ಅಜಯ್ ರಾವ್ ನಿರ್ಮಾಣದ ಯುದ್ಧಕಾಂಡ 2 ಸಿನಿಮಾ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ರವಿಚಂದ್ರನ್ ಭಾಗವಹಿಸಿ, ಅಜಯ್ ರಾವ್ ಅವರ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಚಿತ್ರ ನೋಡಲು ಟಿಕೆಟ್ ಖರೀದಿಸಿದರು.
ಅಜಯ್ ರಾವ್ ನಿರ್ಮಾಣದ ಯುದ್ಧಕಾಂಡ 2 ಸಿನಿಮಾ ಇದೇ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಜನರಿಗೆ ಇಷ್ಟ ಆಗಬೇಕು, ಜನರ ಮನಸ್ಸು ಮುಟ್ಟಬೇಕು ಎಂದು ಅಜಯ್ ಹೋರಾಟ ಮಾಡುತ್ತಿದ್ದಾರೆ. ಇದ್ದ ಐಷಾರಾಮಿ ಕಾರು ಮಾರಿದ್ದಾರೆ, ಸಾಲ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಸಿನಿಮಾ ಪ್ರೆಸ್‌ಮೀಟ್ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಭಾಗಿಯಾಗಿದ್ದು, ಚಿತ್ರ ನೋಡಲು 5 ಗೋಲ್ಡ್ ಕ್ಲಾಸ್ ಟಿಕೆಟ್‌ಗಳನ್ನು ಖರೀದಿಸಿದ್ದರು.
'ದಾರಿಯುದ್ಧಕ್ಕೂ ಸಂದರ್ಶನವನ್ನು ನೋಡಿಕೊಂಡು ಬರುತ್ತಿದ್ದೆ. ಎಷ್ಟು ಮಾತನಾಡುತ್ತಾನೆ ಇವನು ಮಾತನಾಡುತ್ತಿದ್ದರೆ ಭಯ ಬಂದು ಬಡುತ್ತೆ. ಸಂದರ್ಶನವನ್ನು ನೋಡಿಕೊಂಡು ಬರುವಾಗ ಯುದ್ಧಕಾಂಡ ಏನು ಅನ್ನೋ ಪ್ರಶ್ನೆ ಕಾಡುವುದಕ್ಕೆ ಶುರುವಾಗಿತ್ತು. ಅಜಯ್ ರಾವ್ ಒಬ್ಬ ಲಾಯರ್ ಆಗಿ ಜವಾಬ್ದಾರಿಯುತ ನಿರ್ಮಾಪಕನಾಗಿ ಅರ್ಧ ಡೈರೆಕ್ಟರ್ ಆಗಿ ಒಬ್ಬ ಶಿಸ್ತಿನ ಸಿಪಾಯಿಯಾಗಿ ಒಬ್ಬ ಫಾದರ್ ಆಗಿ ಒಬ್ಬ ಪ್ರಜೆಯಾಗಿ ಈ ಹೋರಾಟಕ್ಕೆ ನಿಂತಿರುವುದೇ ಯುದ್ಧಕಾಂಡ. ಸಿನಿಮಾ ನಿರ್ಮಾಣ ಮಾಡಿ ರಿಲೀಸ್ ಮಾಡುವ ಹಂತಕ್ಕೆ ಬಂದಾಗ ಎದೆಯಲ್ಲಿ ನಡುಕ ಉಂಟಾಗುತ್ತದೆ. ಜನರಿಗೆ ಇಷ್ಟ ಆಗುತ್ತೋ ಏನೋ ರಿಸಲ್ಟ್ ಏನ್ ಆಗುತ್ತೋ ಅಂತ. ನನ್ನಂಥ 40 ವರ್ಷ ಸಿನಿಮಾ ಜರ್ನಿ ಮಾಡ್ಕೊಂಡು ಬಂದವರಿಗೆ ಒಂದು ಭಯವಿರುತ್ತೆ ಪುಕ ಪುಕ ಹಾರ್ಟ್ ಹೊಡೆಯುವುದಕ್ಕೆ ಶುರುವಾಗುತ್ತದೆ. ಸಿನಿಮಾವನ್ನು ಅಷ್ಟೇ ಪ್ರತಿಸುತ್ತೇವೆ. ನಿನ್ನಲ್ಲಿ ನನ್ನನ್ನು ಕಾಣುತ್ತೇನ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.
ರಜತ್‌ಗೆ ಬುದ್ಧಿ ಇಲ್ಲ ಕೋಪ ಜಾಸ್ತಿ ನನ್ನ ಮಾತು ಕೇಳಲ್ಲ: ವಿನಯ್ ಗೌಡ
'ಅಜಯ್ ರಾವ್ ಮತ್ತು ನಿರ್ದೇಶಕರು ಮಾತನಾಡುವಾಗ ಎಲ್ಲೂ ತೊದಲಲಿಲ್ಲ. ಒಂದು ವೇಳೆ ತೊದಲಿದರೆ ಇನ್ನೂ ಎಲ್ಲೋ ಒಂದು ಕಡೆ ಕನ್ಫ್ಯೂಷನ್ ಇದೆ ಅಂತ. ತೊದಲಲಿಲ್ಲ ಅಂದರೆ ಅಷ್ಟೇ ಕಾನ್ಫಿಡೆಂಟ್ ಆಗಿದ್ದಾರೆ ಅಂತ. ನನಗೆ ಒಂದು ಎಮೋಷನಲ್ ಸಿನಿಮಾ ಕಣ್ಣು ಮುಂದೆ ಕಾಣುತ್ತಿದೆ' ಎಂದು ರವಿಚಂದ್ರನ್ ಹೇಳಿದ್ದಾರೆ.
ಒಪ್ಪಿಕೊಂಡ ಹಣವನ್ನು ಕೊನೆಯಲ್ಲಿ ಕೊಡುತ್ತಿರಲಿಲ್ಲ: ರಮ್ಯಾ
'ಸಾಲ ಮಾಡಿದ್ದೀನಿ ಸಾಲ ಮಾಡಿದ್ದೀನಿ ಅಂತ ಅಜಯ್ ರಾವ್ ಹೇಳಿದಾಗ ನನ್ನ ಸಾಲ ನೆನಪಾಯ್ತು. ಸಾಲ ಮಾಡುವುದಕ್ಕೆ ತಾಕತ್ತು ಬೇಕು ಅಂದ. ನನಗೆ ಸಾಲ ತೀರಿಸುವುದಕ್ಕೆ ತಾಕತ್ತು ಬೇಕು. ಇಷ್ಟೋಂದು ಧೈರ್ಯ ತಗೋಂಡು ಸಿನಿಮಾ ಮಾಡ್ಬೇಕಾ ಅನ್ನೋದು ಬಂತು. ಸಿನಿಮಾ ಮಾಡುತ್ತಲೇ ಇದ್ದೀನಿ ಸಾಲದಲ್ಲಿ ಬದುಕುತ್ತಿದ್ದೀವಿ. ಸಾಲದಲ್ಲೇ ಹೋರಾಡುತ್ತಿದ್ದೇವೆ. ಸಾಲ ಮಾಡುತ್ತೇನೆ ಅಂತ ಎಲ್ಲೂ ಹೇಳಬೇಡ ಅಷ್ಟು ದುಡ್ಡು ಸಂಪಾದನೆ ಮಾಡು' ಎಂದಿದ್ದಾರೆ ರವಿಚಂದ್ರನ್.
ಇನ್ನೂ 3 ಕೆಜಿ ತೂಕ ಕಡಿಮೆ ಆಗ್ಬೇಕು, ಫ್ಯಾಮಿಲಿ ಸಪೋರ್ಟ್ ಬೇಕು: ಸಿರಿ