
ಬೆಂಗಳೂರು(ಜೂ.22): ಪಿಎಂ ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ ಅವರು 'ಡಿ ಗ್ಯಾಂಗ್' ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಶೀರ್ಷಿಕೆಯನ್ನು ನೋಂದಣಿ ಮಾಡಿಸಿಕೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫಿಲ್ಮ್ ಛೇಂಬರ್ 'ಡಿ ಗ್ಯಾಂಗ್' ಶೀರ್ಷಿಕೆ ನೀಡಲು ನಿರಾಕರಿಸಿದೆ.
ಈ ಕುರಿತು ಮಾತನಾಡಿರುವ 'ಡಿ ಗ್ಯಾಂಗ್' ನಿರ್ದೇಶಕ ರಾಕಿ ಸೋಮಿ, 'ಡಿ ಗ್ಯಾಂಗ್ ಹೆಸರಿನಲ್ಲಿ ನಾನು ಎರಡು ವರ್ಷಗಳ ಹಿಂದೆಯೇ ಹಾಡನ್ನು ನಿರ್ದೇಶಿಸಿದ್ದು, ಅದು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಇದೆ. ಇದೇ ಹೆಸರಿನ ಮೇಲೆ ಸಿನಿಮಾ ಮಾಡುವುದಕ್ಕೆ ಆಗಿನಿಂದಲೂ ತಯಾರಿ ಮಾಡಿಕೊಳ್ಳುತ್ತಿದ್ದೆ. ಈಗ ದರ್ಶನ್ ಬಂಧನದ ಹಿನ್ನೆಲೆಯಲ್ಲಿ 'ಡಿ ಗ್ಯಾಂಗ್' ಹೆಸರು ಸದ್ದು ಮಾಡುತ್ತಿರುವುದರಿಂದ ಬೇರೆಯಾರಾದರೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದುಕೊಂಡು ಶುಕ್ರವಾರ ಟೈಟಲ್ ನೋಂದಣಿಗೆ ಹೋಗಿದ್ದೆ. ಆದರೆ, ವಾಣಿಜ್ಯ ಮಂಡಳಿ ನಿರಾಕರಿಸಿದೆ. ಆದರೆ, 'ಡಿ ಗ್ಯಾಂಗ್' ಹೆಸರಿಗೂ ಈಗಿನ ಬೆಳವಣಿಗೆಗಳಿಗೆ ಯಾವುದೇ ಸಂಬಂಧವಿಲ್ಲ. ಇದನ್ನು ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಹೇಳಿದ್ದೇನೆ' ಎಂದರು.
ಹೇಗಿತ್ತು ಜೈಲು ಹಕ್ಕಿ ಪವಿತ್ರಾ ಗೌಡ ಮೊದಲ ದಿನ..? ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಖೈದಿ ನಂ .6024!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ ಅವರಿಂದ ಡಿ ಗ್ಯಾಂಗ್ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಡಿ ಗ್ಯಾಂಗ್ ಎಂದರೆ ದರ್ಶನ್ ಅಂತಲೇ ಬರುವುದರಿಂದ, ಅಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೂ ಡಿ ಗ್ಯಾಂಗ್ ಅಂತಲೇ ಹೇಳುತ್ತಿರುವುದರಿಂದ ಶೀರ್ಷಿಕೆಯನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದೇನೆ' ಎಂದು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.