ಅವರಿಗೆ ಭಕ್ತಿ ನಟನೆ ಆಗಿರಲಿಲ್ಲ, ಜೀವನವೇ ಆಗಿತ್ತು; ಹುಬ್ಬು ಸುಟ್ಟರೂ ಧ್ಯಾನ ಮಾಡುತ್ತಿದ್ರಾ ಡಾ ರಾಜ್‌ಕುಮಾರ್..!?

By Shriram Bhat  |  First Published Feb 7, 2024, 6:27 PM IST

ಅದೆಷ್ಟೋ ಜನರು ತಮ್ಮ ಮನೆಗಳಲ್ಲಿ ಡಾ ರಾಜ್‌ಕುಮಾರ್ ದೇವರ ಪಾತ್ರಗಳನ್ನು ಮಾಡಿದ್ದ ಫೋಟೋಗಳನ್ನೇ ಹಾಕಿಕೊಂಡು ಪೂಜೆ ಮಾಡುತ್ತಿದ್ದರಂತೆ. ಅಷ್ಟರಮಟ್ಟಿಗೆ ಡಾ ರಾಜ್‌ಕುಮಾರ್ ದೇವರ ಅವತಾರ ಎಂಬಂತೆ ನೋಡುತ್ತಿದ್ದರಂತೆ ಕನ್ನಡ ಸಿನಿಪ್ರೇಕ್ಷಕರು.


ಕನ್ನಡ ಚಿತ್ರರಂಗದ ಮೆರು ನಟ, ಪದ್ಮಭೂಷಣ ಡಾ ರಾಜ್‌ಕುಮಾರ್ ಅವರು ಚಿತ್ರರಂಗ ಕಂಡಾ ಅತ್ಯದ್ಭುತ ಕಲಾವಿದರಲ್ಲಿ ಒಬ್ಬರು. ಅದರಲ್ಲೂ ಮುಖ್ಯವಾಗಿ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಡಾ ರಾಜ್‌ಕುಮಾರ್ ಅವರು ನಟನೆಯಲ್ಲಿ ಎತ್ತಿದ ಕೈ ಎನ್ನಲೇಬೇಕು. ಅಂದಿನ ಕಾಲದಲ್ಲಿ ಮೂಡಿ ಬಂದಿರುವ ಡಾ ರಾಜ್‌ಕುಮಾರ್ ನಟನೆಯ ಹಲವು ಭಕ್ತಿಪ್ರಧಾನ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಜತೆಗೆ, ರಾಜ್‌ ನಟಿಸಿರುವ ಹಲವು ಚಿತ್ರಗಳನ್ನು ಅಂದು ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದರು ಎಂದರೆ ಡಾ ರಾಜ್‌ಕುಮಾರ್ ಮಾಡಿರುವ ದೇವರ ಪಾತ್ರಗಳನ್ನು ನೋಡಿ ಜನರು ಅವರೇ ದೇವರು ಎಂದುಕೊಂಡಿದ್ದರು. 

ಅದೆಷ್ಟೋ ಜನರು ತಮ್ಮ ಮನೆಗಳಲ್ಲಿ ಡಾ ರಾಜ್‌ಕುಮಾರ್ ದೇವರ ಪಾತ್ರಗಳನ್ನು ಮಾಡಿದ್ದ ಫೋಟೋಗಳನ್ನೇ ಹಾಕಿಕೊಂಡು ಪೂಜೆ ಮಾಡುತ್ತಿದ್ದರಂತೆ. ಅಷ್ಟರಮಟ್ಟಿಗೆ ಡಾ ರಾಜ್‌ಕುಮಾರ್ ದೇವರ ಅವತಾರ ಎಂಬಂತೆ ನೋಡುತ್ತಿದ್ದರಂತೆ ಕನ್ನಡ ಸಿನಿಪ್ರೇಕ್ಷಕರು. ಡಾ ರಾಜ್ ಕೂಡ ಅಷ್ಟೇ, ಅವರಿಗೆ ದೈವ ಭಕ್ತಿ ಎನ್ನುವುದು ಕೇವಲ ನಟನೆ ಆಗಿರಲಿಲ್ಲ, ಅವರು ಭಕ್ತಿಯನ್ನೇ ಜೀವನ ಮಾಡಿಕೊಂಡಿದ್ದರು. ಅದಕ್ಕೆ ಉದಾಹರಣೆ ಎಂಬಂತೆ 'ಸಂತ ತುಕಾರಾಮ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆಯನ್ನು ಹಲವರು ಉದಾಹರಣೆಯಾಗಿ ನೀಡುತ್ತಾರೆ. 

Tap to resize

Latest Videos

ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?

'ಅದು ಡಾ ರಾಜ್‌ಕುಮಾರ್ ನಟನೆಯ ಸಂತ ತುಕಾರಾಮ್ ಚಿತ್ರದ  ಶೂಟಿಂಗ್ ಸಮಯ. ಜೋಳದ ಹೊಲದ ಅಟ್ಟಣಿಗೆಯ ಮೇಲೆ ಡಾ ರಾಜ್‌ಕುಮಾರ ಅವರು ಧ್ಯಾನ ಮಾಡುತ್ತಿರುವ ಸನ್ನಿವೇಶ ಎನ್ನಲಾಗಿದೆ. ಅದರಂತೆ ಡಾ ರಾಜ್‌ ಅಟ್ಟಣಿಗೆ ಮೇಲೆ ಧ್ಯಾನಸ್ಥರಾಗಿರಲು ವೈರಿಗಳು ಕೆಳಗೆ ಬೆಂಕಿಯಿಡುವ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಆಗ ಕಣ್ಣುಮುಚ್ಚಿ ನಟ ಡಾ ರಾಜ್‌ಕುಮಾರ್ ಅವರು ಧ್ಯಾನ ಮಾಡುತ್ತ ಕುಳಿತಾಗ ಇಟ್ಟ ಬೆಂಕಿ ಅಟ್ಟಣಿಗೆಗೂ ಮೀರಿ ಮೇಲೆ ವ್ಯಾಪಿಸಿ ಡಾ ರಾಜ್‌ ಅಕ್ಕಪಕ್ಕ ಸುತ್ತಲೂ ಬಂದು ಧಗಧಗನೇ ಉರಿಯತೊಡಗಿತ್ತಂತೆ. ಆದರೆ ಇದರ ಪರಿವೆಯಿಲ್ಲದೇ ಅವರು ಇನ್ನೂ ಕಣ್ಣುಮುಚ್ಚಿಯೇ ಕುಳಿತಿದ್ದರಂತೆ. 

ಸಾಯಿಕುಮಾರ್ ಜತೆ 'ಸತ್ಯ ಸನ್ ಆಫ್ ಹರಿಶ್ಚಂದ್ರ'ನಾಗಿ ಮಿಂಚಲಿದ್ದಾರೆ ನಿರೂಪ್ ಭಂಡಾರಿ

ಹಾಗೇ ಅವರು ಕುಳಿತಿರಲು ಗಾಬರಿಯಾದ ಅಕ್ಕಪಕ್ಕದಲ್ಲಿದ್ದ ಜನರು ಬೆಂಕಿಯ ಮೇಲೆ ಮಣ್ಣು, ನೀರು ಎರಚಿ ಬೆಂಕಿಯನ್ನು ತಕ್ಕಮಟ್ಟಿಗೆ ಆರಿಸಿ ಜೋರಾಗಿ ಕೂಗಿ ಡಾ ರಾಜ್ ಅವರನ್ನು ಅಲ್ಲಿಂದ ಎಬ್ಬಿಸಿದರಂತೆ. ಆದರೆ ಅಷ್ಟರಲ್ಲಾಗಲೇ ಡಾ ರಾಜ್‌ ಅವರ ಕೈಕಾಲುಗಳು ಹಾಗೂ ಕಣ್ಣಿನ ಹುಬ್ಬಿನ ಮೇಲಿದ್ದ ರೋಮಗಳು ಬೆಂಕಿಯ ಉರಿಗೆ ಸುಟ್ಟುಹೋಗಿದ್ದವು ಎನ್ನಲಾಗಿದೆ.

ದುರಂತ ಕಥೆಯಾಗಿರುವ ಸಮಂತಾ ಅದೆಂಥಾ ಮಾತು ಹೇಳಿದ್ರು; ಅಯ್ಯೋ ಪಾಪ ಅಂತಿದಾರೆ ಫ್ಯಾನ್ಸ್!

ಅಷ್ಟಾದರೂ ಡಾ ರಾಜ್‌ ಅವರಿಗೆ ಅದು ಗೊತ್ತಾಗಿರಲೇ ಇಲ್ಲವಂತೆ. ಜನರ ಬೊಬ್ಬೆ ಕೇಳಿ ಮೇಲೆದ್ದ ಅವರು ಏನಾಯಿತು ಎಂದು ಅಲ್ಲಿದ್ದವರನ್ನೇ ಪ್ರಶ್ನಿಸಿದಾಗ ಅದನ್ನು ಕಂಡು ಅಲ್ಲಿದ್ದವರಿಗೆ ಶಾಕ್ ಆಗಿ ಮಾತೇ ಹೊರಡಲಿಲ್ಲ ಎನ್ನಲಾಗಿದೆ. ಶೂಟಿಂಗ್ ಆಗರಲಿ ಅಥವಾ ಜೀವನವೇ ಆಗಿರಲಿ, ಭಕ್ತಿಯನ್ನು ಮೆರೆಯುವ ಸಂದರ್ಭ ಬಂದಾಗ ಡಾ ರಾಜ್‌ಕುಮಾರ್ ಅವರು ಸಂಪೂರ್ಣವಾಗಿ ತಲ್ಲೀನರಾಗುತ್ತಿದ್ದರು ಎನ್ನಲಾಗಿದೆ.

'ನಾನು ನಿಜವಾಗಿಯೂ ಶ್ರೀಮಂತೆನಾ; ಅದೆಂಥಾ ಮಾತು ಹೇಳಿದ್ರು ನೋಡಿ ನಟಿ ಪ್ರಿಯಾಂಕಾ ಚೋಪ್ರಾ..!

click me!