ಧನಂಜಯ್- ಧನ್ಯತಾ ಮದುವೆ ಒಡವೆಗಳ ಗ್ರಾಂ ಮತ್ತು ಬೆಲೆ ಬಗ್ಗೆ ರಿವೀಲ್ ಮಾಡಿದ ಡಿಸೈನರ್ ಶಚಿನಾ ಹೆಗ್ಗಾರ್

Published : Feb 15, 2025, 09:47 AM ISTUpdated : Feb 15, 2025, 10:04 AM IST
ಧನಂಜಯ್- ಧನ್ಯತಾ ಮದುವೆ ಒಡವೆಗಳ ಗ್ರಾಂ ಮತ್ತು ಬೆಲೆ ಬಗ್ಗೆ ರಿವೀಲ್ ಮಾಡಿದ ಡಿಸೈನರ್ ಶಚಿನಾ ಹೆಗ್ಗಾರ್

ಸಾರಾಂಶ

ಫೆಬ್ರವರಿ 15-16 ರಂದು ಮೈಸೂರಿನಲ್ಲಿ ನಟ ಧನಂಜಯ್ ಮತ್ತು ಧನ್ಯತಾ ವಿವಾಹ. ಡಿಸೈನರ್ ಶಚಿನಾ ಹೆಗ್ಗಾರ್ ಧನಂಜಯ್ ಅವರ ಸರಳತೆಗೆ ತಕ್ಕಂತೆ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಭಾರತದಲ್ಲಿ ಎರಡೇ ಇರುವ ವಿಶಿಷ್ಟ ಚೈನ್ ಧರಿಸಲಿದ್ದಾರೆ. ಶ್ರೀ ಗಣೇಶ್ ಆಭರಣದಿಂದ ದುಬಾರಿ ಆಭರಣಗಳನ್ನು ಆಯ್ಕೆ ಮಾಡಲಾಗಿದೆ. ಧನ್ಯತಾ ಅವರ ಆಯ್ಕೆಗಳಿಗೆ ಅನುಗುಣವಾಗಿ ವಿಶಿಷ್ಟ ಉಡುಪುಗಳನ್ನು ರೂಪಿಸಲಾಗಿದೆ.

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಧನು ತಮ್ಮ ಮದುವೆ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿದ್ದು ಹೇಗೆ? ಆಭರಣಗಳು ಹೇಗಿರುತ್ತದೆ ಎಂದು ಡಿಸೈನ್ ಶಚಿನಾ ಹೆಗ್ಗಾರ್ ರಿವೀಲ್ ಮಾಡಿದ್ದಾರೆ.

ಧನಂಜಯ್ ಸ್ನೇಹ: 

'ಧನಂಜಯ್ ರಾಟೆ ಸಿನಿಮಾ ಸಮಯದಿಂದ ಅವರೊಟ್ಟಿಗೆ ಡಿಸೈನರ್ ಆಗಿ ಕೆಲಸ ಮಾಡುತ್ತೀದ್ದೀನಿ. ಒಂದೇ  ಒಂದು ವರ್ಷ ಮಾತ್ರ ಬ್ಲಾಕ್ ಶರ್ಟ್ ಬ್ಲಾಕ್ ಪ್ಯಾಂಟ್ ಹಾಕಿಕೊಂಡು ಓಡಾಡಿದ್ದಾರೆ. ತುಂಬಾ ಸಿಂಪಲ್ ವ್ಯಕ್ತಿಯಾಗಿರುವ ಕಾರಣ ಬಟ್ಟೆ ಕೂಡ ಸಿಂಪಲ್ ಇಷ್ಟ ಪಡುತ್ತಾರೆ. ಬಟ್ಟೆ ವಿಚಾರದಲ್ಲಿ ತುಂಬಾ ಚರ್ಚೆ ಮಾಡಿ ಮಾಡಿ ಈಗ ನನ್ನನ್ನು ನಂಬಲು ಶುರು ಮಾಡುತ್ತಾರೆ. ಈಗ ಧನಂಜಯ್ ಟೇಸ್ಟ್‌ ಅರ್ಥವಾಗಿ ಅವರ ಕಂಫರ್ಟ್‌ನ ಫುಶ್ ಮಾಡಿ ಡ್ರೆಸ್‌ ಆಯ್ಕೆ ಮಾಡಲಾಗುತ್ತದೆ. ಮೊದಲ ಕಷ್ಟ ಆಗುತ್ತಿತ್ತು ಈಗ ಸುಲಭವಾಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಶಚಿನಾ ಮಾತನಾಡಿದ್ದಾರೆ.

ನೋಡ್ರಿ ನೋಡ್ರಿ..ದುಡ್ಡು ಉಳಿಸೋಕೆ ನಿಮ್ಮ ಮನೆ ಬಾಲ್ಕಾನಿಯಲ್ಲಿ ಈ ತರಕಾರಿ ಬೆಳೆಯಬಹುದು!

ಆಭರಣ:

'ಧನಂಜಯ್ ಮದುವೆಯಲ್ಲಿ ನಾವು ತುಂಬಾ ಎಕ್ಸ್‌ಕ್ಲೂಸಿವ್ ಆಗಿರುವ ಆಭರಣಗಳನ್ನು ಆಯ್ಕೆ ಮಾಡಿದ್ದೀವಿ ಅದು ಶ್ರೀ ಗಣೇಶ್ ಆಭರಣದ ಅಂಗಡಿಯಿಂದ. ಧನಂಜಯ್ ಧರಿಸುವ ಒಂದು ಚೈನ್‌ ವಿಶೇಷತೆ ಏನೆಂದರೆ ಇಡೀ  ಇಂಡಿಯಾದಲ್ಲಿ ಆ ರೀತಿ ಡಿಸೈನ್‌ ಇರುವುದು ಮಾಡಿರುವುದು ಎರಡೇ...ಅದರಲ್ಲಿ ಇವರ ಬಳಿ ಒಂದಿದೆ ಈಗ. ವಧು ವರ ಧರಿಸುವ ಆಭರಣದಲ್ಲಿ ತುಂಬಾ ಎಕ್ಸ್‌ಕ್ಲೂಸಿವ್ ಆಗಿರುತ್ತದೆ. ಆಭರಣಗಳು ಸಿಕ್ಕಾಪಟ್ಟೆ ದುಬಾರಿ ಆಗಿದೆ ಆದರೂ ಶ್ರೀ ಗಣೇಶ್ ಅಂಗಡಿಯವರು ನಮ್ಮೊಟ್ಟಿಗೆ ಪಾರ್ಟನರ್ ಆಗಿದ್ದಾರೆ' ಎಂದು ಶಚಿನಾ ಹೇಳಿದ್ದಾರೆ.

ಮದುವೆ ಸಮಾರಂಭ ಶುರು...ಹುಟ್ಟೂರಿನಲ್ಲಿ ಕೆಂಡ ತುಳಿದ ನಟ ಧನಂಜಯ್

ಧನ್ಯತಾ:

'ಧನ್ಯತಾ ಅವರಿಗೆ ಮುಹೂರ್ತಕ್ಕೆ ಡ್ರೆಸ್ ರೆಡಿ ಮಾಡಿದ್ದೀವಿ ಬೇರೆ ಎಲ್ಲಾ ಕಾರ್ಯಕ್ರಮಗಳಿಗೆ ಅವರೇ ಅಯ್ಕೆ ಮಾಡಿದ್ದಾರೆ. ಧನಂಜಯ್ ಇಡೀ ಫ್ಯಾಮಿಲಿಗೆ ಒಂದೇ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಧನ್ಯತಾ ಅವರಿಗೆ ಆಯ್ಕೆಗಳು ತುಂಬಾ ವಿಭಿನ್ನವಾಗಿ ನಾನು ಈ ರೀತಿ ಹಾಕುವುದಿಲ್ಲ ಈ ರೀತಿ ಇರಬೇಕು ಯಾವ ಆಭರಣವೂ ಭಾರ ಆಗಬಾರದು ಎನ್ನುತ್ತಿದ್ದರು. ನಾವು ಗ್ರಾಂಡ್ ಆಗಿ ಕಾಣಿಸಬೇಕು ಆದರೆ ಹೆವಿ ಇರಬಾರದು ಎನ್ನುತ್ತಿದ್ದರು' ಎಂದಿದ್ದಾರೆ ಶಚಿನಾ. 

ಆ ಕಾಲದಲ್ಲಿ ಡಿವೋರ್ಸ್‌ ಪಡೆದು ಒಂಟಿಯಾಗಿ ಮನೆ ನಡೆಸೋದು ಸುಲಭವಲ್ಲ; ತಾಯಿ ಬಗ್ಗೆ ಅಮೃತಾ ಅಯ್ಯಂಗಾರ್ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?