
ಡಾ ರಾಜ್‌ಕುಮಾರ್ (Dr Rajkumar) ಕಿರಿಯ ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಹುಟ್ಟುಹಬ್ಬ ಇದೇ ತಿಂಗಳು 17ಕ್ಕೆ. ನಾಳೆ, ಅಂದರೆ 14 ಮಾರ್ಚ್ 2025ರಂದು ಪುನೀತ್ ನಟನೆಯ ಮೊಟ್ಟಮೊದಲ ಸಿನಿಮಾ ಅಪ್ಪು ಮರುಬಿಡುಗಡೆ ಆಗಲಿದೆ. ಇದೇ ವೇಳೆ, ಅಪ್ಪು ಬದುಕಿದ್ದಾಗ ಮಾಡುತ್ತಿದ್ದ ಸಮಾಜ ಸೇವೆಯ ಕೆಲಸಕಾರ್ಯಗಳ ಬಗೆಗಿನ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದನ್ನೀಗ ಪುನೀತ್ ಪತ್ನಿ ಅಶ್ವಿನಿ ಪುನೀತ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಿದ್ದರೆ ಏನೆಲ್ಲಾ ನಡೆಯುತ್ತಿವೆ ಸಮಾಜ ಸೇವೆ? ಮುಂದೆ ನೋಡಿ..
*ಪ್ರತಿವರ್ಷ ಮಕ್ಕಳಿಗೆ ಐ-ಸ್ಕ್ರೀನಿಂಗ್.
*ನವೆಂಬರ್ ಮೊದಲ ವಾರದಲ್ಲಿ ಕಾಯಕ.
*ಕ್ಯಾಂಪ್‌ನಿಂದ ನವೆಂಬರ್ 13 ರಂದು ರಿಪೋರ್ಟ್.
*ದೃಷ್ಟಿ ದೋಷ ಇರುವವರಿಗೆ ನವೆಂಬರ್ 14 ರಂದು ಚಿಕಿತ್ಸೆ, ಬಳಿಕ, ಕನ್ನಡಕ ವಿತರಣೆ.
*150 ರಿಂದ 200 ಮಕ್ಕಳಿಗೆ ಕನ್ನಡಕ ವಿತರಣೆ, ಕೆಲವೊಮ್ಮೆ ಹೆಚ್ಚೂ ಆಗಬಹುದು.
*ಕಣ್ಣಿನ ದುಬಾರಿ ಶಸ್ತ್ರ ಚಿಕಿತ್ಸೆಗೂ ನೆರವು.
*40,000 ಮಕ್ಕಳಿಗೆ 'ಆಶಾಕಿರಣ' ಅಡಿಯಲ್ಲಿ ನೆರವು.
*ಈ ಎಲ್ಲ ಕಾರ್ಯಕ್ಕೆ ಡಾ ರಾಜ್‌ಕುಮಾರ್ ಐ ಫೌಂಡೇಶನ್ ಸಾಥ್.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪುನೀತ್ ರಾಜ್‌ಕುಮಾರ್ ಚಾರಿಟೆಬಲ್ ಟ್ರಸ್ಟ್ ಉದ್ಘಾಟನೆ. ಇದೇ ವೇಳೆ ಮಠದಲ್ಲಿ ದೃಷ್ಟಿದೋಷ ಹೊಂದಿರುವ ಮಕ್ಕಳಿಗೆ ಕನ್ನಡಕ ವಿತರಣೆ ಮಾಡಲಾಯ್ತು.
Appu Re-Release: 'ಅಪ್ಪು' ಶತದಿನ ಸಂಭ್ರಮದ ಅಪರೂಪದ ವೀಡಿಯೋ ವೈರಲ್, ಇನ್ನೂ ನೋಡಿಲ್ವಾ ..!?
ಈ ಎಲ್ಲಾ ಸಮಾಜಮುಖಿ ಕೆಲಸಕಾರ್ಯಗಳು ನಟ ಪುನೀತ್ ರಾಜ್‌ಕುಮಾರ್ ಬದುಕಿದ್ದ ಕಾಲದಲ್ಲಿ ಶುರುವಾಗಿದೆ. ಆದರೆ, ಈಗ ಅದನ್ನು ಅವರ ಪತ್ನಿ ಅಶ್ವಿನಿಯವರು ಬಿಡದೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬದುಕಿದ್ದಾಗ ತಾವು ಮಾಡುತ್ತಿದ್ದ ಯಾವ ಸಮಾಜ ಸೇವೆಯ ಬಗ್ಗೆಯೂ ಪುನೀತ್ ಹೇಳಿಕೊಂಡಿರಲಿಲ್ಲ. ಆದರೆ, ಅವರು ಅಗಲಿದ ಮೇಲೆ ಎಮೋಶನಲ್ ಫೀಲ್‌ನಲ್ಲಿ ಹಲವರು ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಸಮಾಜ ಸೇವೆ ಮಾಡುತ್ತಿರುವ ಯಾವುದೇ ವ್ಯಕ್ತಿ, ಅದು ಪುನೀತ್ ಆಗಿರಲಿ ಅಥವಾ ಸುದೀಪ್ ಆಗಿರಲಿ, ಅದನ್ನು ಯಾರೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಅದರ ಪ್ರಯೋಜನ ಪಡೆದವರು ಯಾವತ್ತೋ ಒಂದು ದಿನ ಅದನ್ನು ಸಮಾಜಕ್ಕೆ ತಿಳಿಸುತ್ತಾರೆ. 'ಕೆರೆಯ ನೀರನ್ನು ಕೆರೆಗೆ ಚೆಲ್ಲಿ' ಎಂಬಂತೆ ಸದ್ದಿಲ್ಲದೇ ಇಂಥ ಸಮಾಜ ಸೇವೆ ನಡೆಯುತ್ತಲೇ ಇರುತ್ತವೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಹಲವು ಮಾಡಿರುವ ಇಂಥ ಜನೋಪಯೋಗಿ ಕೆಲಸಗಳು ಜನಸಾಮಾನ್ಯರಿಗೆ ತಲುಪಿವೆ. ಜೊತೆಗೆ, ಕೆಲವೊಂದಿಷ್ಟು ಸುದ್ದಿಯಾಗಿವೆ. ಸುದ್ದಿಯಾಗದಿರುವುದು ಸಾಕಷ್ಟು ಇರಬಹುದು!
ಇದು.. ಇದು.. ವೈರಲ್ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್ ಬಗ್ಗೆ ಕಿಶೋರ್ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.