ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮಗು ಬಗ್ಗೆ ಮಾತನಾಡಿದ ಮಿಲನಾ, ಡಾರ್ಲಿಂಗ್ ಕೃಷ್ಣ!

Suvarna News   | Asianet News
Published : Feb 17, 2022, 12:45 PM IST
ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮಗು ಬಗ್ಗೆ ಮಾತನಾಡಿದ ಮಿಲನಾ, ಡಾರ್ಲಿಂಗ್ ಕೃಷ್ಣ!

ಸಾರಾಂಶ

ಲವ್ ಮಾಕ್ಟೇಲ್ 2 ಸಿನಿಮಾ ನೋಡಿದವರಿಗೆ ಡಾರ್ಲಿಂಗ್ ಕೃಷ್ಣ ಮತ್ತು ಮಗುವಿನ ಬಾಂಡ್‌ ಬಗ್ಗೆ ತಿಳಿಯುತ್ತದೆ. ಈಗ ಅವರ ರಿಯಲ್ ಲೈಫ್‌ನಲ್ಲಿ ಮಗು ಎಂಟ್ರಿ ಯಾವಾಗ?

ಇಡೀ ಕನ್ನಡ ಚಿತ್ರರಂಗ (Sandalwood) ಮೆಚ್ಚಿ ಕೊಂಡಾಡುತ್ತಿರುವ ಸಿನಿಮಾ ಲವ್ ಮಾಕ್ಟೇಲ್ 2 (Love Mocktail 2). ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪತ್ನಿ ಮಿಲನಾ ನಾಗರಾಜ್ (Milana Nagaraj)  ಬಂಡವಾಳ ಹಾಕಿದ್ದಾರೆ. ಕ್ರೈಂ ಥ್ರಿಲ್ಲರ್ (Crime Thriller) ಸಿನಿಮಾಗಳನ್ನು ಭಾಗ ಒಂದು, ಭಾಗ ಎರಡು ಅಂತ ಮಾಡಬಹುದು. ಆದರೆ ಲವ್ ಸ್ಟೋರಿಗೆ (Love story) ಹೇಗೆ?ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಈ ಜೋಡಿ ಉತ್ತರ ಕೊಟ್ಟಿದೆ. ಹಾಕಿದ ಬಂಡವಾಳವನ್ನು ಮೂರೇ ದಿನಗಳಲ್ಲಿ ತೆಗೆದುಕೊಂಡಿರುವ ಈ ಪವರ್ ಕಪಲ್‌ಗೆ ನಿರೂಪಕಿ ಪವರ್‌ಫುಲ್ ಪ್ರಶ್ನೆ ಕೇಳಿದ್ದಾರೆ.

ನಟ ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ನಟನೆಯ ಬೈಟು ಲವ್ ಸ್ಟೋರಿ (Bytwo Love) ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಿಲನಾ ನಾಗರಾಜ್‌ ಮತ್ತು ಕೃಷ್ಣ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. 'ನಾನು ನಿರ್ದೇಶಕ ಸಂತು ಸರ್‌ನ ಎಷ್ಟು ಸಲ ಭೇಟಿ ಮಾಡಿದ್ದೀನಿ, ಅಷ್ಟು ಸಲ ಅವರ ಕಥೆಯನ್ನು ಕೇಳಿದ್ದೇನೋ ಗೊತ್ತಿಲ್ಲ. ಕಥೆ ಹೇಳುವ ರೀತಿ ಮತ್ತು ಅವರ ಎನರ್ಜಿ ಅದ್ಭುತಾವಗಿರುತ್ತದೆ. ಈ ಸಿನಿಮಾದ ಶೋ ರೀಲ್ ನಾನು ನೋಡಿದ್ದೆ, ಮೊದಲು ಬಿಡುಗಡೆಯಾಗಿದ್ದ ಪೋಸ್ಟರ್‌ ಅದ್ಭುತವಾಗಿದ್ದು ಅದರಲ್ಲಿ ಒಂದು ಮಗುವನ್ನು ನೋಡಿದೆ. ಆಮೇಲೆ ಟ್ರೈಲರ್ ನೋಡಿದ್ದು, ನಿರೀಕ್ಷೆ ಹೆಚ್ಚಾಗಿದೆ. ಶ್ರೀಲೀಲಾ ಅವರೇ ಮುದ್ದಾಗಿ ಕಾಣಿಸುತ್ತಾರೆ ಅವರ ಜೊತೆಗೆ ಈಗ ಒಂದು ಮಗುವಿದೆ,' ಎಂದು ಮಿಲನಾ ನಾಗರಾಜ್ ಮಾತನಾಡಿದ್ದಾರೆ.

'ಸಂತು ಒಂದು ಕಥೆ ಹೇಳಲು ಬಂದಿದ್ರು. ಆಗ ನಾನು ಅವರಿಗೆ ಒಂದು ಟ್ರೈಲರ್ ತೋರಿಸಿದೆ. ಆಗ ಅವರೂ ನನಗೆ ಒಂದು ಟ್ರೈಲರ್ ತೋರಿಸಿದ್ದರು. ಅದೇ ಬೈಟು ಲವ್. 5-6 ಸಿಮಿಷದಲ್ಲಿ ಒಂದು ಫುಲ್ ಕಥೆ ನನಗೆ ಹೇಳಿದ್ದರು. ಅವರಿಗೆ ಒಂದಿರುವ ಹೊಸ ಯೋಚನೆ ಇದು. ಇದುವರೆಗೂ ನಾನು ಎಲ್ಲಿಯೂ ನೋಡಿರಲಿಲ್ಲ. ಎಷ್ಟು ಮನೋರಂಜನೆ ಇದೆಯೋ, ಅಷ್ಟೇ ಸೂಕ್ಷ್ಮವಾಗಿರುವ ವಿಚಾರಗಳನ್ನು ಹೇಳಿದ್ದಾರೆ. ಧನ್ವೀರ್ ಮತ್ತು ಶ್ರೀಲೀಲಾಗೆ ವೃತ್ತಿ ಜೀವನದಲ್ಲಿ ಹೆಚ್ಚಿಗೆ ಸ್ಕೋಪ್ ಕೊಡುವ ಪಾತ್ರಗಳು ಸಿಕ್ಕಿವೆ. ನನಗೆ ಒಂದು ಕಥೆ ಮಾಡುವುದೇ ಕಷ್ಟ. ಸಂತು ಅವರ ಬಳಿ 30 ಕಥೆಗಳು ಇವೆ. ಇಡೀ ತಂಡಕ್ಕೆ ವಿಶ್ ಮಾಡ್ತೀನಿ,' ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ. 

ಬ್ಲಾಕ್‌ನಲ್ಲಿ ಟಿಕೆಟ್‌ ತಗೊಂಡು 'ಲವ್ ಮಾಕ್ಟೇಲ್ 2' ನೋಡಿದೆ: Darling Krishna

'ಧನ್ವೀರ್ ಮತ್ತು ಲೀಲಾ ಕ್ಯೂಟ್ ಕಪಲ್ ಅಂತ ಹೇಳಿದ್ರಿ. ಆಗ ಮಿಲನಾ ಹೇಳಿದರು, ಅವರಿಬ್ಬರೂ youngester ಅವರ ಕೈಯಲ್ಲಿ ಒಂದು ಮಗು ಅಂತ. ಮಗುವನ್ನು ಸಂಭಾಳಿಸುವುದು ಅವರಿಗೆ ದೊಡ್ಡ ಚಾಲೆಂಜ್ ಅಗಿತ್ತು. ಆದರೆ ಮಿಲನಾ ಅವರನ್ನು ನೋಡಿದರೆ ಮಗು ಜೊತೆ ಚೆನ್ನಾಗಿರುತ್ತಾರೆ ಅನಿಸುತ್ತದೆ. ಲವ್ ಮಾಕ್ಟೇಲ್ 3 ರಿಲೀಸ್ ಆಗುವ ಸಮಯದಲ್ಲಿ ನೀವು ಮೂರು ಜನ ಬರುವ ಸಮಯ ಹತ್ತಿರದಲ್ಲಿದೆ,' ಎಂದು ನಿರೂಪಕಿ ಅನುಶ್ರೀ ಹೇಳಿದಾಗ. ಮಿಲನಾ ನಗುತ್ತಲೇ ನನಗೆ ಯಾವ ಅನುಭವವೂ ಇಲ್ಲ ಎಂದು ಹೇಳಿದ್ದಾರೆ.

Valentine's Day ಜೊತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕೃಷ್ಣ-ಮಿಲನಾ ಜೋಡಿ!

ಸಿನಿಮಾದಲ್ಲಿ ನಟಿಸಿರುವ ಮಗು ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಆರವ್‌ನನ್ನು ವೇದಿಕೆ ಮೇಲೆ ಕರೆಯಿಸಿ ಮಿಲನಾ ಮತ್ತು ಡಾರ್ಲಿಂಗ್ ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ಪರೀಕ್ಷೆ ಮಾಡಲಾಗಿತ್ತು. 'ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಮಕ್ಕಳ ಜೊತೆ ನನ್ನ ದೃಶ್ಯ ಇದೆ. ಆಗ ನಾನು ಹೇಳ್ಬಿಟ್ಟೆ ಲೈಫಲ್ಲಿ ನಾನು ಮಕ್ಕಳ ಜೊತೆ ಮಾತ್ರ ಸಿನಿಮಾ ಮಾಡುವುದಿಲ್ಲ ಅಂತ,' ಎಂದು ಕೃಷ್ಣ ಹೇಳುತ್ತಾರೆ. 'ಒಂದೇ ದಿನ ಮಗುವಿನ ಜೊತೆ ಚಿತ್ರೀಕರಣ ಇದ್ದಿದ್ದು. ಆಗಲೇ ನಿರ್ಧಾರ ಮಾಡಿದ್ವಿ ಮತ್ತೆ ಮಗು ಪಾತ್ರ ಬರೆದರೆ, ನಾವಿಬ್ಬರೂ ಸಪರೇಟ್ ಆಗ್ಬಿಡ್ತೀವಿ ಅಂತ. ಚಿತ್ರೀಕರಣ ಮಾಡುವಾಗ ನಾನು ಮಗುವಿನ ಕಾಲು ಹಿಡಿದುಕೊಂಡು ಕೂತಿದ್ದೆ. ಎಲ್ಲಿ ಓಡಿ ಹೋಗುತ್ತಾಳೋ ಅಂತ,' ಎಂದು ಮಿಲನಾ ಮಕ್ಕಳೊಂದಿಗೆ ಚಿತ್ರೀಕರಣ ಮಾಡುವ ಅನುಭವ ಹಂಚಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?