'ಸಿಂಗ'ನ ಸಿಂಪಲ್ ಸುಂದರಿ ಮೇಘನಾ ರಾಜ್ ಪತಿಗಾಗಿ ಮತ್ತೊಮ್ಮೆ ಚಿತ್ರದಲ್ಲಿ ಹಾಡು ಹೇಳಲು ಸಜ್ಜಾಗಿದ್ದಾರೆ, ಇದು ತಪ್ಪಾಂಗುಚಿ ಸಾಂಗ್ ಅಂತೆ...ಅಷ್ಟಕ್ಕೂ ಯಾವ ಚಿತ್ರಕ್ಕೆ. ನಾವು ಹೇಳ್ತೀವಿ ಕೇಳಿ...
ಕನ್ನಡ ಚಿತ್ರರಂಗದಲ್ಲಿ ನಾಯಕ ನಟರು ಗಾಯಕರಾಗಿ ಮಿಂಚುವುದು ಕಾಮನ್. ಆದ್ರೆ ನಟಿಯರು ಗಾಯಕಿಯಾಗಿ ತೊಡಗಿಸಿಕೊಳ್ಳುವುದು ಬಲು ಅಪರೂಪ. ಆದರೆ ಆ ಅಪರೂಪಗಳಲ್ಲಿ ಒಬ್ಬರಾಗುತ್ತಿದ್ದಾರೆ ಮೇಘನಾ ರಾಜ್.
2014ರಲ್ಲಿ ಮಲಯಾಳಂನ '100 ಡಿಗ್ರಿ ಸೆಲ್ಷಿಯಸ್' ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದ್ದರು ಮೇಘನಾ. ಆನಂತರ ಶ್ರೀನಗರ್ ಕಿಟ್ಟಿ ಅಭಿನಯದ 'ಬಹುಪರಾಕ್' ಚಿತ್ರದಲ್ಲೂ ಹಾಡೊಂದನ್ನು ಹೇಳಿ ನಟನೆಗೂ ಸೈ, ಹಿನ್ನೆಲೆ ಗಾಯನಕ್ಕೂ ಸೈ ಎಂದು ತೋರಿಸಿ ಕೊಟ್ಟಿದ್ದರು. ಆ ನಂತರ ನಟನೆಯಲ್ಲಿ ಬ್ಯುಸಿಯಾದ ಮೇಘನಾ ಹಾಡುವುದರಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನವೀನ್ ಸಜ್ಜು ಜೊತೆ ಕಮ್ ಬ್ಯಾಕ್ ಮಾಡಿದ್ದು ಪತಿ 'ಸಿಂಗಾ' ಚಿತ್ರದ 'ವಾಟ್ ಎ ಬ್ಯೂಟಿಫುಲ್ ಹೌದಾ ಶಿವಶಿವ' ಹಾಡಿನ ಮೂಲಕ.
undefined
ಶಿಳ್ಳೆ ಹೊಡೆದು 'ಸಿಂಗ'ನ ಮನಸ್ಸು ಕದ್ದ ಮೇಘನಾ ರಿಯಲ್ ಲೈಘ್ ಇರೋದೇ ಹೀಗೆ!
ಇತ್ತೀಚಿಗೆ ಅದ್ಧೂರಿಯಾಗಿ ಬಿಡುಗಡೆಯಾದ 'ಶಿವಾರ್ಜುನ' ಟ್ರೇಲರ್ ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿದೆ. ಸಾಧು ಕೋಕಿಲ ಪುತ್ರ ಸುರಾಗ್ ಸಂಯೋಜನೆ ಹಾಗೂ ಕವಿರಾಜ್ ಬರೆದಿರುವ ಮಾಸ್ ಸಾಂಗ್‌ಗೆ ಮೇಘನಾ ಧ್ವನಿಯಾಗಲಿದ್ದಾರೆ ಎನ್ನಲಾಗಿದೆ.
ಮಾರ್ಚ್ 12ರಂದು ಶಿವಾರ್ಜುನ್ ಚಿತ್ರ ತೆರೆಕಾಣುವಂತೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಧ್ರುವ ಸರ್ಜಾಗೂ ಇದ್ದಾರೆ ಅಪರೂಪದ ತಂಗಿ; ಇವರ ಹಿಂದಿದೆ ಮನಮಿಡಿಯುವ ಕಥೆ!