
ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರಾದಂಡು ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಇದೀಗ ಹೊಸ ಸೇರ್ಪಡೆ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್.
ಅನುರಾಗ್ ಕಶ್ಯಪ್ (Anurag Kashyap) ದಕ್ಷಿಣದ ಕಡೆಗೆ ಬಂದಾಗಿದೆ. ತಮಿಳಿನ ಮಹಾರಾಜ ಚಿತ್ರದಲ್ಲಿ ಅದ್ಭುತ ಪಾತ್ರದಲ್ಲಿ ಗಮನಸೆಳೆದಿದ್ದಾರೆ. ಈ ಮೂಲಕ ತಮಿಳು ಪ್ರೇಕ್ಷಕರನ್ನ ರಂಜಿಸಿದ್ದಾರೆ. ತೆಲುಗಿನ ಡಕಾಯಿತ್ ಚಿತ್ರದಲ್ಲಿ ಕಪಟ ಪೊಲೀಸ್ ಆಫೀಸರ್ ನಟಿಸಿರುವ ಅವರೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ನಟ-ನಿರ್ದೇಶಕ ಸುಜಯ್ ಶಾಸ್ತ್ರಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ಒಂದು ಒಳ್ಳೆ ಕಥೆಯನ್ನ ಹೇಳುತ್ತಿದ್ದಾರೆ.
ಕನ್ನಡದ '8'ರಲ್ಲಿ ಬಾಲಿವುಡ್ ಬಿಗ್ ಸ್ಟಾರ್ ನಟನೆ, ಸ್ಯಾಂಡಲ್‌ವುಡ್ ಪ್ರಕಾಶಿಸುತ್ತಿದೆ ಅನ್ನೋಕೆ ಸಾಕ್ಷಿನಾ?!
8 ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ನಡೆಯಿತು. ಈ ವೇಳೆ ನಿರ್ದೇಶಕ ಕಂ ನಟ ಅನುರಾಗ್ ಕಶ್ಯಪ್ ಮಾತನಾಡಿ, ಇದೊಂದು ಎಮೋಷನಲ್ ಕಥೆ. ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತದೆ. ಅರವಿಂದ್ ಹಾಗೂ ಸುಜಯ್ ಶಾಸ್ತ್ರೀಗೆ ಧನ್ಯವಾದ ಎಂದರು.
ಕನ್ನಡದ '8' ಎಂಬ ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಹಾಸ್ಯನಟ ಸುಜಯ್ ಶಾಸ್ತ್ರೀ ಈ ಚಿತ್ರದ ಸಾರಥಿ. ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ '8' ಚಿತ್ರದಲ್ಲಿದೆ.
AVR ಪ್ರೊಡಕ್ಷನ್ ಚೊಚ್ಚಲ ಸಿನಿಮಾ 8: ಕನ್ನಡ ಚಿತ್ರರಂಗಕ್ಕೆ ಸದಾ ಅಭಿರುಚಿ ಸಿನಿಮಾಗಳನ್ನು ನೀಡುವ ಉದ್ದೇಶದಿಂದ ಶುರುವಾಗಿರುವ ಎವಿಆರ್ ಚೊಚ್ಚಲ ಕಾಣಿಕೆ 8. ಅರವಿಂದ್ ರೆಡ್ಡಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಜೊತೆಗೆ ಸಿಂಪಲ್ ಸುನಿ ಜೊತೆಗೂ ಎವಿಆರ್ ಕೈ ಜೋಡಿಸಿದೆ. ಬಿಗ್ ಬಾಸ್ ಖ್ಯಾತಿಯ ಮಹೇಶ್ ಕಾರ್ತಿಕ್ ನಾಯಕನಾಗಿ ನಟಿಸಲಿರುವ ಈ ಸಿನಿಮಾ ಈಗಾಗಲೇ ಘೋಷಣೆಯಾಗಿದೆ. ಸದ್ಯ 8 ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.
Appu: ಅಪ್ಪು ತೆರೆಯ ಹಿಂದಿನ ಕಾಯಕದ ಬಗ್ಗೆ ನಿಮಗೆಷ್ಟು ಗೊತ್ತು? ಅಪರೂಪದ ಮಾಹಿತಿ..
ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅನುರಾಗ್ ಕಶ್ಯಪ್ ಅವರು ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 52 ವರ್ಷದ ಬಾಲಿವುಡ್ ಮ್ಯಾನ್ ಅನುರಾಗ್ ಕಶ್ಯಪ್ ಅವರು ಕನ್ನಡದಲ್ಲಿ ನಟಿಸುತ್ತಿರುವ ಸುದ್ದಿ ಸಹಜವಾಗಿಯೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾರಣ, ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಅವರಿಗೆ ಅದು ಒಂಥರಾ ಕಡಿಮೆ ಗ್ರೇಡ್ ಅನ್ನೋ ಕಾಲವಿತ್ತು.
ಆದರೆ, ಇಂದು ಕನ್ನಡ ಸಿನಿಮಾಗಳು ತುಂಬಾ ಹೆಸರು ಮಾಡುತ್ತಿವೆ. ಜೊತೆಗೆ, ಕನ್ನಡ ಹಾಗೂ ತೆಲುಗು ಸಿನಿಮಾಗಳು ಭಾರತದಲ್ಲಿ ಅತ್ಯಂತ ಹೆಚ್ಚು ಸೌಂಡ್ ಹಾಗೂ ಕಲೆಕ್ಷನ್ ಮಾಡುವ ಸಿನಿಮಾಗಳು ಎಂಬ ಖ್ಯಾತಿ ಪಡೆದಿವೆ. ಕೆಜಿಎಫ್ ಬಳಿಕ ಕನ್ನಡ ಚಿತ್ರರಂಗವನ್ನು ಭಾರತ ಹಾಗಿರಲಿ, ವಿಶ್ವವೇ ಕೊಂಡಾಡುತ್ತಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ತೆಲುಗು ಸಿನಿಮಾಗಳಿಗೆ ಕೂಡ ಪೈಪೋಟಿ ನೀಡಿ ಗೆದ್ದು ಬೀಗಿವೆ. ಹೀಗಾಗಿ ಇನ್ಮುಂದೆ ಬಾಲಿವುಡ್ ಸ್ಟಾರ್ ನಟರೂ ಕೂಡ ಕನ್ನಡದಲ್ಲಿ ನಟಿಸಿದರೆ ಅಚ್ಚರಿಯೇನೂ ಇಲ್ಲ.
Appu Re-Release: 'ಅಪ್ಪು' ಶತದಿನ ಸಂಭ್ರಮದ ಅಪರೂಪದ ವೀಡಿಯೋ ವೈರಲ್, ಇನ್ನೂ ನೋಡಿಲ್ವಾ ..!?
ಈ ಮೊದಲು ಕನ್ನಡದಲ್ಲಿ ಜಾಕಿ ಶ್ರಾಫ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಸೇರಿದಂತೆ ಹಲವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಒನ್ನೊಬ್ಬರು ನಟರ ಸರದಿ.. ಅದು ಅನುರಾಗ್ ಕಶ್ಯಪ್. ಸದ್ಯ ಅವರು ಕನ್ನಡದಲ್ಲಿ ಮೊಟ್ಟಮೊದಲ ಪಾತ್ರ ಮಾಡುತ್ತಿದ್ದಾರೆ. ಬಳಿಕ ಇಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾರೋ ಅಥವಾ ಹೀಗೆ ಬಂದು ಹಾಗೆ ಮಾಯವಾಗುತ್ತಾರೋ ಎಂಬುದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.