ಡಾಲಿ ಧನಂಜಯ ಮತ್ತು ಡಾಕ್ಟ್ರಮ್ಮ ಧನ್ಯತಾ ಮದುವೆ, ಹನಿಮೂನ್ ಎಲ್ಲ ಮುಗಿಸ್ಕೊಂಡು ಬಂದಿದ್ದಾಯ್ತು. ಇದೀಗ ಡಾಲಿ ಪಬ್ಲಿಕ್ಕಲ್ಲೇ ಡಾಕ್ಟ್ರಮ್ಮನ ಮೇಲೆ ಲವ್ ತೋರಿಸಿರೋ ವೀಡಿಯೋ ವೈರಲ್ ಆಗ್ತಿದೆ.
ಡಾಲಿ ಧನಂಜಯ ಅಂದ್ರೆ ಹಿಂದೆಲ್ಲ ಕಣ್ಮುಂದೆ ಬರ್ತಿದ್ದದ್ದು ಕಣ್ಣಲ್ಲೇ ರಕ್ತ ಕಾರ್ಕೊಂಡು ಮೂರು ಹೊತ್ತೂ ಡ್ರಗ್ಸ್, ಮದ್ಯದ ಅಮಲಲ್ಲಿ ತೇಲಾಡ್ತ ಸಿಕ್ ಸಿಕ್ಕವರ ಮೇಲೆ ಕತ್ತಿ ಬೀಸೋ ರಕ್ತ ಪಿಪಾಸು ಡಾಲಿ! ಶಿವಣ್ಣನ ಜೊತೆ 'ಟಗರು' ಸಿನಿಮಾದಲ್ಲಿ ಹಿಂಗೊಂದು ಖದರ್ ತೋರಿಸಿದ್ದೇ ಧನ ಅಂತ ಸ್ನೇಹಿತರಿಂದ ಪ್ರೀತಿಯಿಂದ ಕರೆಸಿಕೊಳ್ಳೋ ಹುಡುಗನ ಲೆವೆಲ್ ಎಲ್ಲೆಲ್ಲಿಗೋ ಹೋಗ್ಬಿಡ್ತು. ಅದಕ್ಕೂ ಮೊದಲು ಅವರು ಪಟ್ಟಿರೋ ಪಾಡು ಅವರ ಆಪ್ತರಿಗಷ್ಟೇ ಗೊತ್ತು. ಸಿನಿಮಾ ವ್ಯಾಮೋಹದಲ್ಲಿ ಇನ್‌ಫೋಸಿಸ್‌ನಲ್ಲಿದ್ದ ಒಂದೊಳ್ಳೆ ಸಾಫ್ಟ್‌ವೇರ್ ಇಂಜಿನಿಯರ್ ಕೆಲ್ಸವನ್ನು ಎಡಗಾಲಲ್ಲಿ ಒದ್ದು ಆಚೆ ಬಂದಾಗಿತ್ತು. ಸಿನಿಮಾರಂಗಕ್ಕೆ ಬಂದಮೇಲೇ ಗೊತ್ತಾಗಿದ್ದು ತಾನು ಕನಸು ಕಾಣ್ತಿದ್ದ ಇಂಡಸ್ಟ್ರೀನೇ ಬೇರೆ, ವಾಸ್ತವದಲ್ಲಿರೋ ಇಂಡಸ್ಟ್ರಿನೇ ಬೇರೆ ಅನ್ನೋದು. ಇಲ್ಲಿಗೆ ಬಂದಿದ್ದೇ ಜಯನಗರ ಫೋರ್ತ್ ಬ್ಲಾಕ್ ಅನ್ನೋ ಸಿನಿಮಾ ಮಾಡಿದ್ರು. ಅದು ತನ್ನ ಪ್ರತಿಭೆಯನ್ನು ತೋರಿಸಲಿಕ್ಕೆ ಅಂತ ಮಾಡಿದ ಸಿನಿಮಾವಾಗಿತ್ತು. ಆದರೆ ಇಂಡಸ್ಟ್ರಿಯ ಹಲವು ಸದಾ ಹಣ, ಸಕ್ಸಸ್ ಅನ್ನೋ ಅಮಲಲ್ಲಿ ತೇಲುತ್ತಿರೋರು. ಅವರಿಗೆ ಪ್ರತಿಭೆಯನ್ನ ಅದರಲ್ಲೂ ಹೊಸ ಪ್ರತಿಭೆಯನ್ನು ಗುರುತಿಸುವುದಕ್ಕೆಲ್ಲ ಟೈಮು ಪುರುಸೊತ್ತು ಎಲ್ಲಿರುತ್ತೆ ಹೇಳಿ.. ಈ ಕಾರಣದಿಂದ ಧನಂಜಯ ಎಂಬ ಪ್ರತಿಭಾವಂತ ಶುರುವಿನಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ ಸಿನಿಮಾ ಮೇಲಿನ ಪ್ರೀತಿ ಯಾವ ಲೆವೆಲ್‌ನಲ್ಲಿತ್ತು ಅಂದರೆ ಒಂದಲ್ಲ ಒಂದು ದಿನ ಅವರ ಪ್ರತಿಭೆ ಹೊರಬಂದು ಜನತೆಗೆ ಡಾಲಿ ಅಂದ್ರೇನು ಅನ್ನೋದು ಗೊತ್ತಾಯ್ತು. ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಧನಂಜಯ ಹನಿಗಣ್ಣಾಗುತ್ತಾರೆ.
ಹೀಗೆ ಜೀರೋದಿಂದ ಇಂಡಸ್ಟ್ರಿಗೆ ಕಾಲಿಟ್ಟ ವ್ಯಕ್ತಿ ಇಂದು ದೈತ್ಯ ಪ್ರತಿಭೆಯಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಮ್ಯಾಟರ್ ಅದಲ್ಲ. ಇಷ್ಟೆಲ್ಲ ಒದ್ದಾಡಿ ಮೇಲೆ ಬಂದ ಡಾಲಿ ಒಂದು ಹಂತದಲ್ಲಿ ಹೆಸರು ಮಾಡಿದ ಮೇಲೆ ಇತ್ತೀಚೆಗೆ ಧಾಂ ಧೂಮ್ ಆಗಿ ಮದುವೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು. ಅವರು ಲವ್ವಲ್ಲಿ ಬಿದ್ದಿದ್ದು ಡಾಕ್ಟ್ರಮ್ಮನ ಜೊತೆಗೆ. ಎಲ್ಲಿಯ ಅರಸೀಕೆರೆ ಎಲ್ಲಿಯ ಚಿತ್ರದುರ್ಗ, ಎಲ್ಲಿಯ ಆಕ್ಟರ್ ಎಲ್ಲಿಯ ಡಾಕ್ಟರ್, ಎಲ್ಲ ಋಣಾನುಬಂಧ ಅಂತೆಲ್ಲ ಜನ ಮಾತಾಡ್ಕೊಂಡರು. ಇದೀಗ ಮದುವೆ ಆದ ಮೇಲೆ ಧನು ಅವರ ಹೆಂಡ್ತಿ ಮೊನ್ನೆ ವಿದ್ಯಾಪತಿ ಸಿನಿಮಾ ರಿಲೀಸ್ ವೇಳೆ ಜೊತೆಯಾಗಿ ಕಾಣಿಸಿಕೊಂಡರು. ಅಷ್ಟೇ ಆಗಿದ್ರೆ ಮ್ಯಾಟರಾಗ್ತಿರಲಿಲ್ಲ. ಆದರೆ ಅವರು ಇತ್ತಿ ಹೆಂಡ್ತಿ ಜೊತೆ ನಡೆದುಕೊಂಡ ರೀತಿ ಸಖತ್ ವೈರಲ್ ಆಗಿತ್ತು. ಅವರ ಹೆಂಡ್ತಿ ದೊಡ್ಡಾಸ್ಪತ್ರೆ ಡಾಕ್ಟರಮ್ಮ ಏನೋ ಹೌದು, ಆದ್ರೆ ಅವ್ರಿಗೆ ಸೆಲೆಬ್ರಿಟಿ ಲೈಫ್ ಲೀಡ್ ಮಾಡಿ ಎಲ್ಲ ಗೊತ್ತಿಲ್ಲ. ಮೊನ್ನೆ ಸಿನಿಮಾ ಶೋ ವೇಳೆ ಅವರನ್ನು ಎಲ್ಲರೂ ಆಕ್ಟರ್ ಹೆಂಡ್ತಿ, ಧನಂಜಯ ಹೆಂಡ್ತಿ, ಸೆಲೆಬ್ರಿಟಿ ಅಂತೆಲ್ಲ ನೋಡಿದ್ರು. ಸ್ಪೆಷಲ್ ಮರ್ಯಾದೆಯಿಂದ ವಿವಿಐಪಿ ಟ್ರೀಟ್‌ಮೆಂಟ್ ಕೊಟ್ರು. ಇದೆಲ್ಲ ಡಾಕ್ಟರಮ್ಮಂಗೆ ಹೊಸತು. ಅವರು ಸಂಕೋಚ, ನಾಚಿಕೆಯಲ್ಲಿ ಮುದುಡಿ ಹೋಗಿದ್ರು.
ಅಪ್ಪಾಜಿ ಜೊತೆ ಮನೆಯವ್ರೆಲ್ಲಾ ಒಂದೇ ರೂಮಿನಲ್ಲಿ ಮಲಗ್ತಿದ್ವಿ: ರಾಘವೇಂದ್ರ ರಾಜ್‌ಕುಮಾರ್
ಹೆಂಡ್ತಿಯ ಈ ಸ್ವಭಾವ ಧನಂಜಯಗೆ ಹೊಸತಲ್ಲ, ಆದರೂ ಈಗ ಎಲ್ಲ ರೂಢಿ ಆಗಿರುತ್ತೆ ಅಂದ್ಕೊಂಡಿದ್ರೇನೋ. ಆದರೆ ಹೆಂಡ್ತಿ ಇನ್ನೂ ಸಂಕೋಚದಲ್ಲೇ ಒದ್ದಾಡ್ತಾ ಇರೋದು ಕಂಡು ಅವರಿಗೆ ಹೆಂಡ್ತಿ ಮೇಲೆ ಇನ್ನೂ ಲವ್ ಹೆಚ್ಚಾಯ್ತು. ಅದನ್ನು ಕಂಟ್ರೋಲ್ ಮಾಡದೇ ಪಬ್ಲಿಕ್‌ನಲ್ಲೇ ಅವರು ಹೆಂಡ್ತಿಯ ಜೊತೆ ಆಪ್ತವಾಗಿ ನಡೆದುಕೊಂಡರು. ಅವರ ಈ ಆಟಿಟ್ಯೂಡ್ ನೋಡಿ ಅವರ ಫ್ಯಾನ್ಸ್‌ಗೆ ಡಾಲಿ ಮೇಲಿನ ಪ್ರೀತಿ ಇನ್ನೂ ಹೆಚ್ಚಾದಂಗಿದೆ. ಅದರಲ್ಲೂ ಬಹಳ ಎಮೋಶನಲ್ ಆಗಿರೋ ಫೀಮೇಲ್ ಫ್ಯಾನ್ಸ್ ಧನಂಜಯ ಎಂಬ ಒಳ್ಳೆ ಮನಸ್ಸಿನ ಆಕ್ಟರ್ ಮತ್ತು ಅವರ ಸೈಲೆಂಟ್ ಸಂಕೋಚ ಸ್ವಭಾವದ ಹೆಂಡತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ವಿದ್ಯಾಪತಿ ಸಿನಿಮಾ ಶೋ ನಂತರ ಸ್ಟೇಜ್ ಮೇಲೆ ಹೆಂಡ್ತಿಯ ಕೈ ಹಿಡಿದು ಭುಜ ತಟ್ಟಿ ಪ್ರೀತಿಯಿಂದ ಕಣ್ಣಲ್ಲೇ ಮುದ್ದಿಸಿದ್ದನ್ನು ಯಾರೂ ನೋಡಿರ್ಲಿಕ್ಕಿಲ್ಲ ಅಂದುಕೊಂಡಿದ್ರೇನೋ ಡಾಲಿ, ಆದರೆ ಅಲ್ಲಿದ್ದ ಕ್ಯಾಮರಗಳು ಇಂಥಾ ಮೂಮೆಂಟ್ ತಪ್ಪಿಸಿಕೊಳ್ತವಾ? ವೀಡಿಯೋ ಮಾಡಿ ಸೋಷಲ್ ಮೀಡಿಯಾದಲ್ಲಿ ಹಾಕಿದ್ದೇ ಇವು ಸಖತ್ ವೈರಲ್ ಆಗಿವೆ.
ರೊಮ್ಯಾಂಟಿಕ್ ಆಗಿ 'ಓ ವೇದ ಓ ವೇದ' ಎಂದು ಹಾಡಿದ್ದೇಕೆ ಸೋನು ನಿಗಂ..?!