
ಬಾಲಿವುಡ್ ಯಂಗ್ ಮ್ಯಾನ್ ಅಮಿತಾಬ್ ಬಚ್ಚನ್ ತಮ್ಮ ಟ್ಟಿಟರ್ ಖಾತೆಯಲ್ಲಿ ಐತಿಹಾಸಕ ಫೊಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ದಕ್ಷಿಣ ಭಾರತೀಯ ಪ್ರಖ್ಯಾತ ನಟರ ಮಕ್ಕಳೊಂದಿಗೆ ಕೆಲಸ ಮಾಡಿದ್ದು ಐತಿಹಾಸಿಕ ಕ್ಷಣವೆಂದೂ ಬಣ್ಣಿಸಿದ್ದಾರೆ. ಅಷ್ಟಕ್ಕೂ ಡಾ.ಶಿವರಾಜ್‌ಕುಮಾರ್ ಜೊತೆ ಇನ್ನು ಯಾರಿದ್ದಾರೆ?
ಫಾಲ್ಕೆ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ 'ದಾದಾ'- ವಿಡಿಯೋ
ಹೌದು! ಅಮಿತಾಬ್ ಹಾಗೂ ಜಯಾ ಬಚ್ಚನ್ 'ದಕ್ಷಿಣ ಭಾರತದ ಮೂವರು ಲೆಜೆಂಡರಿ ನಟರ ಪುತ್ರರೊಂದಿಗೆ ಕೆಲಸ ಮಾಡಿರುವುದು ಸಂತಸದ ಕ್ಷಣ' ಎಂದು ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆ. 'FB 2619- ನನಗೂ ಹಾಗೂ ಜಯಾಗೂ ಇದು ಐತಿಹಾಸಿಕ ಕ್ಷಣ. ಭಾರತೀಯ ಚಿತ್ರರಂಗದ ದಂತ ಕಥೆ ಎನಿಸಿಕೊಂಡವರ ಮಕ್ಕಳೊಂದಿಗೆ ಕೆಲಸ ಮಾಡಿದ್ದು ನಮಗೆ ಹೆಮ್ಮೆ. ತೆಲುಗಿನ ನಾಗೇಶ್ವರ ರಾವ್ ಪುತ್ರ ನಾಗಾರ್ಜುನ -ಅಕ್ಕಿನೇನಿ, ಡಾ.ರಾಜ್ ಅವರ ಪುತ್ರ ಶಿವರಾಜ್‌ಕುಮಾರ್, ತಮಿಳಿನ ಶಿವಾಜಿ ಗಣೇಶನ್ ಮಗ ಪ್ರಭುದೇವ್...' ಎಂದು ಬರೆದುಕೊಂಡಿದ್ದಾರೆ.
"
ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ನಿರ್ಮಾಣವಾಗುತ್ತಿರುವ ಜ್ಯೂವೆಲರಿ ಆ್ಯಡ್ ಶೂಟಿಂಗ್ ಇತ್ತು. ಅದರಲ್ಲಿ ಈ ದಕ್ಷಿಣ ಭಾರತೀಯ ನಟರು ಪಾಲ್ಗೊಂಡ ಅಮೂಲ್ಯ ಕ್ಷಣದಲ್ಲಿ ಕ್ಲಿಕ್ಕಿಸಿದ ಫೋಟೋ ಇದು.
ಸ್ಯಾಂಡಲ್‌ವುಡ್ ಚಕ್ರವರ್ತಿಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಗರಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.