'ಕಾನೂನಿಗಿಂತ ಯಾರೂ ದೊಡ್ಡವರಲ್ಲ..' ದರ್ಶನ್ ಕೇಸ್ ಉಲ್ಲೇಖಿಸಿ ರಮ್ಯಾ ಪೋಸ್ಟ್!
Ramya on Darshan thoogudeepa ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೊನೆಗೂ ದರ್ಶನ್ ಆರೋಪಿಯಾಗಿರುವ ಕೊಲೆ ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ದರ್ಶನ್ ಕೇಸ್‌ನ ಜೊತೆ ಪ್ರಜ್ವಲ್ ರೇವಣ್ಣ ಹಾಗೂ ಬಿಸ್ ಯಡಿಯೂರಪ್ಪ ಅವರ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿಕೊಂಡಿದ್ದಾರೆ.
ಬೆಂಗಳೂರು (ಜೂ.13): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿಚಾರವಾಗಿ ಕೊನೆಗೂ ಸಿನಿಮಾರಂಗದ ಸ್ಟಾರ್ ನಟಿ ರಮ್ಯಾ ಮಾತನಾಡಿದ್ದಾರೆ. ಈ ಕುರಿತಾಗಿ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಸ್ಟೋರಿ ಹಂಚಿಕೊಂಡಿರುವ ರಮ್ಯಾ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ತಮ್ಮ ಜೀವನದಲ್ಲಿ ಟ್ರೋಲ್ ಮಾಡುವವರಿದಂದ ಎದುರಿಸಿದ ಕಷ್ಟಗಳು ಹಾಗೂ ಅದನ್ನು ಎದುರಿಸಿದ ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ. ಕೊನೆಯಲ್ಲಿ ರೇಣುಕಾಸ್ವಾಮಿಯ ಸಾವಿಗೆ ನ್ಯಾಯ ದೊರಕಿಸಿಕೊಡಿ ಎನ್ನುವ ಹ್ಯಾಶ್ ಟ್ಯಾಗ್‌ಅನ್ನೂ ರಮ್ಯಾ ಬಳಸಿದ್ದಾರೆ.
ರಮ್ಯಾ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಬರೆದ ವಿವರ ಇಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಎನ್ನುವ ಆಪ್ಶನ್ ನೀಡಿರುವುದರ ಹಿಂದೆ ಕಾರಣವಿದೆ. ಬ್ಲಾಕ್ ಮಾಡಿದ್ರೂ ನಿಮ್ಮನ್ನ ಟ್ರೋಲ್ ಮಾಡ್ತಾ ಇದ್ದಾರೆ ಎಂದಾದಲ್ಲಿ ನೀವು ದೂರು ಕೊಡುವ ಅವಕಾಶವೂ ಇದೆ. ಟ್ರೋಲಿಗರು ನನ್ನ ಮೇಲೆ ಏನೆನೆಲ್ಲಾ ಮಾತನಾಡಿದರು. ಅಸಹ್ಯ ಭಾಷೆಗಳನ್ನು ಬಳಸಿ ನಿರಂತರವಾಗಿ ನನ್ನ ಟ್ರೋಲ್ ಮಾಡಿದರು. ನಾನೊಬ್ಬಳಂತಲ್ಲ. ಬೇರೆ ನಟ-ನಟಿಯರನ್ನೂ ಇವರು ಟ್ರೋಲ್ ಮಾಡಿದ್ದಾರೆ. ಹೀರೋ ಹಾಗೂ ಹೀರೋಯಿನ್‌ಗಳ ಮಕ್ಕಳು ಮತ್ತು ಪತ್ನಿಯರನ್ನೂ ಕೂಡ ಬಿಟ್ಟಿಲ್ಲ. ನಾವು ಎಂಥಾ ಕೆಟ್ಟ ಸಮಾಜದಲ್ಲಿ ಬದುಕಿದ್ದೇವೆ. ದೇಶದ ಕಾನೂನು ಪಾಲಿಸುವಂಥ ವ್ಯಕ್ತಿಯಾಗಿ ನಾನು ಇವರ ವಿರುದ್ಧ ಕೇಸ್‌ಗಳನ್ನು ದಾಖಲು ಮಾಡಿದ್ದೇನೆ.ಕೆಲವೊಮ್ಮೆ ಟ್ರೋಲ್ ಮಾಡುವ ವ್ಯಕ್ತಿಗಳಿಗೆ ಪೊಲೀಸರು ನೀಡುವ ಸಣ್ಣ ಪ್ರಮಾಣದ ವಾರ್ನಿಂಗ್ ಕೂಡ ಸಾಕಾಗುತ್ತದೆ. ಆ ಬಳಿಕ ನಾನೂ ಕೂಡ ಅವರ ಮೇಲೆ ಹಾಕಲಾಗಿದ್ದ ಕೇಸ್‌ಅನ್ನು ವಾಪಾಸ್ ತೆಗೆದುಕೊಂಡಿದ್ದೇನೆ.
ಟ್ರೋಲ್ ಮಾಡುತ್ತಾರಲ್ಲ ಈ ವ್ಯಕ್ತಿಗಳು ಹೆಚ್ಚಿನವರು ಇನ್ನೂ ಯುವ ಜನಾಂಗ. ಅವರಿಗೆ ಮುಂದೆ ಭವಿಷ್ಯವಿದೆ. ಆದರೆ, ಅನಾಮಿಕ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಅವರು ಟ್ರೋಲ್ ಮಾಡುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರಿಗೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ನಿಮ್ಮನ್ನು ಟ್ರೋಲ್ ಮಾಡಿದವರನ್ನು ಹುಡುಕಿಕೊಂಡು ಹೋಗಿ, ಕೊಲೆ ಮಾಡುವುದನ್ನು ಯಾರೂ ಮಾಡಬಾರದು. ನ್ಯಾಯ ಸಿಗುತ್ತದೆಯೋ ಇಲ್ಲವೋ, ಇಂಥದ್ದಕ್ಕೆಲ್ಲ ಒಂದು ಸಣ್ಣ ದೂರು ಸಾಕಾಗುತ್ತದೆ.
ಈ ಹಂತದಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಪೊಲೀಸರ ಬಗ್ಗೆ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದೊಂದು ಥ್ಯಾಂಕ್‌ಲೆಸ್ ಜಾಬ್. ಆದರೆ, ತಮ್ಮ ಮಿತಿಯಲ್ಲಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ನಾಯಕರ ಒತ್ತಡಕ್ಕೆ ಅವರು ಕುಗ್ಗಬಾರದು ಎಂದು ನಾನು ಬಯಸುತ್ತೇನೆ. ಆ ಮೂಲ ದೇಶದ ಕಾನೂನಿನ ಮೇಲೆ ಸಾಮಾನ್ಯ ಜರಿಗೆ ವಿಶ್ವಾಸ ಮೂಡಿಸುವಂಥ ಕೆಲಸ ಮಾಡಬೇಕು ಎಂದು ರಮ್ಯಾ ಬರೆದಿದ್ದಾರೆ. ಅದರೊಂದಿಗೆ ಜಸ್ಟೀಸ್ ಫಾರ್ ರೇಣುಕಾಸ್ವಾಮಿ, ದರ್ಶನ್, ಯಡಿಯೂರಪ್ಪ ಹಾಗೂ ಪಜ್ವಲ್ ರೇವಣ್ಣ ಹ್ಯಾಶ್‌ಟ್ಯಾಗ್‌ಅನ್ನು ಅವರು ಬಳಸಿದ್ದಾರೆ.
'ನನಗೆ ಶಾಪ ಹಾಕಿದ್ರೆ ಯಾವ ಬದಲಾವಣೆಯೂ ಆಗಲ್ಲ..' ದರ್ಶನ್ ಪುತ್ರ ವಿನೀಶ್ ಪೋಸ್ಟ್!
ಇಂದು ಮಧ್ಯಾಹ್ನದ ವೇಳೆಗೆ ಟ್ವೀಟ್ ಮಾಡಿದ್ದ ರಮ್ಯಾ, ಕರ್ನಾಟಕ ಪೊಲೀಸರಿಗೆ ಸಲ್ಯೂಟ್ ಎಂದು ಬರೆದುಕೊಂಡಿದ್ದರು. ಆದರೆ, ಯಾವ ವಿಚಾರವಾಗಿ ಅವರು ಟ್ವೀಟ್ ಮಾಡಿದ್ದರು ಎನ್ನುವುದು ಗೊತ್ತಾಗಿರಲಿಲ್ಲ. ರಾತ್ರಿಯ ವೇಳೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ದರ್ಶನ್ ಕೇಸ್ ವಿಚಾರವಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಆರೋಪಿಗಳಿಗೆ ಠಾಣೆಯಲ್ಲೇ ಸ್ಮೋಕಿಂಗ್ ಜೋನ್? 'ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು..' ಮಾತು ಸಾಬೀತಾಯ್ತು!