Kichcha Sudeep: 'ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಯಾಕೆ' ಎಂದಿರೋ ಕಿಚ್ಚ ಸುದೀಪ್!

Published : Feb 08, 2026, 02:01 PM IST
Kichcha Sudeep Kanakapura Srinivas

ಸಾರಾಂಶ

ಚಿತ್ರರಂಗವು ಕನಕಪುರ ಶ್ರೀನಿವಾಸ್ ಅವರ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಜೋಗಿ ಪ್ರೇಮ್, ಎಪಿ ಅರ್ಜುನ್ ಬಳಿಕ ಇದೀಗ ಕಿಚ್ಚ ಸುದೀಪ್ ಅವರು ಕನಕಪುರ ಶ್ರೀನಿವಾಸ್ ಅವರಿಗೆ 'ಪರೋಕ್ಷವಾಗಿ' ಮೆಣಸಿನಕಾಯಿ ಅಂದ್ರಾ ಎನ್ನಲಾಗುತ್ತಿದೆ. ಈ ವಿವಾದ ಮುಂದೇನಾಗುತ್ತೆ?

ಕನಕಪುರ ಶ್ರೀನಿವಾಸ್ ವಿವಾದ

ಇತ್ತೀಚೆಗೆ 'ಕಾಟನ್ ಪೇಟೆ' ಸುದ್ದಿಗೋಷ್ಟಿ ವೇಳೆ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಕನ್ನಡ ಚಿತ್ರರಂಗದ ಹಲವರ ಬಗ್ಗೆ ಮಾತನ್ನಾಡಿದ್ದರು. ಈ ವಿಚಾರವಾಗಿ ಈಗಾಗಲೇ ನಿರ್ದೇಶಕ ಪ್ರೇಮ್ ಅವರು ಕೆರಳಿದ್ದು, ಫಿಲಂ ಚೇಂಬರ್ ಹಾಗೂ ಪೊಲೀಸ್ ದೂರು ದಾಖಲಿಸಿದ್ದಾರೆ. ಮತ್ತೊಬ್ಬರು ನಿರ್ದೇಶಕರಾದ ಎಪಿ ಅರ್ಜುನ್ ಅವರು 'ನಾವೂ ಮಂಡ್ಯದವರು, ನಮಗೂ ಅಗತ್ಯಬಿದ್ದರೆ ಮಾತನ್ನಾಡಲು ಬರುತ್ತೆ' ಎಂದು ಕಿಡಿಕಾರಿದ್ದಾರೆ. ಇದೀಗ, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಇದೇ ವಿಚಾರವಾಗಿ ವಿಭಿನ್ನವಾಗಿ ಮಾತನ್ನಾಡಿದ್ದಾರೆ. ಅದೀಗ ಸಖತ್ ವೈರಲ್ ಆಗುತ್ತಿದೆ.

ಹೌದು, ಕೆಲ ದಿನಗಳ ಹಿಂದೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು, ಡಿಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಪ್ರೇಮ್ ಹಾಗೂ ಅರ್ಜುನ್ ಜನ್ಯಾ ವಿರುದ್ಧ ವಂಚನೆ ಆರೋಪವನ್ನೂ ಮಾಡಿದ್ದರು. ಇದಕ್ಕೆ ಚಿತ್ರರಂಗದಲ್ಲಿ ಹಲವರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿ

ಇದೀಗ ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರನ್ನು ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಆಗ ಮಾತನಾಡುತ್ತೇನೆ

'ಇದು ಸಿಸಿಎಲ್ ಸುದ್ದಿಗೋಷ್ಠಿ. ಸಿಹಿ ತಿನ್ನುವ ಸಂದರ್ಭ. ಈ ವೇಳೆ ಮೆಣಸಿನಕಾಯಿ ಯಾಕೆ? ನಾವು ಕಪ್ ಗೆಲ್ಲಲು 12 ವರ್ಷ ಕಾದಿದ್ದೇವೆ. ನಮ್ಮ ಉತ್ತರಕ್ಕಾಗಿ ನೀವು ಕೂಡ ಸ್ವಲ್ಪ ಕಾಯಿರಿ. ಇನ್ನೊಂದು ವೇದಿಕೆ ಹತ್ತುತ್ತೇನೆ. ಆಗ ಮಾತನಾಡುತ್ತೇನೆ. ಈಗ ಲಾಡು ತಿನ್ನುವ ಸಮಯ, ಮೆಣಸಿನಕಾಯಿ ಅಲ್ಲ. ಇದು 30 ವರ್ಷದ ಅನುಭವದ ಮಾತು' ಎಂದು ಕಿಚ್ಚ ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಅಲ್ಲಿಗೆ, ಚಿತ್ರರಂಗವು ಕನಕಪುರ ಶ್ರೀನಿವಾಸ್ ಅವರ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಜೋಗಿ ಪ್ರೇಮ್, ಎಪಿ ಅರ್ಜುನ್ ಬಳಿಕ ಇದೀಗ ಕಿಚ್ಚ ಸುದೀಪ್ ಅವರು ಕನಕಪುರ ಶ್ರೀನಿವಾಸ್ ಅವರಿಗೆ 'ಪರೋಕ್ಷವಾಗಿ' ಮೆಣಸಿನಕಾಯಿ ಅಂದ್ರಾ ಎನ್ನಲಾಗುತ್ತಿದೆ. ಅದೇನೇ ಇರಲಿ, ಮುಂದಿನ ದಿನಗಳಲ್ಲಿ ಈ ವಿವಾದ ಎಲ್ಲಿಗೆ ಮುಟ್ಟುತ್ತೋ ಎಂದು ಹಲವರು ಮಾತನ್ನಾಡುವಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​
ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಮಾತ್ರ ಅಂಬರೀಷ್.. ಯಾರು ಆ ಮಹಿಳೆ, ನಟಿಯೇ?