
- ಹೀಗೆ ಹೇಳಿಕೊಂಡಿದ್ದು ನಟ ಸೂರಜ್ ಗೌಡ. ಅದು ‘ನಿನ್ನ ಸನಿಹಕ್ಕೆ’ ಚಿತ್ರದ ಪತ್ರಿಕಾಗೋಷ್ಟಿ. ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾರೆ. ಸುಮನ್ ಜಾದೂಗರ್ ಬದಲು, ಸೂರಜ್ ಗೌಡ ಅವರೇ ನಿರ್ದೇಶನದ ಕುರ್ಚಿಯಲ್ಲಿ ಕೂತು ಸಿನಿಮಾ ಮುಗಿಸಿದ್ದಾರೆ. ಅದಕ್ಕೆ ಕಾರಣ ಸುನಿಲ್ ಜಾದೂಗರ್ ಅವರಿಗೆ ಆ್ಯಕ್ಸಿಡೆಂಟ್ ಆಗಿದ್ದು. ಹೀಗಾಗಿ ಅವರು ಇಡೀ ಚಿತ್ರಕ್ಕೆ ಷೋ ರನ್ನರ್ ಎನ್ನುವ ಹೊಸ ಪಟ್ಟದಲ್ಲಿ ಕೂತು ಸೂರಜ್ ಗೌಡ ಅವರಿಂದ ಸಿನಿಮಾ ನಿರ್ದೇಶನ ಮಾಡಿಸಿದ್ದಾರೆ.
ನಟನೆ, ನಿರ್ದೇಶನ ಎರಡನ್ನೂ ಒಟ್ಟಿಗೆ ನಿಭಾಯಿಸಿರುವ ಸೂರಜ್ ಮಾತಿಗೆ ನಿಂತರು. ‘ಇಂಥ ಒಳ್ಳೆಯ ತಂಡ ಇದ್ದರೆ ಖಂಡಿತ ಸಿನಿಮಾ ನಿರ್ದೇಶನ ಮಾಡಬಹುದು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ನಾನು ಇಲ್ಲಿಯವರೆಗೂ ನಟಿಸಿದ ಸಿನಿಮಾಗಳಲ್ಲಿ ನಟನೆಗಿಂತ ಹೆಚ್ಚಾಗಿ ಸಿನಿಮಾ ಕಲಿತುಕೊಂಡೆ. ಒಂದು ಸಿನಿಮಾ ಎಲ್ಲ ವಿಭಾಗಗಳಲ್ಲಿ ಹೇಗೆ ಕೆಲಸ ಆಗುತ್ತದೆ ಎಂದು ತಿಳಿದುಕೊಂಡೆ. ಅದೇ ತಿಳುವಳಿಕೆ ನನಗೆ ನಿರ್ದೇಶನಕ್ಕೆ ಅನುಕೂಲವಾಯಿತು. ನಿರ್ದೇಶಕರು ಆಸ್ಪತ್ರೆಯಿಂದ ಬಂದ ಮೇಲೆ ಫುಟೇಜ್ ನೋಡಿ, ನೀವೇ ನಿರ್ದೇಶನ ಮುಂದುವರಿಸಿ ಎಂದರು. ತಾತ್ಕಾಲಿಕ ನಿರ್ದೇಶಕನಾಗಿ ಬಂದವನು ಇಡೀ ಚಿತ್ರಕ್ಕೆ ನಾನೇ ನಿರ್ದೇಶಕನಾದೆ. ನಾನೇ ಕತೆ ಮತ್ತು ಚಿತ್ರಕಥೆ ಬರೆದಿದ್ದರಿಂದ ನಿರ್ದೇಶನ ಸುಲಭವಾಯಿತು’ ಎಂದರು ಸೂರಜ್ ಗೌಡ.
ಸೂರಜ್ ಗೌಡ ಕಂಡು ‘ನಿನ್ನ ಸನಿಹಕೆ...’ ಅಂತಿದ್ದಾರೆ ರಾಜ್ ಮೊಮ್ಮಗಳು
ಧನ್ಯಾ ರಾಮ್‌ಕುಮಾರ್ ಮೊದಲ ಬಾರಿಗೆ ನಾಯಕಿ ಆಗಿ ಲಾಂಚ್ ಆಗುತ್ತಿರುವ ಚಿತ್ರವಿದು. ‘ನಮ್ಮ ಸಿನಿಮಾ ಇಷ್ಟುಚೆನ್ನಾಗಿ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಶೂಟಿಂಗ್ ಆದ ಮೇಲೆ ದೃಶ್ಯಗಳನ್ನು ನೋಡಿದಾಗ ನಮ್ಮ ಶ್ರಮ ಸಾರ್ಥಕ ಅನಿಸಿತು. ನಾನು ಹೊಸಬಳು. ಆದರೂ ಎಲ್ಲರ ಸಹಕಾರದಿಂದ ತೆರೆ ಮೇಲೆ ನನ್ನ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಎಂದುಕೊಳ್ಳುತ್ತೇನೆ. ಮೊದಲ ಚಿತ್ರದಲ್ಲೇ ಒಳ್ಳೆಯ ಕೋ-ಸ್ಟಾರ್, ಒಳ್ಳೆಯ ಕತೆ ಸಿಕ್ಕಿದ್ದು ನನ್ನ ಅದೃಷ್ಟ’ ಎಂದರು ಧನ್ಯಾ ರಾಮ್‌ಕುಮಾರ್.
'ಇಷ್ಟ ಇಲ್ಲದಿದ್ರೂ ಒತ್ತಾಯಕ್ಕೆ ಶಿವಣ್ಣ 'ಪೋಲೀಸ್ ಬೇಬಿ' ಹಾಡು ಒಪ್ಕೊಂಡೆ'!
ಈ ಚಿತ್ರದ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡ ಮೇಲೆ ಆ್ಯಕ್ಸಿಡೆಂಟ್ ಆಗಿ ಕೈ, ಬೆನ್ನ ಮೂಳೆಗೆ ಪೆಟ್ಟಾಗಿ ಬೆಡ್ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು. ನಾಲ್ಕೈದು ವಾರ ಬೆಡ್ ಮೇಲೆ ಮಲಗಿರಬೇಕಾಯಿತು. ಆ ಕಾರಣಕ್ಕೆ ಆಸ್ಪತ್ರೆಯಿಂದ ಮರಳಿ ಬಂದ ಮೇಲೂ ಸೂರಜ್ ಅವರೇ ನಿರ್ದೇಶಕರಾಗಿ ಮುಂದುವರಿಯಲಿ ಎಂದು ತಾವೇ ಹೇಳಿದ್ದು ಎಂಬುದು ಸುನೀಲ್ ಜಾದೂಗರ್ ಹೇಳಿಕೊಂಡರು. ಚಿತ್ರಕ್ಕೆ ರಘು ಧೀಕ್ಷಿತ್ ಸಂಗೀತ ನೀಡಿದ್ದಾರೆ.ಅಭಿಲಾಷ್ ಕಳತ್ತಿ ಕ್ಯಾಮೆರಾ ಹಿಡಿದಿದ್ದಾರೆ. ಮಂಜುನಾಥ್ ಹೆಗಡೆ, ಅರುಣಾ ಬಾಲರಾಜ್, ಕರಿಸುಬ್ಬು, ರಜನಿಕಾಂತ್, ಚಿತ್ಕಲಾ ಬಿರಾದರ್, ಸೌಮ್ಯ ಭಟ್ ಚಿತ್ರದಲ್ಲಿ ನಟಿಸಿದ್ದಾರೆ.
ಸೂರಜ್‌ನ ಮಿಸ್ ಮಾಡ್ಕೊಳ್ತೇನೆ, ರೊಮ್ಯಾನ್ಸ್ ಮಾಡೋಕೆ ಮುಜುಗರವಿಲ್ಲ; ರಾಜ್ ಮೊಮ್ಮಗಳ ಮಾತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.