ಕೃಷ್ಣ- ಮಿಲನ ಚಿತ್ರಕತೆ ಮುಂದುವರಿದಿದೆ; ಎರಡನೇ ಚಿತ್ರಕ್ಕೆ ತಯಾರಾಗಿದೆ ನವ ಜೋಡಿ!

By Kannadaprabha News  |  First Published May 22, 2020, 11:49 AM IST

ಮನೆಯಲ್ಲಿದ್ದುಕೊಂಡೇ ತಮ್ಮ ಎರಡನೇ ಚಿತ್ರ ‘ಲವ್‌ ಮಾಕ್‌ಟೇಲ್‌ 2’ ತಯಾರಿ ನಡೆಸಿದ್ದಾರೆ ಮದರಂಗಿ ಕೃಷ್ಣ. ಲಾಕ್‌ಡೌನ್‌ ಟೈಮ್‌ನಲ್ಲಿ ಸ್ಕ್ರೀಪ್ಟ್‌ ಕುರಿತು ಚರ್ಚೆ ಮಾಡಿ, ಅದಕ್ಕೊಂದು ರೂಪಕೊಟ್ಟು, ಶೂಟಿಂಗ್‌ನ ಅನುಮತಿಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ತಮ್ಮ ಲಾಕ್‌ಡೌನ್‌ ದಿನಗಳು, ಸಿನಿಮಾ ತಯಾರಿ ಬಗ್ಗೆ ಒಂದಷ್ಟುಮಾತನಾಡಿದ್ದಾರೆ ಕೃಷ್ಣ.


ಕೆಪಿ

ಹೇಗಿದೆ ಸರ್‌ ಜೀವನ?

Latest Videos

undefined

ಮಾಮೂಲಿ, ಲಾಕ್‌ಡೌನ್‌ ಆದ ಮೇಲೆ ಓಡುತ್ತಿದ್ದ ಲೈಫ್‌ನಲ್ಲಿ ಕೊಂಚ ಬ್ರೇಕ್‌ ಸಿಕ್ಕಂತೆ ಆಗಿದೆ. ಈ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಂಡು ನಮ್ಮ ‘ಲವ್‌ ಮಾಕ್‌ಟೇಲ್‌ 2’ ಚಿತ್ರದ ಸ್ಕಿ್ರಪ್ಟ್‌ ಡೆವಲಪ್‌ ಮಾಡಿಕೊಳ್ಳುತ್ತಿದ್ದೇವೆ. ‘ಲವ್‌ ಮಾಕ್‌ಟೇಲ್‌’ಗೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದ್ದರಿಂದ 2ನೇ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಆ ನಿರೀಕ್ಷೆಗಳೇ ನಮ್ಮ ಜವಾಬ್ದಾರಿಯನ್ನೂ ಹೆಚ್ಚಿಸಿವೆ. ಈ ನಿಟ್ಟಿನಲ್ಲಿ ಕಾರ್ಯ ಸಾಗುತ್ತಿದೆ.

ಇದು ಶುದ್ಧವಾದ ಪ್ರೀತಿಯ ಮಾಕ್‌ಟೇಲ್‌: ಮದರಂಗಿ ಕೃಷ್ಣ

ಮತ್ತಿನ್ನೇನ್‌ ಮಾಡಿದ್ರಿ ಈ ಟೈಮ್‌ನಲ್ಲಿ?

ಮೊದಲೆಲ್ಲಾ ಮೈಸೂರಿನ ನನ್ನ ಮನೆಗೆ ಬಂದಾಗ ಹೆಚ್ಚು ಎಂದರೆ ಮೂರು ನಾಲ್ಕು ದಿನ ಇರುತ್ತಿದ್ದೆ. ಆದರ ಈಗ ನಲ್ವತ್ತಕ್ಕೂ ಹೆಚ್ಚು ದಿನ ಮನೆಯಲ್ಲೇ ಇದ್ದೆ. ಇಲ್ಲಿದ್ದಾಗ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಮನೆಯವರೊಂದಿಗೇ ಸಮಯ ಕಳೆದೆ. ಮನೆಯವರೊಂದಿಗೆ ಸೇರಿ ಆಟವಾಡಿದೆ, ನಲಿದೆ. ಇವೆಲ್ಲಾ ಒಂದು ರೀತಿಯಲ್ಲಿ ಹೊಸತನವನ್ನು ನನ್ನ ಬದುಕಿಗೆ ಸೇರಿಸಿದವು.

ಇದೇ ವೇಳೆ ಮಿಲನ ನಾಗರಾಜ್‌ ಹಾಸನದಲ್ಲಿ ಇದ್ದರು, ನಾನು ಇಲ್ಲಿದ್ದೆ. ಆದರೂ ಫೋನ್‌ನಲ್ಲಿ ಮಾತನಾಡಿಕೊಂಡು ಸ್ಕಿ್ರಪ್ಟ್‌ ಡಿಸ್ಕಷನ್‌ ಮಾಡಿದೆವು. ಆದರೆ ಹೆಚ್ಚಾಗಿ ಮೊಬೈಲ್‌ನಲ್ಲಿಯೇ ಮಾತನಾಡಲು ಆಗುತ್ತಿರಲಿಲ್ಲ. ಸಮಸ್ಯೆ ಆಗುತ್ತಿತ್ತು. ಬೇರೆ ದಾರಿ ಇಲ್ಲದೇ ಹಾಗೆಯೇ ಒಂದಷ್ಟುಬರವಣಿಗೆ ಮಾಡಿದೆವು. ಈಗ ಮಿಲನ ಕೂಡ ಬೆಂಗಳೂರಿಗೆ ಬಂದಿದ್ದಾರೆ. ಇಬ್ಬರೂ ಸೇರಿ ಸ್ಕಿ್ರಪ್ಟ್‌ ಇನ್ನಷ್ಟುಬಲಪಡಿಸುತ್ತಿದ್ದೇವೆ.

'ಪಾನಿಪುರಿ' ಹುಡುಗಿ ಬರ್ತಡೇ;ನಿಧಿಮಾ ಕ್ರೇಜ್ ಹೇಗಿದೆ ನೋಡಿ!

ಓಟಿಟಿಯಲ್ಲಿ ನಿಮ್ಮ ಲವ್‌ ಮಾಕ್‌ಟೇಲ್‌ಗೆ ಒಳ್ಳೆಯ ರೆಸ್ಪಾನ್ಸ್‌ ಬಂತಲ್ಲವೇ...

ಹೌದು. ಇದೇ ವೇಳೆ ಸುಮಾರು 50ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿತ್ತು. ನಾಲ್ಕು ವಾರ ಕಂಪ್ಲೀಟ್‌ ಮಾಡಿ ಐದನೇ ವಾರಕ್ಕೆ ಕಾಲಿಟ್ಟಿತ್ತು. ಆದರೆ ಕೊರೋನಾ ಬಂದು ಪ್ರದರ್ಶನ ನಿಂತಿತು. ಇನ್ನೊಂದು ಖುಷಿಯ ವಿಚಾರ ಎಂದರೆ ಅಮೆಜಾನ್‌ ಪ್ರೈಮ್‌ನಲ್ಲಿಯೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದ್ದು. ಥಿಯೇಟರ್‌ಗಿಂತ 20 ಪಟ್ಟು ಹೆಚ್ಚು ಜನರು ಪ್ರೈಮ್‌ನಲ್ಲಿ ಸಿನಿಮಾ ನೋಡಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ, ಅರ್ಜೆಂಟೈನಾದಿಂದೆಲ್ಲಾ ಕನ್ನಡ ಗೊತ್ತಿಲ್ಲದವರೂ ಸಿನಿಮಾ ನೋಡಿ ಮೆಸೇಜ್‌ ಮಾಡಿ ಹಾರೈಸಿದ್ದಾರೆ. ತೆಲುಗಿನಿಂದ ಶಿವಕಾರ್ತಿಕೇಯನ್‌ ಸಿನಿಮಾ ನೋಡಿ ಕಾಲ್‌ ಮಾಡಿ ಮಾತನಾಡಿದರು. ನಮ್ಮ ಪ್ರಯತ್ನವನ್ನು ಮೆಚ್ಚಿಕೊಂಡರು, ಇನ್ನಷ್ಟುಒಳ್ಳೆಯ ಚಿತ್ರ ಮಾಡಿ ಎಂದು ಹರಸಿದರು.

ಲವ್‌ ಮಾಕ್‌ಟೇಲ್‌ ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ? ರಿಯಲ್‌ ಲೈಫ್‌ ಗುರು! 

ಬೇರೆ ಭಾಷೆಗಳಿಗೂ ಲವ್‌ ಮಾಕ್‌ಟೇಲ್‌ ಹೋಗುತ್ತಿದೆಯೇ?

ಈಗಾಗಲೇ ತೆಲುಗಿನಲ್ಲಿ ಚಿತ್ರ ರೀಮೇಕ್‌ ಆಗುತ್ತಿದೆ. ಅಡ್ವಾನ್ಸ್‌ ಎಲ್ಲಾ ಆಗಿದೆ. ಅಗ್ರಿಮೆಂಟ್‌ ಅಷ್ಟೇ ಬಾಕಿ ಇರುವುದು. ತಮಿಳಿನಿಂದಲೂ ರೀಮೇಕ್‌ಗೆ ಬೇಡಿಕೆ ಬಂದಿತ್ತು. ಕೊರೋನಾದಿಂದ ಈ ಮಾತುಕತೆ ಸದ್ಯಕ್ಕೆ ನಿಂತಿದೆ. ಇದರ ಜೊತೆಗೆ ಮರಾಠಿ ಮತ್ತು ಹಿಂದಿಗೂ ನಮ್ಮ ಚಿತ್ರ ರೀಮೇಕ್‌ ಆಗಲಿದೆ. ಇದೆಲ್ಲವನ್ನೂ ನೋಡಿದಾಗ ನನಗೇ ತುಂಬಾ ಸಂತೋಷವಾಗುತ್ತದೆ. ಹಿಂದೆ ನಾನು ಕನ್ನಡದಲ್ಲಿ ರೀಮೇಕ್‌ ಸಿನಿಮಾ ನೋಡಿ ನೊಂದುಕೊಳ್ಳುತ್ತಿದ್ದೆ. ನನ್ನ ಬಳಿಯೂ ಹಲವು ನಿರ್ಮಾಪಕರು ರೀಮೇಕ್‌ ಸಿನಿಮಾಗಳನ್ನು ತುರುತ್ತಿದ್ದರು, ಇದೇ ಕತೆ ಇಟ್ಟುಕೊಂಡು ಸಿನಿಮಾ ಮಾಡಿ ಎನ್ನುತ್ತಿದ್ದರು. ಈಗ ನಮ್ಮ ಸಿನಿಮಾಗಳಿಗೆ ಬೇರೆಯವರಿಂದ ಬೇಡಿಕೆ ಬಂದಾಗ ತುಂಬಾ ಖುಷಿಯಾಗುತ್ತದೆ. ನನ್ನ ಮೊದಲ ಸಿನಿಮಾಕ್ಕೆ ಈ ರೀತಿಯ ಬೆಂಬಲ ಸಿಕ್ಕಿದ್ದು ಖುಷಿ ಮತ್ತು ಜವಾಬ್ದಾರಿ ಎರಡನ್ನೂ ಹೆಚ್ಚಿಸಿದೆ. ಈಗ ನನಗೆ ಅನ್ನಿಸಿರುವುದು ನಾವು ನಮ್ಮ ಪಾಡಿಗೆ ಸಿನಿಮಾ ಮಾಡುತ್ತಾ ಹೋಗಬೇಕು. ಒಳ್ಳೆಯ ಕಂಟೆಂಟ್‌ ಕೊಡಬೇಕು, ಉತ್ತಮವಾದ ಎಫರ್ಟ್‌ ಹಾಕಬೇಕು ಆಗ ಜನರೇ ಸಿನಿಮಾವನ್ನು ಮೇಲೆತ್ತುಕೊಂಡು ಹೋಗುತ್ತಾರೆ.

click me!