ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ದಂಪತಿ ಒಡೆತನದ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಎರಡನೇ ಚಿತ್ರ ‘ಮಾಯಾಬಜಾರ್’ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯಕ್ಕೆ ಚಿತ್ರಕ್ಕೆ ಸಂಪೂರ್ಣವಾಗಿ ಶೂಟಿಂಗ್ ಮುಗಿದಿದ್ದು, ಮುಂದಿನ ತಿಂಗಳು ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇನ್ನೇನು ಸಿನಿಮಾ ಸೆನ್ಸಾರ್ ಅಂಗಳಕ್ಕೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.
ರಾಧಾ ಕೃಷ್ಣ ಈ ಚಿತ್ರದ ನಿರ್ದೇಶಕರು. ಪ್ರಕಾಶ್ ರೈ, ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಚೈತ್ರಾ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು. ‘ಇದು ಕ್ಯಾರೆಕ್ಟರ್‌ಗಳ ಮೇಲೆ ನಿಂತಿರುವ ಸಿನಿಮಾ. ಹೀಗಾಗಿ ಇಂಥವರು ಹೀರೋ, ಮತ್ತೊಬ್ಬರು ವಿಲನ್, ನಾಯಕಿ ಅಂತೇನು ಇಲ್ಲ. ಕತೆಗೆ ಪೂರಕ ಎನಿಸುವಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಬಂದು ಹೋಗುತ್ತದೆ. ನನ್ನ ಮೊದಲ ಚಿತ್ರಕ್ಕೆ ಪಿಆರ್‌ಕೆ ಬ್ಯಾನರ್ ಜತೆಯಾಗಿದ್ದು, ಸ್ಟಾರ್ ನಟ, ನಟಿಯರು ನಟಿಸಿದ್ದಾರೆ. ಇದು ನನ್ನ ಅದೃಷ್ಟ. ಜಗತ್ತೇ ಒಂದು ಮಾಯಾಬಜಾರ್, ಇಲ್ಲಿ ಏನೆಲ್ಲ ನಡೆಯುತ್ತವೆ ಎಂಬುದು ಚಿತ್ರದ ಕತೆ. ನೋಟ್ ಬ್ಯಾನ್ ಒಂದು ಅಂಶ ಚಿತ್ರದಲ್ಲಿ ಇರಲಿದೆ. ಇವತ್ತಿನ ನಮ್ಮ ಬದುಕಿನ ಚಿತ್ರಣ ಈ ಚಿತ್ರದಲ್ಲಿದೆ’ ಎಂದರು ರಾಧಾ ಕೃಷ್ಣ.
ಶುರುವಾಯ್ತು ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಹವಾ!
undefined
ರಾಜ್ ಬಿ ಶೆಟ್ಟಿಅವರದ್ದೂ ವಿಶೇಷ ಪಾತ್ರ. ಯಾರೂ ಏನೇ ಆಗಲಿ. ತಾನು ಮಾತ್ರ ಬೆಳೆಯಬೇಕು. ಹಣ ಮಾಡಬೇಕು. ಬದುಕಿನಲ್ಲಿ ದೊಡ್ಡದಾಗಿ ಬೆಳೆಯಬೇಕು ಎಂದು ಯೋಚಿಸುತ್ತ ತನಗೆ ಅರಿವಿಲ್ಲದಂತೆ ಬೇರೊಂದು ದಾರಿಗೆ ಹೋಗುವ ಪಾತ್ರದಲ್ಲಿ ರಾಜ್ ಬಿ ಶೆಟ್ಟಿಕಾಣಿಸಿಕೊಂಡಿದ್ದಾರೆ. ಅವರಿಗೆ ‘ಒಂದು ಮೊಟ್ಟೆಯ ಕತೆ’ ಚಿತ್ರದ ನಂತರ ಸಿಕ್ಕ ಅವಕಾಶ ಇದಂತೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ‘ಜೋಡಿ ಹಕ್ಕಿ’ ಧಾರಾವಾಹಿಯ ಚೈತ್ರಾ ರಾವ್ ಅವರದ್ದು ಕಾಲೇಜು ವಿದ್ಯಾರ್ಥಿನಿ ಪಾತ್ರ. ಸಾಕಷ್ಟುಮುಗ್ದತೆಯಿಂದ ಕೂಡಿದ ಪಾತ್ರವಂತೆ. ಸಾಧು ಕೋಕಿಲ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಇಲ್ಲಿ ಕಾಣಿಸಿದ್ದು, ಮೂರು ಗೆಟಪ್‌ಗಳು ಅವರಿಗೆ ಇವೆ. ಜತೆಗೆ ಕಾಮಿಡಿ ಮಾಡುವ ಹೊಸ ವಿಲನ್ ಅವರೊಳಗೆ ಇದ್ದಾನೆಂದು ಈ ಚಿತ್ರದಲ್ಲಿ ನೋಡಬಹುದಂತೆ.
ಅಪ್ಪು ಬರೀ ಡ್ಯಾನ್ಸ್ ಮಾತ್ರವಲ್ಲ, ಮ್ಯಾಜಿಕ್ಕೂ ,ಮಾಡ್ತಾರೆ ಗುರು..!
ಚಿತ್ರದ ಕೊನೆಯಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠದಲ್ಲಿ ಒಂದು ಹಾಡು ಬರಲಿದೆ. ಅದು ಚಿತ್ರದ ಟೈಟಲ್ ಸಾಂಗ್. ಈ ಹಾಡಿಗೆ ಪುನೀತ್ ರಾಜ್‌ಕುಮಾರ್ ಅವರು ಹೆಜ್ಜೆ ಹಾಕಿದ್ದಾರೆ. ‘ನಾನು ಎಸ್‌ಪಿಬಿ ಹಾಡಿಗೆ ಡ್ಯಾನ್ಸ್ ಮಾಡಿಲ್ಲ, ನನ್ನ ಚಿತ್ರಕ್ಕೆ ಅವರು ಹಾಡಿನಲ್ಲ ಎನ್ನುವ ಕೊರತೆ ಈ ಚಿತ್ರದ ಮೂಲಕ ಈಡೇರಿದೆ. ನಾನು ರಾಧಾಕೃಷ್ಣ ಅವರ ಜತೆಗೆ ಸಿನಿಮಾ ಮಾಡಬೇಕು ಎಂದುಕೊಂಡಾಗ ಅವರು ಮಾಡಿದ್ದ ಒಂದು ಕಿರು ಚಿತ್ರ ನೋಡಿದೆ. ತುಂಬಾ ಚೆನ್ನಾಗಿತ್ತು. ಮಾಯಾಬಜಾರ್ ಕೂಡ ಹಾಗೆ ಚೆನ್ನಾಗಿರುವ ಸಿನಿಮಾ. ಇದು ಆರ್ಟಿಸ್ಟ್‌ಗಳನ್ನು ನಂಬಿಕೊಂಡು ಬರುತ್ತಿರುವ ಸಿನಿಮಾ’ ಎಂದರು ಪುನೀತ್ ರಾಜ್‌ಕುಮಾರ್. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.