ಬೆಂಗಳೂರು ಕರಗದಲ್ಲಿ ರಕ್ತ ಚರಿತ್ರೆಯಾಗಿ ಬದಲಾದ ಪ್ರೇಮ ಕಥೆ; 'ಕೈವ' ಸತ್ಯತೆಗಳ ಬಗ್ಗೆ ಧನ್ವೀರ್

Published : Dec 08, 2023, 10:39 AM ISTUpdated : Dec 08, 2023, 11:07 AM IST
ಬೆಂಗಳೂರು ಕರಗದಲ್ಲಿ ರಕ್ತ ಚರಿತ್ರೆಯಾಗಿ ಬದಲಾದ ಪ್ರೇಮ ಕಥೆ; 'ಕೈವ' ಸತ್ಯತೆಗಳ ಬಗ್ಗೆ ಧನ್ವೀರ್

ಸಾರಾಂಶ

ಜಯತೀರ್ಥ ನಿರ್ದೇಶನದ, ಧನ್ವೀರ್-ಮೇಘಾ ಶೆಟ್ಟಿ ಅಭಿನಯದ, ರವೀಂದ್ರ ಕುಮಾರ್ ನಿರ್ಮಾಣದ 80ರ ದಶಕದ ಬೆಂಗಳೂರಿನ ಕತೆ ಹೊಂದಿರುವ ‘ಕೈವ’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕುರಿತಾಗಿ ನಾಯಕ ನಟ ಧನ್ವೀರ್ ಗೌಡ ಮಾತುಗಳು ಇಲ್ಲಿವೆ

- 80ರ ದಶಕದಲ್ಲಿ ನಡೆಯುವ ಕತೆ ಹೊಂದಿರುವ ಸಿನಿಮಾ. ಅದರಲ್ಲೂ ಆ ಕಾಲದ ಬೆಂಗಳೂರು ಕಾಣಿಸುವ ಸಿನಿಮಾ. ಬೆಂಗಳೂರಿನ ಪ್ರಮುಖ ಆಚರಣೆಯಾದ ಕರಗದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕತೆಯೇ ಈ ಸಿನಿಮಾದ ಆಕರ್ಷಣೆ. ಒಬ್ಬ ಸಾಮಾನ್ಯ ತರುಣನ ಭಾವನೆಗಳು ನಿಯಂತ್ರಣ ತಪ್ಪಿದಾಗ ಆತ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ತೋರಿಸುವ ಚಿತ್ರ ಕೈವ.

- ಐದು ನೈಜ ಘಟನೆಗಳನ್ನು ಮಿಳಿತಗೊಳಿಸಿ ಈ ಸಿನಿಮಾ ರೂಪಿಸಲಾಗಿದೆ. ಆ ಎಲ್ಲಾ ಘಟನೆಗಳು ಒಂದಕ್ಕೊಂದು ಪೂರಕವಾಗಿವೆ. ಪ್ರೇಮಕತೆಯೊಂದು ರಕ್ತ ಚರಿತ್ರೆಯಾಗಿ ಬದಲಾಗುವ ವಿಸ್ಮಯವನ್ನು ಈ ಸಿನಿಮಾದಲ್ಲಿ ನೋಡಬಹುದು.

ಪ್ರೀತಿಯಲ್ಲಿ ಬಿದ್ದ ಮೇಘಾ ಶೆಟ್ಟಿ; ಡಿಸೆಂಬರ್ 8 ರಿವೀಲ್ ಆಗಲಿದೆ ಗುಡ್ ನ್ಯೂಸ್!

- ಕತೆ ಕೇಳಿದ ತಕ್ಷಣ ನನಗೆ ಸಂತೋಷವಾಯಿತು. ಈ ಕತೆಯಲ್ಲಿ ಪ್ರೇಮದ ನವಿರುತನವಿದೆ. ಜೊತೆಗೆ ಪಾತ್ರದಲ್ಲಿ ಮಾಸ್ ಗುಣವಿದೆ. ಹಾಗಾಗಿ ಇಷ್ಟವಾಯಿತು. ಜೊತೆಗೆ ಕತೆ ನಡೆಯುವ ವಾತಾವರಣವೂ ಹೆಚ್ಚು ಹತ್ತಿರ ಅನ್ನಿಸಿತು. ಇದು ಕರಗದ ಹಿನ್ನೆಲೆಯಲ್ಲಿ ನಡೆಯುವ ಕತೆ. ಬೆಂಗಳೂರು ಕರಗ ನಮ್ಮ ಬದುಕಿನ ಭಾಗ. ನನ್ನ ತಾಯಿ ತಾಯಿ ತಿಗಳರಪೇಟೆಯವರು. ನಾವು ಮನೆಯಲ್ಲಿ ದ್ರೌಪದಿ ಅಮ್ಮನನ್ನು ಪೂಜಿಸುತ್ತೇವೆ. ಪ್ರತೀ ಸಲ ಕರಗ ನೋಡಲು ಹೋಗುತ್ತೇವೆ. ಆ ನಿಟ್ಟಿನಲ್ಲಿಯೂ ಈ ಸಿನಿಮಾ ಕತೆ ನನಗೆ ಆಪ್ತ ಅನ್ನಿಸಿತು.

- ಈ ಸಿನಿಮಾ ರೂಪಿಸಲು ಇಡೀ ತಂಡ ಶ್ರಮ ಪಟ್ಟಿದೆ. 80ರ ದಶಕದ ಕಾಲಘಟ್ಟವನ್ನು ತೋರಿಸುವುದು ಸವಾಲಾಗಿತ್ತು. ಅಲ್ಲದೇ, ಆ ಕಾಲದ ಪಾತ್ರವಾಗಿ ಬದಲಾಗುವುದು ಇನ್ನೂ ದೊಡ್ಡ ಸವಾಲಾಗಿತ್ತು. ಆ ಕಾಲದ ಪಾತ್ರದ ಲುಕ್‌ಗೆ ತಕ್ಕಂತೆ ಹೇರ್‌ಸ್ಟೈಲ್‌, ದಿರಿಸು ಎಲ್ಲವನ್ನೂ ಬದಲಿಸಿಕೊಂಡೆ. ಕೈವನಾಗಿ ಬದಲಾಗುತ್ತಾ ಹೋದೆ. ನಿರ್ದೇಶಕರು 20 ದಿನಗಳ ಕಾಲ ವರ್ಕ್‌ಶಾಪ್‌ ನಡೆಸಿದರು. ಅದು ನನಗೆ ಕೈವನಾಗುವುದಕ್ಕೆ ಹೆಚ್ಚು ಸಹಾಯ ಮಾಡಿತು.

- ಈ ಚಿತ್ರದಲ್ಲಿ ನಾವು ಕರಗವನ್ನು ತೋರಿಸಿದ್ದೇವೆ. ನಾನು ಕರಗದಲ್ಲಿನ ವೀರಕುಮಾರನಾಗಿ ನಟಿಸಿದ್ದೇನೆ. ಹಾಗಾಗಿ ಇದೊಂದು ಚಾರಿತ್ರಿಕ ಅಂಶಗಳನ್ನೂ ಒಳಗೊಂಡಿರುವ ಸಿನಿಮಾ. ಕೆಲವು ಸನ್ನಿವೇಶಗಳನ್ನು ಕರಗದಲ್ಲಿಯೇ ಚಿತ್ರೀಕರಿಸಿದ್ದೆವು. ಮತ್ತೊಂದಷ್ಟು ದೃಶ್ಯಗಳನ್ನು ಹಿರಿಯರ ಒಪ್ಪಿಗೆ ಪಡೆದು ಸೆಟ್ ಹಾಕಿ ಚಿತ್ರೀಕರಿಸಿದ್ದೇವೆ. ಕರಗದ ವೈಭವವನ್ನೂ ಈ ಸಿನಿಮಾ ಕಾಣಿಸುತ್ತದೆ.

ಪೈಲ್ವಾನರ ಸ್ವರ್ಗ ತಿಗಳರ ಪೇಟೆ ಅದ್ದೂರಿ ಕತೆ ಕೈವ: ಧನ್ವೀರ್ ಸಿನಿಮಾ ಟ್ರೈಲರ್‌ನದ್ದೇ ಟಾಕ್!

- ಬಹುತೇಕ ಈ ಸಿನಿಮಾದ ಕತೆ ನೈಜ ಘಟನೆಗೆ ಪೂರಕವಾಗಿ ರಿಯಲಿಸ್ಟಿಕ್‌ ಆಗಿದೆ. ಆದರೆ ಫೈಟ್‌ಗಳೆಲ್ಲವೂ ತುಂಬಾ ಸ್ಟೈಲಿಶ್ ಆಗಿವೆ. ನನಗೆ ಆ್ಯಕ್ಷನ್‌ ಇಷ್ಟ. ಇದರಲ್ಲಿ ಸುಮಾರು ಆರು ಫೈಟ್‌ಗಳಿವೆ. ಖುಷಿಯಂದ ಮಾಡಿದ್ದೇನೆ. ಅದು ಈ ಚಿತ್ರದ ಅದ್ದೂರಿತನಕ್ಕೆ ಸಹಾಯ ಮಾಡಿದೆ.

- ದರ್ಶನ್‌ ಸರ್‌ ಈ ಸಿನಿಮಾ ನೋಡು ಮೆಚ್ಚಿಕೊಂಡು ಫೋನ್‌ ಮಾಡಿದ್ದರು. ಈಗ ಜನರ ಮುಂದೆ ಬರುತ್ತಿದ್ದೇನೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್