ಕಾಟೇರ ಸಿನಿಮಾ ಹಿಂದಿರುವ ಪರಿಶ್ರಮವನ್ನು ರಿವೀಲ್ ಮಾಡಿದ ನಿರ್ದೇಶಕ ತರುಣ್. ಓಲ್ಡ್ ಗೆಟಪ್ ಮಾಡಲು ಸಾಹಸ.....
ರಾಕ್‌ಲೈನ್ ವೆಂಟಕೇಶ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಟೇರ ಸಿನಿಮಾ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 100 ಕೋಟಿ ಕ್ಲಬ್ ಸೇರಲಿರುವ ಕಾಟೇರ ಚಿತ್ರದಲ್ಲಿ ದರ್ಶನ್ ಮತ್ತು ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸಖತ್ ಆಗಿ ಮಿಂಚಿದ್ದಾರೆ. ಚಿತ್ರಕಥೆ ಮತ್ತು ಇಬ್ಬರ ನಟನೆಯನ್ನು ಮೆಚ್ಚಿಕೊಂಡಿರುವ ವೀಕ್ಷಕರಿಗೆ ಗೊತ್ತಿರದ ವಿಚಾರವನ್ನು ತರುಣ್ ರಿವೀಲ್ ಮಾಡಿದ್ದಾರೆ. ಅದೇ ಓಲ್ಡ್ ಗೆಟಪ್.
ಹೌದು! ಚಿತ್ರದಲ್ಲಿ ನಟ ದರ್ಶನ್ ಎರಡು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು 70ರ ದಶಕದ ಲುಕ್ ಮತ್ತೊಂದು ವಯಸ್ಸಾಗಿರುವ ಲುಕ್. ಮೊದಲ ಸಲ ಈ ಎರಡೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರಿಗೆ ಇಷ್ಟ ಆಗಿದೆ. ಆದರೆ ದರ್ಶನ್ ಓಲ್ಡ್ ಲುಕ್ ಗೆಟಪ್‌ಗೆ ರೆಡಿಯಾಗಿ ತುಂಬಾ ಸಮಯ ತೆಗೆದುಕೊಂಡಿದ್ದಾರಂತೆ. 'ಕಾಟೇರ ಸಿನಿಮಾದಲ್ಲಿ ಹೊಸತನ ಟ್ರೈ ಮಾಡಬೇಕು ಅನ್ನೋ ಪ್ರಯತ್ನ ಪಟ್ಟರು. ಅದೇ ಓಲ್ಡ್ ಗೆಟಪ್. ಯಾಕಂದ್ರೆ ಹಿಂದೆಂದೂ ದರ್ಶನ್ ಓಲ್ಡ್ ಲುಕ್ ಕಾಣಿಸಿಕೊಂಡಿರಲಿಲ್ಲ ಈ ಸಲ ಟ್ರೈ ಮಾಡಿದ್ದರು. ಕೊನೆಗೆ ಓಕೆ ಆಗಿದ್ದೇ ಈಗ ತೆರೆಯಲ್ಲಿ ಕಾಣಿಸುತ್ತಿರುವ ಲುಕ್. ಇಡೀ ಚಿತ್ರತಂಡ ದರ್ಶನ್ ಈ ಲುಕ್ ಒಪ್ಪಿಕೊಂಡಿದೆ. ಮೇಕಪ್ ಹಾಕುವುದು ದೊಡ್ಡ ಚಾಲೆಂಜ್ ಆಗಿತ್ತು' ಎಂದು ತರುಣ್ ಹೇಳಿರುವುದಾಗಿ ಕನ್ನಡ ವೆಬ್ ಪೋರ್ಟಲ್ ಒಂದರಲ್ಲಿ ಸುದ್ದಿ ಮಾಡಿದ್ದಾರೆ.
ದುಬೈ ಹುಲಿ-ಹೆಬ್ಬಾವು ಜೊತೆ ನಟ ದರ್ಶನ್; ಪೋಟೋ ವೈರಲ್
'ಇನ್ನೊಂದು ವಯಸ್ಸಾಗಿರೋ ಲುಕ್ ಬೇಕು ಅಂತ ಬೇರೆ ಬೇರೆ ಲುಕ್‌ಗಳನ್ನು ಪ್ರಯತ್ನ ಮಾಡಲಾಗಿತ್ತು. ಕೊನೆಗೆ ಒಂದು ಲುಕ್ ಫೈನಲ್ ಆಗಿ ಲುಕ್ ಲಾಕ್ ಆಯ್ತು. ಆದರೆ ಈ ಲುಕ್ ಸಖತ್ ಚಾಲೆಂಜ್ ಆಗತ್ತು. ಮೇಕಪ್ ಹಾಕಿಕೊಳ್ಳುವುದಕ್ಕೆ ಎರಡು ಗಂಟೆ ಆಗೋದು. ಮೇಕಪ್ ತೆಗೆಯುವುದಕ್ಕೆ 45 ನಿಮಿಷ ಬೇಕಿತ್ತು. ಒಂದು ಯಂಗ್ ಲುಕ್ ಇದೆ ಮತ್ತೊಂದು ಓಲ್ಡ್ ಗೆಟಪ್ ಇದೆ. ಯಂಗ್ ಲುಕ್ ಪಟ ಪಟ ಅಂತ ಆಗೋಯ್ತು. ಆದರೆ ಓಲ್ಡ್ ಗೆಟಪ್ ಹಾಕಬೇಕಿದ್ದರೆ ಒಂದೂವರೆ ಗಂಟೆ ಸಮಯ ಬೇಕಿತ್ತು. ಯಾಂಕರೆ ಮುಖವೆಲ್ಲ ಸುಕ್ಕು ಮಾಡಬೇಕು. ಒಂದು ಲೋಷನ್ ಬರುತ್ತದೆ ಅದನ್ನು ಹಾಕಿದರೆ ಮಾತ್ರ ಮುಖದಲ್ಲಿ ಸುಕ್ಕು ಬರುವಂತೆ ಮಾಡುತ್ತದೆ' ಎಂದು ತರುಣ್ ಹೇಳಿದ್ದಾರೆ.
ಭಯ-ಭಕ್ತಿಯಿಂದ ಸಂಭಾಷಣೆ ಬರೆದ ಸಿನಿಮಾ ಕಾಟೇರ: ಮಾಸ್ತಿ ಜೊತೆ ಮಾತುಕತೆ
' ಓಲ್ಡ್ ಗೆಟಪ್‌ನಲ್ಲಿ ಇದ್ದಾ ಅವರು ಊಟ ಮಾಡುತ್ತಿರಲಿಲ್ಲ. ಕಾರಣ ಏನೆಂದರೆ ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಆ ಲುಕ್‌ನಲ್ಲಿ ಗಡ್ಡ ಮೀಸೆ ಎಲ್ಲಾ ಇತ್ತು. ಸರಿಯಾಗಿ ಊಟ ಮಾಡುವುದಕ್ಕೆ ಕಷ್ಟ ಅಂತ ಮಧ್ಯಾಹ್ನ ಊಟ ಬಿಟ್ಟೇ ಶೂಟಿಂಗ್ ಮಾಡೋರು' ಎಂದಿದ್ದಾರೆ ತರುಣ್.