ನಾನು ಸೂಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ

ಸ್ನೇಹಿತರು ಜೀವನದಲ್ಲಿ ಎಷ್ಟು ಮುಖ್ಯ? ಕಷ್ಟಕಾಲದಲ್ಲಿ ಯಾರು ಎದ್ದು ನಿಲ್ಲುತ್ತಾರೆ ಎಂದು ಹಂಚಿಕೊಂಡ ರೆಮೋ.


ಬಹುತೇಕರಿಗೆ ಮಜಾ ಟಾಕೀಸ್‌ ರೆಮೋ ಅಂತಲೇ ಪರಿಚಯ ಇವರು. ಆದರೆ ಕನ್ನಡ ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಹಾಗೂ ಆರ್ಕೆಸ್ಟ್ರಾದಲ್ಲಿ ಇವರು ಧ್ವನಿ ಹಲವು ವರ್ಷಗಳಿಂದ ಫೇಮಸ್. ಗಿಟ್ಟ ಹೆಣ್ಣುಮಕ್ಕಳು ರೇಮೋ ರೇಖಾ. ಹಾಡುವುದು, ಮೇಕಪ್‌ ಸ್ಟುಡಿಯೋ ಹೊಂದಿದ್ದು, ಬಡವರಿಗೆ ಫ್ರೀ ವಿದ್ಯಾದಾನ ಮಾಡುದುವು ಹಾಗೂ ಗೆಮ್‌ ಸ್ಟೋನ್ ...ಹೀಗೆ ಮಾಡದ ಒಂದೆರಡು ಕೆಲಸವಿಲ್ಲ. ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಕಂಡು ಸಂಭ್ರಮಿಸುತ್ತಿರುವ ರೇಮೋ ನಂಬುತ್ತಿದ್ದ ದೇವರು ಯಾರು? ಸಹಾಯಕ್ಕೆ ಬರುವ ಸ್ನೇಹಿತರನ್ನು ನೆನಪಿಸಿಕೊಂಡಿದ್ದಾರೆ.  

'ನಾನು ಒಮ್ಮೆ ಸೊಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದೆ ಆಗ ಸಮಯಲ್ಲಿ ನನ್ನ ಸ್ನೇಹಿತೆ ಲಕ್ಷ್ಮಿ ಕರೆ ಮಾಡಿ ಏನ್ ಮಾಡುತ್ತಿದ್ಯಾ ಎಂದು ಕೇಳಿಬಿಟ್ಟರು. ಸಮಯ ಸರಿ ಇಲ್ಲದ ಸಮಯದಲ್ಲಿ ನಾನು ಮೊದಲು ನೆನಪು ಮಾಡಿಕೊಳ್ಳುವುದು ದೇವರು. ಜಾತ ಜೋತಿಷ್ಯವನ್ನು ನಾನು ಹೆಚ್ಚಾಗಿ ನಂಬುತ್ತೀನಿ ಹಾಗೂ ನಾನು ನಂಬುವುದು ಈಶ್ವರನನ್ನು. ಸಂಜೆ 5.30ಯಿಂದ 6.30 ಸಮದಯಲ್ಲಿ ಸೋಮವಾರ ಈಶ್ವರ ದರ್ಶನ ಮಾಡಲು ತುಂಬಾ ಒಳ್ಳೆಯ ಸಮಯ ಎನ್ನುತ್ತಾರೆ. ನಾನು ಅದನ್ನು ಫಾಲೋ ಮಾಡಿದ್ದೀನಿ ನನಗೆ ವರ್ಕ್ ಆಗಿದೆ. ಲಾಜಿಕಲ್ ಕಾರಣಗಳನ್ನು ಕೊಟ್ಟಾಗ ಅದನ್ನು ಫಾಲೋ ಮಾಡಿದಾಗ ವರ್ಕ್ ಆದಾಗ ಖಂಡಿತ ನಂಬುತ್ತೀನಿ' ಎಂದು ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ ರೇಮೋ.

Latest Videos

ರಾತ್ರಿ 11 ಗಂಟೆ ಅಂಬರೀಶ್‌ ಅಂಕಲ್ ಕಾರನ್ನು ಸ್ಪೀಡಾಗಿ ಓಡುಸ್ಕೊಂಡು ಬರ್ತಿದ್ರು ನಾನು ನಿಂತು ನೋಡುತ್ತಿದ್ದೆ: ಧರ್ಮಾ ಕೀರ್ತಿರಾಜ್

'ನಾನು ಮೇಕಪ್ ಸ್ಟುಡಿಯೋವನ್ನು ಓಪನ್ ಮಾಡಿದಾಗ ಅಲ್ಲಿನ ಬಣ್ಣ ಆಯ್ಕೆ ಮಾಡಿದು ಒಳ್ಳೆ ಖುಷಿ ಕೊಟ್ಟಿದೆ. ಅಲ್ಲಿ 10 ಜನರಿಗೆ ಒಬ್ಬರಿಗೆ ಫ್ರೀ ಮೇಕಪ್ ಪಾಠ ಹೇಳಿಕೊಡುತ್ತೀನಿ. ಇಲ್ಲಿ ಸಹಾಯ ಮಾಡುವುದಕ್ಕಿಂತ ಕೆಲಸ ಕೊಡುವುದು ಒಳ್ಳೆಯದು. ನಾಳೆ ಹಾಡುವ ಕೆಲಸ ಇಲ್ಲ ಶೋ ಇಲ್ಲ ಅಂದ್ರೆ ಏನಾದರೂ ಕೆಲಸ ಹುಡುಕಿಕೊಳ್ಳಬೇಕಿದೆ. ಗಣೇಶ ಹಬ್ಬದ ಸಮಯದಲ್ಲಿ ದಿನಕ್ಕೆ ಮೂರ್ನಾಲ್ಕು ಶೋ ಮಾಡುತ್ತಿದ್ದೆ ಆದರೆ ಈಗ ಒಂದು ಶೋ ಅಷ್ಟೇ ನಡೆಯುತ್ತಿದೆ. ಒಂದು ಟೈಮ್‌ನಲ್ಲಿ ನಾವು ಮಿಂಚಬೇಕು ಆಮೇಲೆ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಹೆಸರು ಮಾಡಿದರೂ ಕೂಡ ಎಷ್ಟು ವರ್ಷ ನಿಲ್ಲಲು ಆಗುತ್ತದೆ? ಈಗ ವರ್ಷಕ್ಕೆ ಒಂದಿಷ್ಟು ಹೊಸಬರು ಬರ್ತಿದ್ದಾರೆ. ಜನರು ಅವರು ಬೇಡ ಇವರು ಬೇಕು ಅಂದ್ರೆ ಬದಲಾಯಿಸಬೇಕು. ನಾನು ಶೋ ಮಾಡುತ್ತಿರುತ್ತೀನಿ ಹೊಸ ಹಾಡು ಕೇಳುತ್ತಾರೆ ಆಗ ನನಗೆ ಅಪ್ಡೇಟ್ ಆಗಲು ಸಮಯ ಇರುವುದಿಲ್ಲ ಕಲಿಯಲು ಸಮಯ ಸಿಗುವುದಿಲ್ಲ' ಎಂದು ರೇಮೋ ರೇಖಾ ಹೇಳಿದ್ದಾರೆ. 

2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

click me!