ಹೆಣ್ಣುಮಕ್ಕಳು ಜೀವನದಲ್ಲಿ ಆರ್ಥಿಕವಾಗಿ ಗಟ್ಟಿ ಇರಬೇಕು. ಆದಾಯ ಬರುವಂತೆ ಮೂರ್ನಾಲ್ಕು ದಾರಿಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು ಎಂದಿದ್ದಾರೆ ದೀಪಿಕಾ ದಾಸ್.
ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ದೀಪಿಕಾ ದಾಸ್ ನೋಡಲು ಎಷ್ಟು ಬೋಲ್ಡ್ ಆಗಿದ್ದಾರೋ ಅವರ ಲೈಫ್‌ನ ಕೂಡ ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ. ಆಗಾಗ ಸಿನಿಮಾ ಮಾಡ್ತಾರೆ, ಆಗಾಗ ಸೀರಿಯಲ್ ಮಾಡ್ತಾರೆ ಎಲ್ಲಿಂದ ಸಂಪಾದನೆ ಇದೆ? ಕೆಲಸ ಇಲ್ಲದಿದ್ದರೂ ಆಧಾಯ ಬರುವಂತೆ ಏನ್ ಮಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.
'ನಾನು ದುಡಿಯುವುದರಲ್ಲಿ 50% ನನ್ನ ಮೇಲೆ ಖರ್ಚು ಮಾಡಿಕೊಳ್ಳುತ್ತೀನಿ. ಅದು ಉಳಿದ 50% ಹಣವನ್ನು ನಾನು ಉಳಿತಾಯ ಮಾಡುತ್ತೀನಿ. ಹೀಗಾಗಿ ತುಂಬಾ ಕಷ್ಟ ಪಟ್ಟು ದುಡಿಯಲು ಶುರು ಮಾಡಿದ್ದೀನಿ. ನಾನು ಒಂದು ಕೆಲಸ ಮಾಡುತ್ತಿದ್ದೀನಿ ಅಂದ್ರೆ ಅದರಿಂದ 200 ರೂಪಾಯಿ ಶ್ರಮ ಹಾಕುತ್ತೀನಿ 100 ಸಂಭಾವನೆ ಪಡೆದು ಅದರಲ್ಲಿ 50 ರೂಪಾಯಿ ನನಗೆ ಅಂತ ಸೇವ್ ಮಾಡಿಕೊಳ್ಳುತ್ತೀನಿ. ಇವತ್ತು ನಮಗೆ ಜಾಸ್ತಿ ದುಡ್ಡು ಬರಬಹುದು ನಾಳೆ ದಿನ ಇಲ್ಲ ಅಂದ್ರೆ? ನಾವು ಮತ್ತೊಬ್ಬರನ್ನು ಪ್ರಶ್ನೆ ಮಾಡಲು ಆಗಲ್ಲ. ಕೊರೋನಾ ಅಂತ ಸಮಸ್ಯೆ ಬಂದ್ರೆ ಏನ್ ಮಾಡುವುದು? ನಮಗೆ ಅಂತ ನಾವು ಖರ್ಚು ಮಾಡಿಕೊಳ್ಳುವುದು ಮರೆಯಬಾರದು. ಕಡಿಮೆ ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಿಂದ ಹಣ ಬರುವುದು ಏಕೆಂದರೆ ಇದು ಸರ್ಕಾರಿ ಕೆಲಸ ಅಲ್ಲ ಪೆನ್ಶನ್ ಬರುವುದಿಲ್ಲ. ಈ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಹೂಡಿಕೆ ಮಾಡಲು ಶುರು ಮಾಡಬೇಕು. ಒಂದು ಕಡೆ ದೊಡ್ಡದಾಗಿ ಹೂಮದಿದಡಿಕೆ ಮಾಡಬೇಕ ಹಾಗೆ ಮೂರ್ನಾಲ್ಕು ಕಡೆ ಸಣ್ಣದಾಗಿ ಹೂಡಿಕೆ ಮಾಡಿ ಪ್ರಯತ್ನ ಮಾಡಬೇಕು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ದೀಪಿಕಾ ದಾಸ್ ಮಾತನಾಡಿದ್ದಾರೆ.
ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್
' ನಮಗೆ ನಾವೇ ದಾರಿ ಸೃಷ್ಟಿ ಮಾಡಿಕೊಂಡು ಜೀವನ ಕಟ್ಟಿಕೊಳ್ಳಬೇಕು. ಮೂರ್ನಾಲ್ಕು ರೀತಿಯಲ್ಲಿ ನಮಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು. ಈಗ ಯಾರಿಗೂ ಕೂತ್ಕೊಂಡು ಕೆಲಸ ಮಾಡಲು ಆಗುವುದಿಲ್ಲ ಹೀಗಾಗಿ ಮತ್ತೊಂದು ದಾರಿಯನ್ನು ಹುಡುಕಿಕೊಳ್ಳುತ್ತಾರೆ. ಸಿನಿಮಾ ಸಿರಿಯಲ್ ಜೊತೆ ನಾನು ಬಟ್ಟೆ ಬ್ರ್ಯಾಂಡ್ ಕೂಡ ಹೊಂದಿದ್ದೀನಿ.ಫೈನಾನ್ಸಿಯಲ್ ಫ್ರೀಡಂ ನನಗೆ ಯಾರೂ ಕೊಟ್ಟಿರುವುದು ಅಲ್ಲ ನಾನೇ ತೆಗೆದುಕೊಂಡಿರುವುದು. ನಾನು ಜೀವನದಲ್ಲಿ ಫೈನಾನ್ಸಿಯಲ್ ಫ್ರೀಡಂ ಆಗಿರಬೇಕು ಅಂತಲೇ ಇದ್ದೆ. ಮುಂದಕ್ಕೂ ಯಾರ ಮೇಲೆ ಡಿಪೆಂಡ್ ಆಗುವುದಕ್ಕೆ ಇಷ್ಟವಿಲ್ಲ. ನಮ್ಮ ತಂದೆ ತಾಯಿನೇ ನಮ್ಮ ಮೇಲೆ ಡಿಪೆಂಟ್ ಆಗಿರುವುದಿಲ್ಲ ನಾವು ಯಾಕೆ ಹಾಗೆ ಮಾಡಬೇಕು. ಒಂದು ಪೋಷಕರಿಂದ ಹಾಗೂ ಕೆಲಸದಿಂದ ನನಗೆ ಫೈನಾನ್ಸಿಯಲ್ ಫ್ರೀಡಂ ಸಿಕ್ಕಿದೆ' ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ನಾನು ಸೂಸೈಡ್ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ