
ಆಂಕರ್ ಹಾಗೂ ನಟ ಕಿರಿಕ್ ಕೀರ್ತಿ (Kirik Keerthi) ಅವರ ಪಾಡ್‌ಕಾಸ್ಟ್‌ನಲ್ಲಿ ಅತಿಥಿ ಆಗಿ ನಟ ಕೀರ್ತಿರಾಜ್ (Keerthiraj)ಅವರು ಬಂದಿದ್ದರು. ಈ ಇಬ್ಬರು ಮಹಾನ್ 'ಕೀರ್ತಿ' ಗಳು ಅದೇನು ಮಾತುಕತೆ ಆಡಿದ್ದಾರೆ, ಅವರಿಬ್ಬರ ಮಾತುಕಥೆಯಲ್ಲಿ ಏನೆಲ್ಲಾ, ಯಾರೆಲ್ಲಾ ಬಂದು ಹೋಗಿದ್ದಾರೆ..!? ಡೀಟೇಲ್ಸ್ ಇಲ್ಲಿದೆ ನೋಡಿ..
ಹಿರಿಯ ನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. 'ಕೀರ್ತಿರಾಜ್ ಪತ್ನಿಯ ಜೀವನದಲ್ಲಿ ನಡೆದ ಘಟನೆ ಅದು.. ಆದ್ರೆ, ಅವರು ಕೀರ್ತಿರಾಜ್ ಹೆಂಡತಿ ಆಗಿರೋದ್ರಿಂದ ಸಹಜವಾಗಿಯೇ ಆ ಘಟನೆ ಇವರಿಬ್ಬರ ಮೇಲೂ ಪರಿಣಾಮ ಬೀರಿರುತ್ತೆ.. ಕೀರ್ತಿರಾಜ್ ಪತ್ನಿಗೆ ದೇವಸ್ಥಾನದಿಂದ ಹಿಂತಿರುತ್ತಿದ್ದಾಗ ಆಗ ಕಾರ್ ಅಪಘಾತದಲ್ಲಿ ಕೈ ಕಟ್ ಆಗಿಬಿಡುತ್ತೆ..
ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..
ಅದರಿಂದ ತೀವ್ರ ನೊಂದ ಹೆಂಡತಿಗೆ ಕೀರ್ತಿರಾಜ್ ಅವರು 'ನೋಡು, ನೀನು ದುಃಖ ಪಡುವುದು ಬೇಡ.. ಇಷ್ಟು ದಿನ ನಿನಗೆ ಎರಡು ಕೈ ಇತ್ತು.. ಇನ್ಮುಂದೆ ಮೂರು ಕೈ ಇರುತ್ತೆ..' ಅಂತ ಧೈರ್ಯ ತುಂಬಿದ್ದೂ ಅಲ್ಲದೇ, ಅವರ ಸಹಾಯಕ್ಕೆ ಅಕ್ಷರಶಃ ನಿಂತರು. ಜೊತೆಗೆ, ಆಗ ಅವರ ಮಗ, ನಟ ಧರ್ಮ ಕೀರ್ತಿರಾಜ್ ಅವರಿಗೆ 6 ವರ್ಷ. ಆ ಮಗುವನ್ನು ನೋಡಿಕೊಂಡು, ಮನೆಯಲ್ಲಿ ಪಾತ್ರೆ ತೊಳೆದು, ಅಡುಗೆ ಮಾಡಿ, ಮಗನನ್ನೂ ನೋಡಿಕೊಂಡು, ಶಾಲೆಗೂ ಕಳಿಸಿ-ಕರೆಸಿ ಮಾಡಿದ್ದಾರೆ ಈ ಕೀರ್ತಿರಾಜ್..!
ಇಂದಿನ ಕಿರಿಕ್ ಕೀರ್ತಿ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ನಟ ಕೀರ್ತಿರಾಜ್ ಅವರು ಇಂತಹ ಸಾಕಷ್ಟು ಘನಟೆಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಹಿರಿಯ ಖಳನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಷ್, ದರ್ಶನ್ ಸುದೀಪ್ ಮುಂತಾದವರ ಹೆಸರನ್ನು ಕೂಡ ಹೇಳಿದ್ದಾರೆ. ಕೀರ್ತಿ+ಕೀರ್ತಿ ಈ 'ಕಿಕೀ' ಪಾಡ್‌ಕಾಸ್ಟ್‌ನಲ್ಲಿ ಅದೇನು ಮಾತನಾಡಿದ್ದಾರೆ ಎಂಬ ನಿಮ್ಮಕುತೂಹಲಕ್ಕೆ 'ಕಿಕೀ' ಅಂದ್ರೆ ಕಿರಿಕ್ ಕೀರ್ತಿ ಪಾಡ್‌ಕಾಸ್ಟ್ ತಪ್ಪದೇ ನೋಡಿ..
ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ಅಪ್ಪು ರಾಘಣ್ಣ ಬಳಿ ಹೇಳಿದ್ದೇನು? ಕಣ್ಣೀರು ಬರದೇ.. ಇರದು!
ಅಂದಹಾಗೆ, ಧರ್ಮ ಕೀರ್ತಿರಾಜ್ ಫ್ಯಾನ್ಸ್‌ಗೆ ಹೇಳ್ಬೇಕು ಅಂದ್ರೆ..,ಈ ಹಿರಿಯ ನಟ ಕೀರ್ತಿರಾಜ್ ಅವರು ಬಿಗ್ ಬಾಸ್ ಕನ್ನಡ 11ರ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಅವರ ತಂದೆ. ಇದನ್ನೇ ನಟ ಕೀರ್ತಿರಾಜ್ ಅಭಿಮಾನಿಗಳಿಗೆ ಹೇಳೋದಾದ್ರೆ.., ಈ ಕೀರ್ತಿರಾಜ್ ಅವರ ಮಗನೇ ಧರ್ಮ ಕೀರ್ತಿರಾಜ್..' ಅಂತ ಇಂಟ್ರೊಡ್ಯೂಸ್ ಮಾಡೋದು ಬೆಟರ್.. ಅಲ್ವಾ..?!!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.