
ತಮ್ಮ ಈ ಹೊಸ ಸಿನಿಮಾ ಕುರಿತು ಹೇಳಿಕೊಳ್ಳಲು ತಂಡದ ಸಮೇತರಾಗಿ ಮಾಧ್ಯಮಗಳ ಮುಂದೆ ಬಂದರು. ಟೈಟಲ್ ಬಿಡುಗಡೆಯನ್ನೇ ಒಂದು ಟೀಸರ್ ರೀತಿಯಲ್ಲಿ ರೂಪಿಸಿದ್ದ ಪ್ರಥಮ್, ಅದರ ಪ್ರದರ್ಶನ ನಂತರ ಎಂದಿನಂತೆ ಅವರ ಮಾತುಗಾರಿಕೆ ಶುರುವಾಯಿತು. ‘ಈ ಚಿತ್ರದ ಟೈಟಲ್ ಪ್ರಕಟಿಸುವ ಮುನ್ನ ನಾನು ನಟ ಸುದೀಪ್ ವರೊಂದಿಗೆ ಮಾತನಾಡಿದೆ. ಯಾಕೆಂದರೆ ಅವರು ಕೋಟಿಗೊಬ್ಬ 3 ಸಿನಿಮಾ ಮಾಡುತ್ತಿದ್ದಾರೆ. ನನ್ನ ಚಿತ್ರಕ್ಕೆ ಒಂದು ಲಕ್ಷ ಕಡಿಮೆ.
ಕೊಟ್ಟ ಮಾತು ಉಳಿಸ್ಕೊಂಡು ಮತ್ತಷ್ಟು ಒಳ್ಳೆ ಹುಡ್ಗನಾದ ಪ್ರಥಮ್
ಹೀಗಾಗಿ ಸುದೀಪ್ ಅವರು ಅನುಮತಿ ಕೊಟ್ಟಮೇಲೆಯೇ 99 ಲಕ್ಷಕ್ಕೊಬ್ಬ ಹೆಸರು ಘೋಷಣೆ ಮಾಡೋಣ ಎಂದುಕೊಂಡೆ. ಸುದೀಪ್ ಅವರು ಅನುಮತಿ ಕೊಟ್ಟಿದ್ದಾರೆ. ಈ ಕಾರಣಕ್ಕೆ ಧೈರ್ಯದಿಂದ ಇದೇ ಟೈಟಲ್ನಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಈಗ ನಟ ಭಯಂಕರ ಸಿನಿಮಾ ತೆರೆಗೆ ಸಜ್ಜಾಗಿದೆ. ಇದರ ಜತೆಗೆ ಈ ಹೊಸ ಸಿನಿಮಾ ಶುರು ಮಾಡುತ್ತಿದ್ದೇವೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ತೆರಳುತ್ತಿದ್ದೇವೆ’ ಎಂದು ಪ್ರಥಮ್ ಹೇಳಿಕೊಂಡರು.
'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್
ಮಹಾಭಾರತದಿಂದ ಸ್ಫೂರ್ತಿಗೊಂಡು ರೂಪಿಸುತ್ತಿರುವ ಈ ಚಿತ್ರಕ್ಕೆ ಬೆಟ್ಟಿಂಗ್ ದಂಧೆಯ ಕರಾಳ ಮುಖವನ್ನು ಈ ಚಿತ್ರದ ಮೂಲಕ ಹೇಳಲಿದ್ದಾರಂತೆ. ನಿಲೇಶ್ ಎಚ್ ಪಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅಣಜಿ ನಾಗರಾಜ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಪ್ರಧ್ಯೋತನ್ ಸಂಗೀತ ಇದೆ. ಹಿರಿಯ ನಟ ಉಮೇಶ್ ಅವರು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಾನು ಈ ಹಿಂದೆ ಪಾದರಸ ಚಿತ್ರಕ್ಕೆ ಸಹ ನಿರ್ಮಾಪಕನಾಗಿದ್ದೆ. ನನ್ನ ಬ್ಯಾನರ್ನಲ್ಲಿ ಪ್ರಥಮ್ ಅವರಿಗೆ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ.
ಒಂದು ವರ್ಷದ ಹಿಂದೆ ಶುರುವಾದ ಸಿನಿಮಾ. ಈಗ ಅದು ಶೂಟಿಂಗ್‌ಗೆ ಹೋಗುತ್ತಿದೆ. ಒಳ್ಳೆಯ ಸಿನಿಮಾ ಎಂಬುದು ನನ್ನ ಅನಿಸಿಕೆ’ ಎಂದರು ನಿಲೇಶ್. ಅಂದಹಾಗೆ ನಟನೆ ಜತೆಗೆ ಪ್ರಥಮ್ ಅವರೇ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಚಿತ್ರದ ಪ್ರಕಟಣೆ ಜತೆಗೆ ಪ್ರಥಮ್ ತಮ್ಮ ಹುಟ್ಟು ಹಬ್ಬವನ್ನೂ ಆಚರಿಸಿಕೊಂಡರು. ನಟ ಅಭಿಷೇಕ್ ಅಂಬರೀಶ್ ಆಗಮಿಸಿ ಕೇಕ್ ಕಟ್ ಮಾಡಿ ಪ್ರಥಮ್ ಅವರಿಗೆ ಶುಭ ಕೋರಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.