ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ.
ಸೌತ್ ಸ್ಟಾರ್ಸ್ಗಳಾದ ಯಶ್, ಪ್ರಭಾಸ್, ಅಲ್ಲು ಅರ್ಜುನ್ ರಾಮ್ ಚರಣ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಇವ್ರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿದ್ರು. ಅದರಲ್ಲೂ ಬಾಲಿವುಡ್ನಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ರು. ಇದ್ರಿಂದ ಹಿಂದಿ ಸಿನಿಮಾಗಳ ಸ್ಟಾರ್ಗಳು ಗಲ್ಲಾಪೆಟ್ಟೆಗೆ ಕೊಳ್ಳೆ ಹೊಡೆಯಲಾಗದೇ ಒದ್ದಾಡಿದ್ರು. ಸಲ್ಮಾನ್ ಖಾನ್ ಶಾರುಖ್ ಖಾನ್, ಅಮೀರ್ ಖಾನ್ ಅಕ್ಷಯ್ರಂತ ಸೂಪರ್ ಸ್ಟಾರ್ಗಳೇ ಗೆಲುವಿಗಾಗಿ ಒದ್ದಾಡಿದ್ರು. ಈಗ ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ ಬಂದಿದೆ. ಆ ಐದು ಸಿನಿಮಾಗಳ ಎದುರು ತಮ್ಮ ಸಿನಿಮಾ ರಿಲೀಸ್ ಮಾಡೋಕೆ ಬಾಲಿವುಡ್ ಮಂದಿ ಹೆದರುತ್ತಿದ್ದಾರಂತೆ.
ಹಿಂದಿ ಚಿತ್ರರಂಗ ರೂಲ್ ಮಾಡೋಕೆ ರೆಡಿ ಅಲ್ಲು ಅರ್ಜುನ್..!
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ: ದಿ ರೂಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಭಾಗ 2021ರಲ್ಲಿ ಕೊನೆಯಲ್ಲಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈಗ ಎರಡನೇ ಭಾಗಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ 2024ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರದ ಎದುರು ರಿಲೀಸ್ ಆಗಲಿದೆ.
ಬಿಗ್ ಬಾಸ್ ಬಳಿಕ ಸಂಗೀತಾ-ಚಾರ್ಲಿ ಭೇಟಿ; ನೆಟ್ಟಿಗರು ಎಂತೆಂತಹ ಕಾಮೆಂಟ್ ಹಾಕ್ತಿದಾರೆ ನೋಡ್ರಿ!
ಬಾಲಿವುಡ್ಗೆ ಭಯ ಹುಟ್ಟಿಸಿದೆ ರಿಷಬ್ ಶೆಟ್ಟಿಯ ಕಾಂತಾರ..!
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಆ ಸಿನಿಮಾದ ಎದುರು ಬಾಲಿವುಡ್ನ ಯಾವ ಸಿನಿಮಾನೂ ರಿಲೀಸ್ ಮಾಡುತ್ತಿಲ್ಲ.
ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!
ದೇವರ, ತಂಗಲಾನ್ ಎದುರು ನಡೆಯಲ್ಲ ಹಿಂದಿ ಮಂದಿ ಆಟ..!
ಜೂನಿಯರ್ ಎನ್ಟಿಆರ್ ಅಂದ್ರೆ ಬಾಲಿವುಡ್ ಮಂದಿಗೆ ಭಯ ಇದೆ. ಅದಕ್ಕೆ ಕಾರಣ ಆರ್ಆರ್ ಆರ್ ಸಿನಿಮಾದ ಬಿಗ್ ಸಕ್ಸಸ್.. ಈಗ ಜೂನಿಯರ್ ಎನ್ಟಿಆರ್ ‘ದೇವರ’ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ನ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 5ರಂದು ಬಿಡುಗಡೆ ಆಗಲಿರೋ ದೇವಾರ ಸಿನಿಮಾ ಎದುರು ಹಿಂದಿಯ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆ ಮಾಡದಿರಲು ಬಾಲಿವುಡ್ ಡಿಸೈಡ್ ಮಾಡಿದೆಯಂತೆ.
ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?
ಅಷ್ಟೆ ಅಲ್ಲ ಪಾ. ರಂಜಿತ್ ನಿರ್ದೇಶನದಲ್ಲಿ ರೆಡಿ ಆಗುತ್ತಿರುವ, ಚಿಯಾನ್ ವಿಕ್ರಮ್ ನಟನೆಯ ‘ತಂಗಲಾನ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿದ್ಧವಾಗುತ್ತಿವೆ. ಇದರ ಜತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಕೂಡ ಪ್ಯಾನ್ ಇಂಡಿಯಾದಲ್ಲಿ ಸಿದ್ಧವಾಗುತ್ತಿದೆ. ಉಪ್ಪಿಯ ಯುಐ ಕೂಡ ಬಾಕ್ಸಾಫೀಸ್ನಲ್ಲಿ ಮಾರ್ಕ್ ಮಾಡೋ ಎಲ್ಲಾ ಸಾಧ್ಯತೆಯೂ ಇದೆ. ಟೋಟಲ್ಲಾಗಿ ಹೇಳೋದಾದ್ರೆ ಈ ಭಾರಿ ಸೌತ್ ಸಿನಿಮಾಗಳ ಪಾರುಪತ್ಯ ಬಾಲಿವುಡ್ ನಿದ್ದೆ ಕೆಡಿಸಿರೋದಂತು ನಿಜ..
ರೋಡ್‌ನಲ್ಲಿ ಬೋರಲು ಬಿದ್ದ ರಾಮ; ಸೀತಾ ಕೇರ್ ಟೇಕರ್ ರಾಮನಿಗೆ ಹೀಗಾದ್ರೆ ಮುಂದೇನು ಗತಿ?