನನ್ನ ನಾಮಕರಣವನ್ನು ಅದ್ಧೂರಿಯಾಗಿ ಹಮ್ಮಿಕೊಂಡಿದ್ದರು ಅಗ ನನಗೆ ಹುಷಾರಿರಲಿಲ್ಲ ತುಂಬಾನೇ ಅಳುತ್ತಿದ್ದೆ. ಅರ್ಚಕರಿಗೆ ಬೇಗ ಬೇಗ ಪೂಜೆ ಮುಗಿಸಲು ಹೇಳಿ ತಕ್ಷಣವನ್ನು ನನ್ನನ್ನು ರೂಮ್‌ಗೆ ಕರೆದುಕೊಂಡು ಹೋಗಿ ಕಾಟನ್ ಬಟ್ಟೆಗಳನ್ನು ಹಾಕಿ ಯಾರೂ ಇಲ್ಲದ ರೂಮ್‌ಗೆ ಕರೆದುಕೊಂಡು ಹೋಗಿ ತೊಡೆ ಮೇಲೆ ನನ್ನನ್ನು ಮಲಗಿಸಿಕೊಂಡರು. ತಾತ ಸುತ್ತಲಿರುವ ಜನರು ಕಷ್ಟ ಪಡುವುದು ಅಥವಾ ಅನಾನುಕೂಲ ಇಲ್ಲದೆ ಇರುವುದನ್ನು ನೋಡಲು ಇಷ್ಟ ಪಡುತ್ತಿರಲಿಲ್ಲ.

ನನ್ನ ಹೆಸರು ಆಯ್ಕೆ ಮಾಡಿದ್ದು ಕೂಡ ವಿಭಿನ್ನ. ನನ್ನ ತಾಯಿ ಹೊಟ್ಟೆಯಲ್ಲಿ ನಾನು ಇರುವಾಗ ಹೆಚ್ಚಿಗೆ ತಂದೆ ಅವರ ಸಿನಿಮಾದ ಭಕ್ತಿ ಗೀತೆಗಳನ್ನು ಕೇಳುತ್ತಿದ್ದರು ಆಗ ಒಂದು ಹಾಡಿನಲ್ಲಿ ಧನ್ಯಾ ಎನ್ನುವ ಪದ ಇವರಿಗೆ ಇಷ್ಟವಾಗಿ ಹೆಣ್ಣು ಮಗು ಹುಟ್ಟಿದರೆ ಧನ್ಯಾ ಎಂದು ಹೆಸರು ಇಡಬೇಕು ಎಂದು ನಿರ್ಧಾರ ಮಾಡಿದ್ದರು..ಹಾಗೆ ಮಾಡಿದರು ಎಂದು ಧನ್ಯಾ ಹೇಳಿದ್ದಾರೆ.

ಇಂದು ಡಾ ರಾಜ್‌ಕುಮಾರ್‌ ಅವರ 94ನೇ ಜನ್ಮದಿನ!

ತಾತ ನನ್ನನ್ನು ಅಮ್ಮಿ ಎಂದು ಕರೆಯುತ್ತಿದ್ದರು. ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟಿಗೆ ಬೆಳೆಯಬೇಕು ಅನ್ನೋದು ಅವರ ಆಸೆ. ಜೀವನದಲ್ಲಿ ಪ್ರತಿಯೊಬ್ಬರ ಜೊತೆ ಚೆನ್ನಾಗಿರಬೇಕು ಪ್ರೀತಿ ಹಂಚಬೇಕು ಎಂದು ಆಗಾಗ ಹೇಳುತ್ತಿದ್ದರು. ಮಟನ್‌ ಬಳಸಿ ಏನೇ ಆಡುಗೆ ಮಾಡಿದರೂ ಖುಷಿಯಿಂದ ಸವಿಯುತ್ತಿದ್ದರು. ಊಟ ಮಾಡುವಾಗ ಅಕ್ಕ ಪಕ್ಕ ಮಕ್ಕಳು ಕಾಣಿಸಿಕೊಂಡರೆ ಕರೆದು ಊಟ ಮಾಡಿಸುತ್ತಿದ್ದರು. ಮಕ್ಕಳು ಜಗಳ ಮಾಡಿಕೊಂಡಾಗ ಕೆಟ್ಟ ಪದಗಳನ್ನು ಬಳಸುವುದು ಇಷ್ಟ ಆಗುತ್ತಿರಲಿಲ್ಲ. ಯಾರಿಗೂ ಗೊತ್ತಿಲ್ಲ ತಾತ ಅವರಿಗೆ ಕೋಪ ಜಾಸ್ತಿ. ಕೋಪ ಅನ್ನೋದು ಅಪರೂಪಕ್ಕೆ ಬರುತ್ತಿತ್ತು ಆದರೆ ಸರಿ ಮಾಡುವ ಅಥವಾ ಒಳ್ಳೆ ವಿಚಾರಕ್ಕೆ ಬರುತ್ತಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?