ಪುಟಾಣಿ ಮಗಳು ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ರೀಲ್ಸ್​: ಹಾರ್ಟ್​ ಇಮೋಜಿಗಳ ಸುರಿಮಳೆ

By Suvarna News  |  First Published Feb 7, 2024, 4:54 PM IST

ಪುಟಾಣಿ ಮಗಳು ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ರೀಲ್ಸ್​ ಮಾಡಿದ್ದು, ಹಾರ್ಟ್​ ಇಮೋಜಿಗಳ ಸುರಿಮಳೆಯಾಗಿದೆ. ಇಲ್ಲಿದೆ ನೋಡಿ ವಿಡಿಯೋ...
 


ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಫೇಮಸ್​ ಆಗಿರುವ ಧ್ರುವ ಸರ್ಜಾ ಈಚೆಗಷ್ಟೇ ಅಂದರೆ,  ಜನವರಿ 22 ರಂದು ತಮ್ಮ ಇಬ್ಬರು ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ಕಾರ್ಯಕ್ರಮದಲ್ಲಿ ಬಂಧುಗಳು ಮತ್ತು ಸಿನಿಮಾ ತಾರೆಯರು ಆಗಮಿಸಿದ್ದರು. ಧ್ರುವ ಸರ್ಜಾ ಮತ್ತು ಪ್ರೇರಣಾ (Prerana) ದಂಪತಿ ಮಕ್ಕಳಿಗೆ ದೇವರ ಹೆಸರನ್ನಿಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ.  ಅಷ್ಟಕ್ಕೂ ಹನುಮ ಭಕ್ತನಾಗಿರುವ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣಕ್ಕೆ ಜನವರಿ 22 ಆಯ್ಕೆ  ಮಾಡಿಕೊಳ್ಳುವ ಹಿಂದೆಯೂ ಬಹುದೊಡ್ಡ ಉದ್ದೇಶವೇ ಇದೆ. ಅದು ಎಲ್ಲರಿಗೂ ತಿಳಿದಿರುವಂತೆ ಅಯೋಧ್ಯೆಯಲ್ಲಿ ಅಂದು ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿತ್ತು. ಅದೇ ದಿನ  ಹನುಮ ಭಕ್ತ ಧ್ರುವ ಮಕ್ಕಳಿಗೆ ನಾಮಕರಣ ನೆರವೇರಿಸಿದ್ದಾರೆ. ಧ್ರುವ ಸರ್ಜಾ ಮಕ್ಕಳ ನಾಮಕರಣವನ್ನು ಮಾವ ಅರ್ಜುನ್ ಸರ್ಜಾ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.  

Tap to resize

Latest Videos

ಆಗ್ಗಾಗ್ಗೆ ಹನುಮಾನ ದೇಗುಲಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನೂ ನೆರವೇರಿಸುತ್ತಿರುತ್ತಾರೆ.  24 ನವೆಂಬರ್‌ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಅಂದರೆ 2022ರ  ಅಕ್ಟೋಬರ್‌ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಇದಾದ ಬಳಿಕ ಕಳೆದ ಸಪ್ಟೆಂಬರ್​ 18ರಂದು ಎರಡನೆಯ ಮಗುವಿನ ಪಾಲಕರಾಗಿದ್ದಾರೆ ಧ್ರುವ ಮತ್ತು ಪ್ರೇರಣಾ.  ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.  ಎರಡನೆಯ ಮಗು ಹುಟ್ಟಿದರೂ ಮೊದಲ ಮಗಳ  ಹೆಸರನ್ನು  ಇವರು ರಿವೀಲ್​ ಮಾಡಿರಲಿಲ್ಲ.  ಕೊನೆಗೂ ಇಬ್ಬರ ನಾಮಕರಣ ಮಾಡಿ ಫ್ಯಾನ್ಸ್​ ಕಾತರಕ್ಕೆ ತೆರೆ ಎಳೆದರು. 

ಇದೀಗ ಮಗಳ ಜೊತೆ ಧ್ರುವ ರೀಲ್ಸ್​ ಮಾಡಿದ್ದಾರೆ. ಮುದ್ದುಮೊಗದ ಪುಟಾಣಿ ಅಪ್ಪನನ್ನು ನೋಡಿ ನಗುತ್ತಿದ್ದಾಳೆ. ನಂತರ ಒಂದ್​ ಹುಡುಗೀ ಪ್ರಪಂಚದಲ್ಲಿ, ಬೇರೆ ಹುಡುಗಿಯರು ಇದ್ದಾರೆ ಅನ್ನೋದನ್ನೇ ಮರೆಸಿಬಿಟ್ಟಿದ್ದಾಳೆ ಎನ್ನುವ ಮೂಲಕ ಧ್ರುವ ಅವರು ಮಗಳನ್ನು ಎತ್ತಿ ಮುದ್ದಾಡಿದ್ದಾರೆ. ಇದಕ್ಕೆ ಹಲವಾರು ಕಮೆಂಟ್ಸ್​ ಬಂದಿವೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್ ತುಂಬಿ ಹೋಗಿದ್ದು ಸೋ ಕ್ಯೂಟ್​ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಅಷ್ಟಕ್ಕೂ ತಮ್ಮ ಮಕ್ಕಳಿಗೆ ರುದ್ರಾಕ್ಷಿ (Rudrakshi) ಮತ್ತು ಹಯಗ್ರೀವ (Hayagreeva) ಹೆಸರು ಇಟ್ಟಿರುವ ಬಗ್ಗೆ ಈ ಹಿಂದೆಯೇ ದಂಪತಿ ಹೇಳಿದ್ದರು.ಮಕ್ಕಳಿಗೆ ಯಾವುದೇ ಫ್ಯಾನ್ಸಿ ಹೆಸರು ಇಡಬಾರದು, ಜೊತೆಗೆ ಒತ್ತಕ್ಷರ ಇರುವಂತಹ ಹೆಸರು ಇಟ್ಟರೆ ಒಳ್ಳೆಯದು ಎನ್ನುವ ಕಾರಣಕ್ಕೆ ಮಕ್ಕಳಿಗೆ  ದೇವರಿಗೆ ಸಂಬಂಧಿಸಿದ ಹೆಸರನ್ನು ಇಡಲಾಗಿದೆ ಎಂದಿದ್ದರು. ನಾಮಕರಣದ ಹಿನ್ನೆಲೆಯಲ್ಲಿ ಫೋಟೋ ಮಕ್ಕಳ ಜೊತೆ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿರುವ ಧ್ರುವ ಸರ್ಜಾ ದಂಪತಿಗಳು, ಅವುಗಳ ವಿಡಿಯೋ ಮಾಡಿ ಮಕ್ಕಳ ಹೆಸರುಗಳನ್ನು ರಿವೀಲ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು.

ಸ್ಯಾಂಡಲ್​ವುಡ್​ ನಟಿಯಾಗುವ ಆಸೆ ಇದ್ಯಾ? ನಿಮ್ಮೂರಲ್ಲೇ ಆಡಿಷನ್​ ಶುರು...ಇಲ್ಲಿದೆ ಫುಲ್​ ಡಿಟೇಲ್ಸ್​
 

click me!