ನೀವು, ನಾನು ಆಗಬೇಕು ಅನ್ನೋದೇ ಸಿನಿಮಾ: ಉಪೇಂದ್ರ

By Kannadaprabha News  |  First Published Jan 12, 2024, 10:15 AM IST

ಕೋಟಿಯಲ್ಲಿ ವೀಕ್ಷಣೆ ಪಡೆದ ಯುಐ ಸಿನಿಮಾ. ಲಹರಿ ಫಿಲಂ ಯುಟ್ಯೂಬ್‌ನಲ್ಲಿ ಟೀಸರ್ ಟ್ರೆಂಡಿಂಗ್‌ನಲ್ಲಿದೆ....


ಉಪೇಂದ್ರ ನಟನೆಯ ‘ಯೂಐ’ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್‌ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಮೂರೇ ದಿನಗಳಲ್ಲಿ ಈ ಟೀಸರ್‌ಗೆ ಬಹುತೇಕ ಎರಡೂವರೆ ಕೋಟಿ ವೀಕ್ಷಣೆ ಸಿಕ್ಕಿದೆ. ಲಹರಿ ಫಿಲಂಸ್‌ ಯೂಟ್ಯೂಬ್‌ನಲ್ಲಿ ಟೀಸರ್‌ ಟ್ರೆಡಿಂಗ್‌ನಲ್ಲಿದೆ.

ಟೀಸರ್‌ ಬಿಡುಗಡೆ ಬಳಿಕ ಉಪೇಂದ್ರ ‘ಯೂ ಐ’ ಸಿನಿಮಾ ಬಗ್ಗೆ ವಿವರಣೆ ನೀಡಿದ್ದಾರೆ. ‘ಯೂ, ಐ ಆಗಬೇಕು. ಅಂದರೆ ನೀವೆಲ್ಲರೂ ನಾನು ಆಗಬೇಕು. ಇದೇ ಸಿನಿಮಾದ ತಿರುಳು. ಈ ಸಿನಿಮಾ ಮಾಡಿರುವುದೇ ನೀವು ಮಾತನಾಡಬೇಕು ಅಂತ. ಸಿನಿಮಾ ಮಾಡಿದ ಮೇಲೆ ನಾವು ಮಾತನಾಡಬಾರದು. ನೀವು ಮಾತನಾಡಬೇಕು. ಮನುಷ್ಯನಿಗೆ ಮೂರು ಸ್ಟೇಜ್‍ ಬರುತ್ತಂತೆ. ಒಂದು ಸ್ಟೇಜ್‍ನಲ್ಲಿ ನಾನು ಸರಿ ಇದ್ದೀನಿ, ಪ್ರಪಂಚ ಸರಿ ಇಲ್ಲ ಎಂದೆನಿಸುತ್ತದೆ. ಇದು ಚಿಕ್ಕವಯಸ್ಸಿನಲ್ಲಿ ಬರುವ ಯೋಚನೆ. ಆಗ ಒಂದಿಷ್ಟು ಸಿನಿಮಾಗಳನ್ನು ಮಾಡಿದೆ. ಸ್ವಲ್ಪ ಮೆಚ್ಯುರಿಟಿ ಬರುತ್ತಿದ್ದಂತೆ, ನನ್ನಲ್ಲೇನೋ ಕೊರತೆ ಇದೆ, ಹೊರಗೆ ಎಲ್ಲವೂ ಸರಿ ಇದೆ ಎನಿಸಿತು. ಅದಕ್ಕೊಂದಿಷ್ಟು ಸಿನಿಮಾ ಮಾಡಿದೆ. ನಂತರ ನಾನು ಸರಿ ಇದ್ದೀನಿ, ಎಲ್ಲವೂ ಸರಿಯಾಗಿಯೇ ಇದೆ ಎಂಬ ಹಂತಕ್ಕೆ ಬಂದೆ. ಈ ಹೊತ್ತಿಗೆ ಸುಮ್ಮನೆ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಹೋದೆ. ಈಗ ನಿನಗಿನ್ನೂ ಕೆಲಸವಿದೆ, ನೀನೇನೋ ಮಾಡಬೇಕು ಅಂತ ಒಂದು ಶಕ್ತಿ ಈ ಸಿನಿಮಾ ಮಾಡಿಸಿದೆ’ ಎಂದು ಉಪೇಂದ್ರ ಹೇಳಿದ್ದಾರೆ.

Tap to resize

Latest Videos

AI ಯುಗದಲ್ಲಿ 'UI' ಪ್ರಪಂಚ ತೆರೆದಿಟ್ಟ ರಿಯಲ್ ಸ್ಟಾರ್: ಉಪೇಂದ್ರ ಪ್ರಕಾರ ಯುಐ ಅಂದ್ರೆ ಏನು ಗೊತ್ತಾ?

ಈ ವೇಳೆ ‘ಓಂ 2’ ಚಿತ್ರ ಮಾಡಬೇಕು ಎಂಬ ಒತ್ತಾಯದ ಬಗ್ಗೆ ಮಾತನಾಡಿದ ಅವರು, ‘ಸಿನಿಮಾ ಬಗ್ಗೆ ಅಜನೀಶ್‍ ಲೋಕನಾಥ್‍ ಎಕ್ಸ್‌ಪೆಕ್ಟ್ ದ ಅನ್‌ ಎಕ್ಸ್‌ಪೆಕ್ಟೆಡ್‌ ಎಂದು ಹೇಳಿದ್ದಾರೆ. ನಾನು ಎಕ್ಸ್‌ಪೆಕ್ಟೇಶನ್‌ ಈಸ್‌ ಇಂಜೂರಿಯಸ್‌ ಟು ಹೆಲ್ತ್‌’ ಎಂದು ಹೇಳಿದ್ದೆ. ಹಾಗಾಗಿ, ಈ ಸಿನಿಮಾ ಆಗಬೇಕಾದಾಗ ಖಂಡಿತಾ ಆಗುತ್ತದೆ’ ಎಂದರು.

ಹಾಲಿವುಡ್‌ ರೇಂಜ್‌ನಲ್ಲಿ ಉಪ್ಪಿಯ UI ಟೀಸರ್, ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ!

ಸಮಾರಂಭದಲ್ಲಿ ಪಬ್ಲಿಕ್‍ ಟಿವಿ ಮುಖ್ಯಸ್ಥ ಎಚ್‌ ಆರ್‌ ರಂಗನಾಥ್‍, ನಿರ್ಮಾಪಕ ಕೆ. ಮಂಜು, ಪ್ರಿಯಾಂಕಾ ಉಪೇಂದ್ರ, ಈ ಚಿತ್ರ ನಿರ್ಮಿಸಿದ ಲಹರಿ ವೇಲು, ಮನೋಹರ ನಾಯ್ಡು, ನವೀನ್ ಮನೋಹರನ್ ಹಾಜರಿದ್ದರು.

 

click me!