ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ರಾಘಣ್ಣ ಬಳಿ ಅಪ್ಪು ಹೇಳಿದ್ದೇನು? ಕಣ್ಣೀರು ಬರದೇ ಇರದು!

Published : Feb 28, 2025, 11:36 PM ISTUpdated : Mar 01, 2025, 09:12 AM IST
ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ರಾಘಣ್ಣ ಬಳಿ ಅಪ್ಪು ಹೇಳಿದ್ದೇನು? ಕಣ್ಣೀರು ಬರದೇ ಇರದು!

ಸಾರಾಂಶ

ಪುನೀತ್ ಅವರ ಒಳಮನಸ್ಸಿಗೆ ತಾವು ಈ ಜಗತ್ತಿನಿಂದ ಸದ್ಯದಲ್ಲೇ ಕಣ್ಮರೆ ಆಗಲಿರುವ ಸುಳಿವು ಸಿಕ್ಕಿತ್ತು. ಬಹುಶಃ ಅವರು ಅದಕ್ಕಾಗಿ ತಮ್ಮಲ್ಲೇ ಸಾಕಷ್ಟು ಹೋರಾಟ ಮಾಡಿದ್ದಿರಬಹುದು. ಅಥವಾ, ಅದನ್ನು ಮನಸಾರೆ ಒಪ್ಪಿಕೊಂಡಿರಲೂಬಹುದು. ಒಟ್ಟಿನಲ್ಲಿ, ಅಪ್ಪು ...

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗೋ ಎರಡು ದಿನಗಳ ಮೊದಲು ಅವರಣ್ಣ ರಾಘವೇಂದ್ರ ರಾಜ್‌ಕುಮಾರ್ ಅಪ್ಪು ಮನೆಗೆ ಹೋಗಿದ್ದರಂತೆ. ಆಗ, ಸಹಜವಾಗಿಯೇ ಅವರು ಆಗಿನ ಹಾಟ್ ಟಾಪಿಕ್ ಹಾಗೂ ಅವರು ನಿರ್ಮಾಣ ಮಾಡಿರುವ () 'ಗಂಧದ ಗುಡಿ' ಕಿರುಚಿತ್ರದ ಬಗ್ಗೆ ಮಾತನಾಡಿದ್ದರಂತೆ. ಅದು ಸಹಜ ಬಿಡಿ, ಅವರವರ ಮಕ್ಕಳ ಬಗ್ಗೆ ಪೋಷಕರಿಗೆ ಸಹಜ ಪ್ರೀತಿ ಇರುವಂತೆ, ಅಪ್ಪು ತಮ್ಮ ನಿರ್ಮಾಣದ ಆ ಗಂಧದ ಗುಡಿ ಬಗ್ಗೆ ಹೇಳಿರೋದು ಸಹಜ!

ಆದರೆ, ಅದಲ್ಲ ವಿಷಯ.. ಅವರು ಕೇಔಲ ಗಂಧದ ಗುಡಿಯ ಬಗ್ಗೆ ಮಾತನಾಡಿಲ್ಲ.. ಮುಂದುವರೆದ ಪುನೀತ್ 'ಇದು ಹೇಗೆ ಬಂದಿದೆ ಹೇಳಿ ರಾಘಣ್ಣ ?' ಅಂತ ಕೇಳಿದ್ದಾರೆ. ಆಗ ರಾಘಣ್ಣ ತಮ್ಮ ಅಭಿಪ್ರಾಯ ಹೇಳುವ ಮೊದಲೇ ಅಪ್ಪು ತಮ್ಮ ಮಾತಿನ ಮರ್ಮ ಅಥವಾ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅದೇನು ಅಂತ ಗೊತ್ತಾದ್ರೆ, ನೀವು ಕಣ್ಣೀರು ಹಾಕೋದು ಗ್ಯಾರಂಟಿ..!

ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

ಅಪ್ಪು ರಾಘಣ್ಣ ಬಳಿ..'ನನ್ನನ್ನು ಕನ್ನಡ ಸಿನಿಮಾ ರಂಗ 46 ವರ್ಷ ಬೆಳೆಸಿದೆ, ಇದಕ್ಕೆ ನಾನೇನಾದ್ರೂ ಒಳ್ಳೇದನ್ನು ಕೊಟ್ಟು ಹೋಗ್ಬೇಕು..' ಅಂದ್ರಂತೆ. ಪುನೀತ್ ಮಾತಿಗೆ ಶಾಕ್ ಆದ ರಾಘಣ್ಣ, ಏ ಪಾಪು.. ಯಾಕೆ ಹಾಗೆ ಅಂತೀಯ..?' ಎನ್ನಲು ಪುನೀತ್ ಹಾಗೇ ಮಾತನ್ನು ತೇಲಿಸುತ್ತ 'ಅಂದ್ರೆ, ಈ ಕಿರುಚಿತ್ರವನ್ನು ನಾನು ನನ್ನಿಷ್ಟದಂತೆ ಮಾಡುತ್ತಿದ್ದೇನೆ. ಅದಕ್ಕೇ ಈ ಸಿನಿಮಾವನ್ನು ನನ್ನದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದೀನಿ..' ಎಂದು ರಾಘಣ್ಣ ಅವರಿಗೆ ಹೇಳಿದ್ದಾರೆ. 

ಹಾಗಂತ ಸ್ವತಃ ನಟ ಹಾಗೂ ಪುನೀತ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಹೌದು, ಪುನೀತ್ ಅವರ ಒಳಮನಸ್ಸಿಗೆ ತಾವು ಈ ಜಗತ್ತಿನಿಂದ ಸದ್ಯದಲ್ಲೇ ಕಣ್ಮರೆ ಆಗಲಿರುವ ಸುಳಿವು ಸಿಕ್ಕಿತ್ತು. ಬಹುಶಃ ಅವರು ಅದಕ್ಕಾಗಿ ತಮ್ಮಲ್ಲೇ ಸಾಕಷ್ಟು ಹೋರಾಟ ಮಾಡಿದ್ದಿರಬಹುದು. ಅಥವಾ, ಅದನ್ನು ಮನಸಾರೆ ಒಪ್ಪಿಕೊಂಡಿರಲೂಬಹುದು. ಒಟ್ಟಿನಲ್ಲಿ, ಅಪ್ಪು ನಿರ್ಮಾಣದ ಗಂಧದ ಗುಡಿ ಅವರ ಸಾವಿನ ನಂತರ ಲಾಂಚ್ ಆಗಿದೆ. 

ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..

ಪುನೀತ್ ರಾಜ್‌ಕುಮಾರ್ ನಿರ್ಮಾಣ ಹಾಗೂ ನಟನೆಯ ಈ ಕಿರುಚಿತ್ರದಲ್ಲಿ ಅವರ ಅಪ್ಪಾಜಿ ಡಾ ರಾಜ್‌ಕುಮಾರ್ ಅವರ ಧ್ವನಿಯನ್ನೂ ಕೂಡ ಬಳಸಿಕೊಳ್ಳಲಾಗಿದೆ. ಈ ಕಿರುಚಿತ್ರವನ್ನು ಪುನೀತ್ ಅಗಲಿಕೆ ಬಳಿಕ ಇಡೀ ಕರ್ನಾಟಕ ನೋಡಿದೆ. ಆದರೆ, ಅದನ್ನು ತೆರೆಯಲ್ಲಿ ನೋಡಲು ಸ್ವತಃ ಪುನೀತ್ ಅವರು ಇರಲಿಲ್ಲ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ