ವಿಶೇಷ ದಿನಕ್ಕೆ ದರ್ಶನ್ ಬೇಡಿಕೆ.. ಎಸ್‌ಪಿಗೆ ಪತ್ರ: ಗಂಡನ ನೆನಪಲ್ಲಿ ಒಡೆದ ಹೃದಯ.. ವಿಜಯಲಕ್ಷ್ಮೀ ಭಾವುಕ!

Published : May 19, 2026, 05:10 PM IST
Darshan

ಸಾರಾಂಶ

ಎಂತದ್ದೇ ಕಷ್ಟಗಳು ಎದುರಾದ್ರು, ಎದೆಗುಂದದೆ ಇಷ್ಟು ವರ್ಷಗಳಿಂದ ಸಂಸಾರದ ದೋಣಿಯನ್ನ ಮುನ್ನಡೆಸುತ್ತಿರೋ ದರ್ಶನ್​ ವಿಜಯಲಕ್ಷ್ಮೀಗೆ ಇದೇ ಮೊದಲ ಭಾರಿಗೆ ದೂರಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಬೇಕಿದೆ.

ನಟ ದರ್ಶನ್ ಬುದುಕು ಬರಡಾಗಿದೆ. ಪರಪ್ಪನ ಅಗ್ರಹಾರ ಜೀವನ ಸಾಕಾಗಿದೆ. ಜೈಲಿನಿಂದ ಹೊರ ಬರೋದಕ್ಕೆ ದಾಸನಿಗೆ ಬೇಲ್ ಬೇಕಾಗಿದೆ. ಆದ್ರೆ ಅದಕ್ಕಿನ್ನೂ ಒಂದು ವರ್ಷ ಕಾಯಬೇಕಿದೆ. ಅಷ್ಟರಲ್ಲಾಗಲೇ ದರ್ಶನ್ ಜೀವನದ ವಿಶೇಷ ದಿನವೊಂದು ಬಂದಾಗಿದೆ. ಆ ದಿನವೇ ಪತ್ನಿ ವಿಜಯಲಕ್ಷ್ಮಿಯ ಹೃದಯ ಒಡೆದಿದೆ. ದಚ್ಚು ಜೀವನದ ವಿಶೇಷ ದಿನದ ಕಹಾನಿ ಇಲ್ಲಿದೆ. ನಟ ದರ್ಶನ್ ದಂಪತಿ ಜೀವನದಲ್ಲಿ ಮಹತ್ವದ ದಿನ..! ನಟ ದರ್ಶನ್​​ಗೆ ಜೈಲು ಬದುಕು ಸಾಕಾಗಿದೆ.

ದಾಸನಿಗೆ ಒದ್ದಾಟ, ತೊಳಲಾಟ, ಗೋಳಾಟಗಳೆಲ್ಲಾ ಮುಗಿಯೋ ಹಾಗೆ ಕಾಣುತ್ತಿಲ್ಲ. ಯಾಕಂದ್ರೆ ಸುಪ್ರಿಂ ಕೋರ್ಟ್​ ಕೂಡ ಇನ್ನು ಒಂದು ವರ್ಷ ಜಾಮೀನು ಕೊಡೋದಕ್ಕೆ ಆಗಲ್ಲ ಎಂದಿದೆ. ಈ ಸಂಗಷ್ಟದ ಸುಳಿಯಲ್ಲಿರೋ ದಾಸನಿಗೆ ಈಗ ಮಹತ್ವದ ದಿನವೊಂದು ಬಂದಿದೆ. ಆ ದಿನದ ಒಳಗೇ ಜೈಲಿನಿಂದ ತನ್ನ ಪತಿ ಹೊರ ಬರುತ್ತಾರೆ ಅಂತ ಕಾಯುತ್ತಿದ್ದ ವಿಜಯಲಕ್ಷ್ಮೀಗೆ ಈಗ ಹೃದಯ ಒಡೆದಿದೆ. ನಟ ದರ್ಶನ್ ವಿಜಯಲಕ್ಷ್ಮೀಗೆ ಕಾಸಾ ಕಾಸ.. ಇವರಿಬ್ಬರು ಸತಿ ಪತಿಗಳಾಗಿ ಇಂದಿಗೆ ಬರೋಬ್ಬರಿ 23 ವರ್ಷ.

ಎಂತದ್ದೇ ಕಷ್ಟಗಳು ಎದುರಾದ್ರು, ಎದೆಗುಂದದೆ ಇಷ್ಟು ವರ್ಷಗಳಿಂದ ಸಂಸಾರದ ದೋಣಿಯನ್ನ ಮುನ್ನಡೆಸುತ್ತಿರೋ ದರ್ಶನ್​ ವಿಜಯಲಕ್ಷ್ಮೀಗೆ ಇದೇ ಮೊದಲ ಭಾರಿಗೆ ದೂರಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಬೇಕಿದೆ. ದರ್ಶನ್ ಜೈಲಲ್ಲಿದ್ರೆ, ಪತ್ನಿ ಮನೆಯಲ್ಲಿರಬೇಕಿದೆ. ದರ್ಶನ್​ಗೆ ಮತ್ತೊಂದು ಜನ್ಮ ಕೊಟ್ಟಾಕೆ ಅರ್ಧಾಂಗಿ ವಿಜಯಲಕ್ಷ್ಮೀ.. ದಾಸ ಏನೇ ತಪ್ಪು ಸರಿ ಮಾಡಿದ್ರು ಅದನ್ನೆಲ್ಲವನ್ನ ಸಂಬಾಳಿಸಿಕೊಂಡು ಹೋಗಿ ಸಂಸಾರ ಸಾಗಿಸಿರೋ ಹಣ್ಣು ವಿಜಯಲಕ್ಷ್ಮೀ.. ಹೀಗಾಗಿ ಜೀವನ ಕೊಟ್ಟ ಅರ್ಧಾಂಗಿಗಾಗಿ ಕಾರಾಗೃಹ ಎಸ್​ಪಿಗೆ ದಾಸ ಪತ್ರವೊಂದನ್ನ ಬರೆದಿದ್ದಾರೆ. ನನ್ನ ಪತ್ನಿ ಹಾಗು ಮಗನ ಜೊತೆ ಇಂದು ಮುಕ್ತವಾಗಿ ಮಾತನಾಡೋದಕ್ಕೆ ಅವಕಾಶ ಕಲ್ಪಿಸಿ ಅಂತ ಕೇಳಿದ್ದಾರೆ.

ಒಡೆದ ಹೃದಯದಲ್ಲಿ ಹೊರ ಬಂತು ವಿಜಯಲಕ್ಷ್ಮೀ ವಿರಹಾಗ್ನಿ

ನಟ ದರ್ಶನ್​​ಗೆ ಕಾನೂನು ಹೋರಾಟದಲ್ಲಿ ಪದೇ ಪದೇ ಹಿನ್ನಡೆ ಆಗ್ತಾ ಇದೆ. ಇದು ದಾಸನ ಕುಟುಂಬಕ್ಕೆ ದಾರಿ ಕಾಣದಂತೆ ಮಾಡಿದೆ. ದಿಕ್ಕು ತಪ್ಪಿದ್ದ ಪತಿಯನ್ನ ಹೇಗಾದ್ರು ಮಾಡಿ ಜೈಲಿನಿಂದ ಹೊರ ತರೋ ಪ್ರಯತ್ನ ಮಾಡುತ್ತಿರೋ ಪತ್ನಿ ವಿಜಯಲಕ್ಷ್ಮೀಗೆ ಈಗ ದಿಕ್ಕು ತೋಚದಂತಾಗಿದೆ. ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಭಾವುಕ ಪೋಸ್ಟ್ ಹಾಕಿದ್ದು, ದರ್ಶನ್ ಫೋಟೋ ಜೊತೆ ‘ಹಾರ್ಟ್ ಬ್ರೇಕ್’ ಎಮೋಜಿ ಹಾಕಿ ವಿರಹಾಗ್ನಿಯನ್ನ ವಿವರಿಸಿದ್ದಾರೆ. ಇದು ಅಳಿದು ಉಳಿದಿರೋ ದಾಸನ ಅಭಿಮಾನಿಗಳಲ್ಲಿ ಕಣ್ಣೀರ ಕೋಡಿ ಹರಿಸುತ್ತಿದೆ. ರ್ಶನ್​ ಜೀವನದಲ್ಲಿ ಎರಡು ಪ್ರಮುಖ ಘಟ್ಟ ಅಂದ್ರೆ ಒಂದು ತನ್ನ ಹುಟ್ಟು ಹಬ್ಬ. ಮತ್ತೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನ. ಈ ಎರಡನ್ನೂ ಅದ್ಧೂರಿಯಾಗಿ ಆಚರಿಸ್ತಾರೆ ದಾಸ. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್​ ಈ ಸಂಭ್ರಮದ ಘಳಿಗೆಗಳನ್ನ ಕಿತ್ತು ತಿನ್ನುತ್ತಿದೆ.

SSLC ಓದಿದ ದಾಸನಿಗೆ ಇಂಜಿನಿಯರ್ ವಿಜಯಲಕ್ಷ್ಮೀ ಸಿಕ್ಕಿದ್ಹೇಗೆ ಗೊತ್ತಾ..?

ನಟ ದರ್ಶನ್​ ವಿಧ್ಯಾಭ್ಯಾಸದಲ್ಲಿ ಶತ ದಡ್ಡ ಅಂತಾರಲ್ಲ ಆ ರೀತಿ ಅನ್ನಬಹುದೇನೋ.. ಯಾಕಂದ್ರೆ ಅಪ್ಪ ತೂಗುದೀಪ ಶ್ರೀನಿವಾಸ್​​ ದಚ್ಚುಗೆ ಎಷ್ಟೇ ಓದಿಸಿದ್ರು, ದಾಸ ಓದಿದ್ದು ಎಸ್​​ಎಸ್​​ಎಲ್​​​ ಸಿ ವರೆಗೆ ಮಾತ್ರ. ಆದ್ರೆ ದಾಸನ ಸಾಧನೆ ಮಾತ್ರ ದೊಡ್ಡದು. ಇಡೀ ಸಿನಿಮಾ ಜಗತ್ತೇ ದರ್ಶನ್ ರನ್ನ ತಿರುಗಿ ನೋಡುವಂತ ಬೆಳದವರು ದರ್ಶನ್. ಇಂತಹ ದಾಸನಿಗೆ ಜೊತೆಯಾಗಿದ್ದು ಮಾತ್ರ ಹೈಲಿ ಕ್ವಾಲಿಫೈ ಇಂಜಿನಿರಿಂಗ್ ಓದಿದ್ದ ಹುಡುಗಿ ವಿಜಯಲಕ್ಷ್ಮೀ. ಹೌದು ಬರೊಬ್ಬರಿ 23 ವರ್ಷಗಳ ಹಿಂದೆ ದರ್ಶನ್ ಹಾಗು ವಿಜಯಲಕ್ಷ್ಮೀ ಸತಿ ಪತಿ ಆದ್ರು. ಧರ್ಮಸ್ಥಳ ಪುಣ್ಯಕ್ಷೇತ್ರದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮೀ ಮದುವೆ ನಡೆದಿತ್ತು. 2003ರ ಮೇ 19ರ ಸೋಮವಾರ ಬೆಳಗ್ಗೆ 9.15ರಿಂದ 9.50ರ ವರೆಗಿನ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೈ ಹಿಡಿದಿದ್ರು ದಾಸ. ಇವರಿಬ್ಬರ ಲಗ್ನ ಪತ್ರಿಕೆ ಇತ್ತೀಚೆಗೆ ವೈರಲ್ ಆಗಿತ್ತು.

ದಾಸನ ಬೆಲೆಗೆ ಬಿದ್ದಿದ್ದೇಗೆ ಇಂಜಿನಿಯರ್ ವಿಜಯಲಕ್ಷ್ಮೀ.?

ನಿಮಗೆಲ್ಲಾ ಗೊತ್ತಿರೋ ಹಾಗೆ ದರ್ಶನ್ ಓದಿದ್ದು ಜಸ್ಟ್ ಎಸ್.ಎಸ್.ಎಲ್.ಸಿ. ಇದನ್ನ ಖುದ್ದು ದರ್ಶನ್ ಅನೇಕ ಕಡೆಗೆ ಹೇಳಿಕೊಂಡಿದ್ದಾರೆ. ಟೆಂಥ್ ಮುಗಿಸಿ ಓದಿನಲ್ಲಿ ಇನ್​​ಟ್ರೆಸ್ಟ್ ಕಳೆದುಕೊಂಡಿದ್ದ ದರ್ಶನ್, ಅಮ್ಮನ ಬಳಿ ಹೇಳಿ ನಿನಾಸಂನಲ್ಲಿ ರಂಗ ಶಿಕ್ಷಣ ಕಲಿಯೋದಕ್ಕೆ ಸೇರಿಕೊಂಡಿದ್ರು. ಆದ್ರೆ ವಿಜಯಲಕ್ಷ್ಮೀ ಇಂಜಿನಿಯರಿಂಗ್ ಪಧವಿಧರೆ. ಸೋ ದಾಸ SSLCಗೆ ಇಂಜಿನಿಯರಿಂಗ್ ಹುಡುಗಿ ಸಿಕಿದ್ದು ಹೇಗೆ ಅನ್ನೋ ಕುತೂಹಲ ತುಂಬಾ ಜನರಲ್ಲಿದೆ. ಹೌದು ದರ್ಶನ್ ಬೆಂಗಳೂರಿಗೆ ಬಂದು ಆಗಷ್ಟೇ ನಟನೆ ಶುರುಮಾಡಿದ್ರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸ್ತಾ ನಾಯಕನಟನಾಗುವ ತಯಾರಿಯಲ್ಲಿದ್ರು.

ಆಗ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದ ವಿಜಯಲಕ್ಷ್ಮೀ ಸಹ ಸ್ನೇಹಿತರೊಬ್ಬರ ಮೂಲಕ ಪರಿಚಯ ಅಗಿತ್ತು. ವಿಜಯಲಕ್ಷ್ಮೀಗೆ ಮೊದಲ ನೋಟದಲ್ಲೇ ಬೌಲ್ಡ್ ಆಗದ್ದ ದರ್ಶನ್, ಖುದ್ದು ಪ್ರಪೋಸ್ ಮಾಡಿ ಬುಲ್ ಬುಲ್ ಮಾತಾಡಕಿಲ್ವಾ ಅಂತ ಅಲೆದಿದ್ರಂತೆ. ಕೊನೆಗೆ ದಾಸನ ಈ ಗಟ್ಟಿ ಪ್ರೀತಿ ಬೆಟ್ಟದಂತಾಗಿ ವಿಜಯಲಕ್ಷ್ಮೀ ಮಂಜಿನಂತೆ ಕರಗಿದ್ರು. ಮುಂದೆ ಇಬ್ಬರ ಕುಟುಂಬವನ್ನ ಒಪ್ಪಿಸಿ ಧರ್ಮಸ್ಥಳದ ವಸಂತ್ ಮಹಲ್ ನಲ್ಲಿ ಸರಳವಾಗಿ ಮದುವೆ ಆದ್ರು. ವಿಶೇಷ ಅಂದ್ರೆ ವಿಜಯಲಕ್ಷ್ಮೀ ಕಾಲ್ಗುಣವೋ ಏನೋ ಮದುವೆ ಬಳಿಕ ದರ್ಶನ್ ಲೈಫೇ ಬದಲಾಯ್ತು. ನೋಡ್ ನೋಡ್ತಾನೇ ದರ್ಶನ್ ಕನ್ನಡದ ಸೂಪರ್ ಸ್ಟಾರ್ ಆಗಿ ಬೆಳೆದರು.

ಅಸಲಿಗೆ ದರ್ಶನ್ ಎಲ್ಲಿಯೂ ತಮ್ಮ ಲವ್ ಸ್ಟೋರಿ ಬಗ್ಗೆ ಡಿಟೈಲ್ ಆಗಿ ಹೇಳಿಲ್ಲ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗಲೂ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ್ರು. ಆಗ ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವೆ ಮನಸ್ತಾಪ ನಡೀತಾ ಇದ್ದಿದ್ದರಿಂದ ಪತ್ನಿ ಶೋಗೆ ಬಂದಿರಲಿಲ್ಲ. ವಿಕೇಂಡ್ ವಿಥ್ ರಮೇಶ್​ನಲ್ಲಿ ಎಲ್ಲಾ ಗುಟ್ಟು ಹೇಳಿದರೂ ಪ್ರೀತಿಯ ಗುಟ್ಟು ಮಾತ್ರ ರಟ್ಟು ಮಾಡಿರಲಿಲ್ಲ. ದರ್ಶನ್ ಹಿಟ್ ಮೇಲೆ ಹಿಟ್ ಕೊಡ್ತಾ ಕನ್ನಡದ ನಂ.1 ನಟನಾಗಿ ಬೆಳೆದರು. ಕೋಟಿ ಕೋಟಿ ಹಣ ಹರಿದುಬಂತು. ಆರ್ ಆರ್ ನಗರದಲ್ಲಿ ಮನೆ ಕಟ್ಟಿಸಿದ್ರು. ಮನೆ ಮುಂದೆ ಹತ್ತಾರು ಐಷಾರಾಮಿ ಕಾರುಗಳು ಬಂದವು. ದರ್ಶನ್-ವಿಜಯಲಕ್ಷ್ಮೀ ಪ್ರೀತಿಗೆ ಒಬ್ಬ ಮುದ್ದಾಗ ಮಗ ಕೂಡ ಹುಟ್ಟಿದ. ಎಲ್ಲವೂ ಚೆನ್ನಾಗೇ ಇತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಧಿಕಾ ಪಂಡಿತ್ ಸ್ಟೈಲಿಶ್ ಲುಕ್’ಗೆ ಬಾಂಗ್ಲಾದೇಶಿ ಫ್ಯಾನ್ಸ್ ಕೂಡ ಫಿದಾ ಆಗೋದ್ರೂ
ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ: Darshan Thoogudeepa ಪತ್ನಿ ವಿಜಯಲಕ್ಷ್ಮೀ