Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!

Published : Feb 09, 2026, 07:03 PM IST
Gilli Nata Darshan Thoogudeepa

ಸಾರಾಂಶ

ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ಹೊರಬಂದ ಬಳಿಕ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡು ಭೇಟಿಗೆ ಪ್ರಯತ್ನಿಸಿದ್ದಾರೆ. ಆದರೆ ಅದೇನಾಯ್ತು? ನೋಡಿ..

ದರ್ಶನ್- ಗಿಲ್ಲಿ ನಟ ಭೇಟಿ?

ಗಿಲ್ಲಿ ನಟ ನಟರಾಜ್ (Gilli Nata), ತಾವು ಬಿಗ್ ಬಾಸ್‌ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಜೈಲಿಗೆ ಹೋಗಿ ನಟ ದರ್ಶನ್ ತೂಗುದೀಪ (Darshan Thoogudeepa) ಅವರನ್ನು ಭೇಟಿಯಾಗಿ ಬರಲು ಹೋಗಿದ್ದು ಎಂದು ಹಲವು ದಿನಗಳಿಂದ ಸುದ್ದಿ ವೈರಲ್ ಆಗುತ್ತಿತ್ತು. ಆದರೆ, ಅದು ಬರೀ ಅಂತೆ-ಕಂತೆಗಳಾಗಿ ಸುತ್ತುತ್ತಿತ್ತು. ಆ ಸುದ್ದಿಗೆ ಬರೀ ರೆಕ್ಕೆಪುಕ್ಕ ಇದ್ದು ಹಾರಾಡುತ್ತಿತ್ತೇ ಹೊರತೂ ಯಾವುದೇ ಆಧಾರ ಅಥವಾ ಕ್ಲಾರಿಟಿ ಸಿಕ್ಕಿರಲಿಲ್ಲ. ಅದರೆ, ಇದೀಗ ಈ ಸುದ್ದಿಗೆ ಕ್ಲಾರಿಟಿ ಸಿಕ್ಕಿದೆ. ಅದೇನು ನೋಡಿ..

'ನಾನು ಮೀಟ್ ಆಗ್ಬೇಕು ಅಂತ ಟ್ರೈ ಮಾಡಿದ್ದು ನಿಜ.. ನಾನು ವಿಚಾರಿಸಿದೆ ಅಲ್ಲಿ ಭೇಟಿ ಆಗಲು ಅವಕಾಶ ಇದೆಯಾ ಅಂತ.. ಅದಕ್ಕೆ ಅವರು ಇಲ್ಲ ಅಂದ್ರು.. ನಮ್ಮ ದರ್ಶನ್ ಅಣ್ಣನ ಅಲ್ಲಿ ನೋಡೋದಕ್ಕಿಂತ, ಅಂದ್ರೆ ಹೊರಗಡೆ ಎಲ್ಲೋ ನೋಡೋದಕ್ಕಿಂತ ಅವರ ಮನೆಗೆ ಹೋಗಿ ಮೀಟ್ ಆಗಿ ಅವರ ಆಶೀರ್ವಾದ ತಗೋಬೇಕು ಅಂತ ಆಸೆ' ಎಂದಿದ್ದಾರೆ ಗಿಲ್ಲಿ ನಟ ನಟರಾಜ್' ಎಂದಿದ್ದಾರೆ ಗಿಲ್ಲಿ ನಟ.

'ದಿ ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟ

ಹೌದು, ಗಿಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಏಕೆಂದರೆ, ದರ್ಶನ್ ನಟನೆಯಲ್ಲಿ ಕಳೆದ ತಿಂಗಳು ಬಿಡುಗಡೆಯಾಗಿದ್ದ 'ದಿ ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ಹೊರಬಂದ ಬಳಿಕ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡು. ಸಹಜವಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದ್ರಿಂದ ಅಲ್ಲಿಗೆ ಹೋಗಿ ಕೇಳಿದ್ದಾರೆ. ಆದರೆ, ಆ ಭೇಟಿ ಸಾಧ್ಯವಾಗಿಲ್ಲ.

ಬಿಗ್ ಬಾಸ್ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಭೇಟಿ?

ಇದೀಗ ಈ ಸಂಗತಿಯನ್ನು ಸ್ವತಃ ಗಿಲ್ಲಿ ನಟ ಅವರೇ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್ ಅವರನ್ನು ತಾವು ಬಿಗ್ ಬಾಸ್ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಭೇಟಿಯಾಗಲು ಪ್ರಯತ್ನಿಸಿದ್ದು ಹೌದು. ಆದರೆ, ಅಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ. ಮುಂದೆ ದರ್ಶನ್ ಮನೆಗೆ ಬಂದ ಮೇಲೆ ತಾವು ಭೇಟಿಯಾಗಿ ಆಶೀರ್ವಾದ ಪಡೆಯವುದು ಪಕ್ಕಾ ಎಂದು ಕೂಡ ಹೇಳಿದ್ದಾರೆ ಗಿಲ್ಲಿ ನಟ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

26 ವರ್ಷದ ಬಳಿಕ ಕನ್ನಡಕ್ಕೆ ಮತ್ತೆ ಬರ್ತಿದ್ದಾರೆ ‘Yaare Neenu Cheluve’ ಕಮಲಿ
Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ