
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ವೀಕೆಂಡ್ ಡೈನಾಮಿಕ್ ಕಿಂಗ್ ದೇವರಾಜ್ ಫ್ಯಾಮಿಲಿ ಆಗಮಿಸಿದೆ. ಮಜಾ ಕಾಮಿಡಿ ಡಬಲ್ ಮಾಡಲು ಪ್ರಜ್ವಲ್ ದೇವರಾಜ್, ಪ್ರಣಮ್ ಮತ್ತು ರಾಗಿಣಿ ಅಲ್ಲಲ್ಲಿ ಕಾಮಿಡಿ ಪಂಚ್ ನೀಡಿದ್ದಾರೆ. ಸಾಕಷ್ಟು ಟಾಕ್ಸ್‌ಗಳನ್ನು ಡೈನಾಮಿಕ್ ಫ್ಯಾಮಿಲಿಗೆ ನೀಡಿ ಮನೋರಂಜಿಸಿದ್ದಾರೆ. ಆ ಕಾಮಿಡಿ ನಡುವೆ ಒಂದು ಸೀರಿಯಸ್ ಸೀನ್ ಕ್ರಿಯೇಟ್ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಅದು ಕೂಡ ಕಾಮಿಡಿ ಆಗಿಬಿಟ್ಟಿದೆ.
ಹುಡುಗಿ ಒಬ್ಬರನ್ನು ಕರೆದು ನೀನು ಪ್ರೀತಿಸುತ್ತಿರುವೆ... ಮನೆಯಲ್ಲಿ ವಿಚಾರ ಪ್ರಸ್ತಾಪ ಮಾಡಬೇಕು ಹೀಗಾಗಿ ಮೊದಲು ಅಣ್ಣ ಅತ್ತಿಗೆ ಸಪೋರ್ಟ್ ಪಡೆಯಬೇಕು ಎಂದಿದ್ದಾರೆ. ಪ್ರಜ್ವಲ್ ಮತ್ತು ಅತ್ತಿಗೆ ರಾಗಿಣಿಗೆ ನನ್ನ ಗರ್ಲ್‌ಫ್ರೆಂಡ್ ಹೆಸರು ಒಂಟೆ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಹೆಸರು ಕೇಳಿ ಇಡೀ ಮನೆ ನಕ್ಕಿದೆ. 'ನೋಡಲು ನನಗಿಂತ ಹೈಟ್ ಇದ್ದರೂ ಪರ್ವಾಗಿಲ್ಲ ಅವಳು ಇಲ್ಲದೆ ನಾನು ಬದುಕುದಿಲ್ಲ. ಆಕೆಯನ್ನು ನಾನು ಪ್ರೀತಿಯಿಂದ ಒ ಒ ಎಂದು ಕರೆಯುತ್ತೀನಿ' ಎಂದು ಪ್ರಣಮ್ ಮಸ್ತ್ ಕಾಮಿಡಿ ಮಾಡಿದ್ದಾರೆ. 'ನಾನು ಪ್ರೀತಿಸಲು ಶುರು ಮಾಡಿ ಎರಡನೇ ಡೇಟ್‌ನಲ್ಲಿ ಪ್ರೀತಿ ವಿಚಾರವನ್ನು ಅಮ್ಮನ ಮುಂದೆ ರಿವೀಲ್ ಮಾಡಿದ್ದು. ನೀನು ಮೊದಲು ಅಮ್ಮನಿಗೆ ಹೇಳು' ಎಂದು ರಾಗಿಣಿ ಸಲಹೆ ನೀಡುತ್ತಾರೆ. 'ನನ್ನ ಪ್ರೀತಿ ಒಪ್ಪಿಕೊಳ್ಳಲು ಎಷ್ಟು ಸಥಾಯಿಸಿದ್ದರು ನಿನ್ನನ್ನು ಬಿಡುತ್ತಾರಾ?' ಎಂದು ಪ್ರಜ್ವಲ್ ಕಾಲೆಳೆದಿದ್ದಾರೆ.
ಯಾಕೆ ನಾಯಕಿಯರು ಇಷ್ಟೇ ಅಳಬೇಕು ಇಷ್ಟೇ ನಗಬೇಕು ಅಲ್ಲದೆ ತ್ಯಾಗಮಯಿಗಳು ಆಗಬೇಕು: ನಿರ್ದೇಶಕಿ ಸ್ವಪ್ನ ಕೃಷ್ಣ
ಅಣ್ಣ ಅತ್ತಿಗೆ ಜೊತೆ ಒಂದಿಷ್ಟು ಚರ್ಚೆ ಮಾಡಿ ನೇರವಾಗಿ ತಾಯಿ ಬಳಿ ಹೋಗಿ ಪ್ರೀತಿ ಹೇಳಿಕೊಳ್ಳುತ್ತಾರೆ. ಹುಡುಗಿ ತುಂಬಾ ಎತ್ತರ ಇದ್ದಾಳೆ ಬೇಡ ಕಣೋ ನಿನಗೆ ಸೂಟ್ ಆಗುವವರನ್ನು ಕರೆದುಕೊಂಡು ಬಾ ಇಲ್ಲೇ ಮದುವೆ ಮಾಡುತ್ತೀನಿ. ನನಗೆ ವಯಸ್ಸಾಗಿ ಹೀಗಾಗಿ ರುಚಿ ರುಚಿಯಾಗಿ ಅಡುಗೆ ಮಾಡಲು ಸೊಸೆ ಬೇಕು ಎಂದು ದೇವರಾಜ್ ಪತ್ನಿ ರಿಜೆಕ್ಟ್ ಮಾಡುತ್ತಾರೆ. ತಂದೆ ಬಳಿ ಹೋಗಿ ಕೇಳಿದರೆ ಅಯ್ಯೋ ನನಗೆ ಏನೂ ಗೊತ್ತಿಲ್ಲ ಅಂದುಬಿಡುತ್ತಾರೆ. ಈ ಕಾಮಿಡಿ ಸೀನ್‌ನ ಮಜಾ ಟಾಕೀಸ್ ಮನೆಯಲ್ಲಿದ್ದ ಜನ ಸಾಮಾನ್ಯರು ಎಂಜಾಯ್ ಮಾಡಿದ್ದಾರೆ. ಈಗಾಗಲೆ ಮೂರ್ನಾಲ್ಕು ಪ್ರೋಮೋಗಳನ್ನು ರಿಲೀಸ್ ಮಾಡಿದ್ದು ಪ್ರತಿಯೊಂದು ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. 'ಫ್ಯಾಮಿಲಿ ಇಷ್ಟು ಖುಷಿ ಇದ್ದರೆ ಖಂಡಿತ ನೆಮ್ಮದಿ ಇರುತ್ತದೆ, ಬೇಗ ಮಕ್ಕಳು ಮಾಡಿಕೊಳ್ಳಿ ಸರ್ ಸಂಭ್ರಮ ಡಬಲ್ ಆಗಲಿ, ತಮ್ಮನ ಮದುವೆ ಮಾಡಿಬಿಡಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರಬೇಕು' ಎಂದು ಸಖತ್ ಪಾಸಿಟಿವ್ ಕಾಮೆಂಟ್‌ಗಳು ಮಾಡಿದ್ದಾರೆ.
ನನ್ನ ಹೆಂಡ್ತಿಯರ ಬಗ್ಗೆ ಯಾಕೆ ಕ್ಯೂರಿಯಾಸಿಟಿ, ಮೊದ್ಲು ಯಾರ್ ಕರೀತಾರೆ ಅಲ್ಲಿಗೆ ಹೋಗ್ತೀನಿ: ಅರ್ಜುನ್ ರಮೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.