'ಕೋಟಿ' ಸಿನಿಮಾದ ಸರ್ಪ್ರೈಸಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನಂದರೆ, ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಜೊತೆ ದುನಿಯಾ ವಿಜಯ್ ಕೂಡ ಕಾಣಿಸಿಕೊಂಡಿದ್ದಾರೆ.
ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಪಕ್ಕಾ ಫ್ಯಾಮಿಲಿ ಇಷ್ಟ ಪಡುವ ಕಮರ್ಷಿಯಲ್ ಸಿನಿಮಾ ಇದಾಗಿದೆ. 'ಕೋಟಿ' ನೋಡಿದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಈ ಸಿನಿಮಾವನ್ನು ನೋಡಬಹುದು ಅಂತ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ 'ಕೋಟಿ' ಸಿನಿಮಾದ ಸರ್ಪ್ರೈಸಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅದೇನಂದರೆ, ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಜೊತೆ ದುನಿಯಾ ವಿಜಯ್ ಕೂಡ ಕಾಣಿಸಿಕೊಂಡಿದ್ದಾರೆ. 'ಕೋಟಿ' ಸಿನಿಮಾದಲ್ಲಿನ ದುನಿಯಾ ವಿಜಯ್ ಪಾತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪರಮೇಶ್ವರ್ ಗುಂಡ್ಕಲ್ ನಿರ್ದೇಶಿಸಿದ ಮೊದಲ ಸಿನಿಮಾ 'ಕೋಟಿ'ಯಲ್ಲಿ ದುನಿಯಾ ವಿಜಯ್ ಎಂಟ್ರಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಧನಂಜಯ್, ತಾರಾ, ರಮೇಶ್ ಇಂದಿರಾ ಕಾಂಬಿನೇಷನ್ ಸಿನಿಮಾದಲ್ಲಿ ಎಂಗೇಜಿಂಗ್ ಆಗಿದೆ. ಇದರ ಜೊತೆನೇ 'ಕೋಟಿ'ಯ ಕ್ಲೈಮ್ಯಾಕ್ಸ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜೊತೆಗೆ 'ದುನಿಯಾ ವಿಜಯ್' ವಿಶೇಷ ಪಾತ್ರ ಪ್ರೇಕ್ಷಕರಿಗೆ ಕಿಕ್ ಕೊಡಲು ಶುರು ಮಾಡಿದೆ.
ಚಿತ್ರದ ಕತೆ ನನ್ನನ್ನು ತೀವ್ರವಾಗಿ ಕಾಡಿತು: ಪರಮ್, ಧನಂಜಯ್ ಜೋಡಿಯ 'ಕೋಟಿ' ಕನಸು
ಧನಂಜಯ್ ಪಾತ್ರದ ತಂದೆಯ ಪಾತ್ರದಲ್ಲಿ ದುನಿಯಾ ವಿಜಯ್ ಅಚ್ಚರಿದಾಯಕವಾಗಿ ಕಾಣಿಸಿಕೊಂಡಿದ್ದಾರೆ. ಮಹತ್ವದ ಘಟ್ಟದಲ್ಲಿ ಬರುವ ದುನಿಯಾ ವಿಜಯ್ ಅವರ ಭಾವಪೂರ್ಣ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಪರಮ್ ನಿರ್ದೇಶನದ, ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಫ್ಯಾಮಿಲ್ ಎಂಟರ್‌ಟೇನರ್ ಆಗಿ ಗುರುತಿಸಿಕೊಂಡಿದ್ದು, ಈ ಸಿನಿಮಾದ ಮಧ್ಯಮ ವರ್ಗದ ಒಬ್ಬ ಬಡ ತಂದೆಯ ಪಾತ್ರದಲ್ಲಿ ದುನಿಯಾ ವಿಜಯ್ ಆವರಿಸಿಕೊಳ್ಳುವಂತೆ ನಟಿಸಿದ್ದಾರೆ. ಅವರ ಪಾತ್ರ ಬಹುತೇಕ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ.
ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿ ಬರುತ್ತಿರುವುದರಿಂದ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ‘ಕೋಟಿ ಸಿನಿಮಾದಲ್ಲಿ ದುನಿಯಾ ವಿಜಯ್ ಬರುವ ದೃಶ್ಯ ನನಗೆ ತುಂಬಾ ಇಷ್ಟ. ಕೋಟಿ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ನೀಜಕ್ಕೂ ವಿಶೇಷವಾದದ್ದು’ ಎಂದು ನಿರ್ದೇಶಕ ಪರಮ್ ಹೇಳಿದ್ದಾರೆ. ಇನ್ನು ದುನಿಯಾ ವಿಜಯ್ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ಸಲಗ' ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.
ಡಾಲಿ ಧನಂಜಯ್ ಅವರ ಕೆರಿಯರ್‌ನಲ್ಲಿ ಮೈಲುಗಲ್ಲಾಗುವ ಸಿನಿಮಾ 'ಕೋಟಿ': ಪರಮೇಶ್ವರ್ ಗುಂಡ್ಕಲ್
ಈಗ ಡಾಲಿ ಸಿನಿಮಾದಲ್ಲಿ ದುನಿಯಾ ವಿಜಯ್ ಎಮೋಷನಲ್ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಇವರೊಂದಿಗೆ ಖಳನಾಯಕನಾಗಿ ರಮೇಶ್ ಇಂದಿರಾ ಮೆಚ್ಚುಗೆ ಗಳಿಸಿದ್ದಾರೆ. ಹಾಗೇ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ನಟಿಸಿದ್ದಾರೆ.