ಕುಸ್ತಿ ಅಖಾಡದಲ್ಲಿ Bhoomi Shetty: ಕೆಂಡದ ಸೆರಗು ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ!

By Vaishnavi ChandrashekarFirst Published Oct 6, 2022, 11:13 AM IST
Highlights

ವಿಭಿನ್ನ ಪಾತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಲು ಸಜ್ಜಾದ ಕಿರುತೆರೆ ನಟಿ ಭೂಮಿ. ಏನಿಸು ಕುಸ್ತಿ  

ಬಿಗ್‌ ಬಾಸ್‌ ಸ್ಪರ್ಧಿ ಭೂಮಿ ಶೆಟ್ಟಿಕುಸ್ತಿ ಅಖಾಡಕ್ಕಿಳಿದಿದ್ದಾರೆ. ಅಂದರೆ ಮೊದಲ ಬಾರಿಗೆ ಕುಸ್ತಿ ಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಲುಕ್ಕು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕುತೂಹಲ ಮೂಡಿಸಿದೆ. ಕಾದಂಬರಿ ಆಧರಿಸಿದ ‘ಕೆಂಡದ ಸೆರಗು’ ಚಿತ್ರದಲ್ಲಿ ಭೂಮಿ ಶೆಟ್ಟಿಕುಸ್ತಿ ಪಟು ಪಾತ್ರದಲ್ಲಿ ನಟಿಸಿದ್ದಾರೆ.

‘ನಾನು ನಾಯಕ ನಟಿಯಾಗಿ ನಟಿಸುತ್ತಿರುವ ಕೆಂಡದ ಸೆರಗು ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ನಾನು ಒಂದು ವಿಭಿನ್ನವಾದ ಪಾತ್ರವನ್ನು ನಿಭಾಯಿಸಿದ್ದೇನೆ. ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ನನ್ನ ಕನಸು ಈ ಚಿತ್ರದ ಮೂಲಕ ಈಡೇರಿದೆ. ತುಂಬಾ ಖುಷಿ ಕೊಟ್ಟಪಾತ್ರ ಮತ್ತು ಸಿನಿಮಾ ಇದು. ಒಳ್ಳೆಯ ಸಮಯಕ್ಕೆ ಒಳ್ಳೆಯ ಕತೆ ಮತ್ತು ಪಾತ್ರದಲ್ಲಿ ನಟಿಸಿದ್ದೇನೆಂಬ ತೃಪ್ತಿ ಇದೆ’ ಎನ್ನುತ್ತಾರೆ ನಟಿ ಭೂಮಿ ಶೆಟ್ಟಿ.

ಸಂಚಿನ ಸುಳಿಯಲ್ಲಿ ಭೂಮಿ ಶೆಟ್ಟಿ, ಪವನ್; ನಿರ್ದೇಶಕರು ಹೇಳಿದ್ದೇನು?

ರಾಕಿ ಸೋಮ್ಲಿ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರವಿದು. ಸಮಾಜದಲ್ಲಿ ಹೆಣ್ಣಿನ ಮೇಲಾಗುವ ಶೋಷಣೆ, ಹಕ್ಕುಗಳ ಮೇಲೆ ಬೆಳಕು ಚೆಲ್ಲುವ ಜತೆಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವ ಸಿನಿಮಾ ಇದಾಗಿದೆ. ಒಂದು ಹಂತದ ಚಿತ್ರೀಕರಣ ಬಾಕಿ ಇದೆ. ಯಶ್‌ ಶೆಟ್ಟಿ, ವರ್ಧನ್‌, ಶೋಭಿತ, ಪ್ರತಿಮಾ, ಮೋಹನ್‌, ಅರ್ಚನ ಚಿತ್ರದಲ್ಲಿ ನಟಿಸಿದ್ದಾರೆ. ವಿಪಿನ್‌ ರಾಜ್‌ ಕ್ಯಾಮೆರಾ, ವಿರೇಶ್‌ ಕಬ್ಳಿ ಸಂಗೀತ ಚಿತ್ರಕ್ಕಿದೆ. ಕೊಟ್ರೇಶ್‌ ಗೌಡ ಚಿತ್ರದ ನಿರ್ಮಾಪಕರು.

ಇನಾಮ್ದಾರ್‌ ಸಿನಿಮಾದಲ್ಲೂ ಭೂಮಿ:

ಜನಾಂಗೀಯ ಸಂಘರ್ಷದ ಕಥೆ ಇರುವ ಸಂದೇಶ್‌ ಶೆಟ್ಟಿ ಆಜ್ರಿ (Sandesh Shetty Ajri) ನಿರ್ದೇಶನದ ‘ಇನಾಮ್ದಾರ್‌’ (Inamdaar) ಚಿತ್ರಕ್ಕೆ ಭೂಮಿ ಶೆಟ್ಟಿ (Bhoomi Shetty) ನಾಯಕಿ. ಈಗಾಗಲೇ ‘ವಸಂತಾ’ ಎಂಬ ಕಲಾತ್ಮಕ ಚಿತ್ರ, ‘ವನಜ’ ಎಂಬ ವೆಬ್‌ಸೀರೀಸ್‌ಗಳಲ್ಲಿ ಭೂಮಿ ಬ್ಯುಸಿ ಇದ್ದಾರೆ. ಈ ಕಡೆ ಟ್ರೈಬಲ್‌ ಗ್ಲಾಮರ್‌ ಪಾತ್ರದ ಮೂಲಕ ಇನಾಮ್ದಾರ್‌ ಚಿತ್ರದಲ್ಲೂ ಮಿಂಚಲಿದ್ದಾರೆ. 'ಇದು ಜನಾಂಗೀಯ ಸಂಘರ್ಷದ ಕಥೆ. ಇಡೀ ಸಂಘರ್ಷ ನನ್ನ ಪಾತ್ರದ ಸುತ್ತ ಇದ್ದರೂ, ನನ್ನದು ಬೇರೊಂದು ಬಗೆಯ ಹೋರಾಟ, ಹುಡುಕಾಟ. ಇಲ್ಲಿ ನನ್ನ ತಂದೆಯದು ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗ, ತಾಯಿಯದು ಪ್ರತಿಷ್ಠಿತ ಇನಾಮ್ದಾರ್‌ ವಂಶ. ಮಗುವಿದ್ದಾಗಲೇ ಕಾಡಿಗೆ ಬಂದ ಹುಡುಗಿಗೆ ತಾನು ತನ್ನ ಬುಡಕಟ್ಟಿನ ರಾಣಿಯಾಗುವ ಬಯಕೆ. ಇದರಲ್ಲಿ ನನ್ನದು ಡಿಗ್ಲಾಮ್‌ ಪಾತ್ರ ಅಲ್ಲ, ನಾನಿಲ್ಲಿ ಕಪ್ಪು ಸುಂದರಿಯಾಗಿ ಕಾಣಿಸಿಕೊಳ್ಳೋದಿಲ್ಲ. ಬದಲಿಗೆ ನನ್ನದು ಟ್ರೈಬಲ್‌ ಗ್ಲಾಮ್‌ ರೋಲ್‌ ಅನ್ನಬಹುದು. ಚಿತ್ರದಲ್ಲೆಲ್ಲೂ ಕಲರಿಸಂ ಇರಲ್ಲ. ಮೇಕಪ್‌, ಗ್ಲಾಮರ್‌ ಜೊತೆಗೇ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳಲಿದ್ದೇನೆ.' ಎಂದಿದ್ದಾರೆ.

ಸುಳಿಯಲ್ಲಿ ಸಿಲುಕಿಕೊಂಡಿರುವ ಸ್ನೇಹಿತರನ್ನು ನಟ-ನಟಿಯರು ಹೇಗೆ ಉಳಿಸಿಕೊಳ್ಳುತ್ತಾರೆ: ಭೂಮಿ ಶೆಟ್ಟಿ

Ladakh ಬೈಕ್‌ ಟ್ರಿಪ್‌:

ಜನವರಿ ತಿಂಗಳಲ್ಲಿ ಮಜಾ ಭಾರತ ನಿರೂಪಣೆ ಮಾಡಿದ ಬಳಿಕ ಭೂಮಿ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.'ಶೀಘ್ರದಲ್ಲಿ ನಾನು ಮತ್ತೊಂದು ಚಿತ್ರಕ್ಕೆ ಸಹಿ ಹಾಕಬಹುದು. ಹೆಚ್ಚಿನ ಪ್ರಮುಖ್ಯತೆ ನೀಡಿರುವ ಪಾತ್ರ ಇದಾಗಲಿದೆ.ಅಫೀಶಿಯಲ್ ಆಗಿ ಸಿನಿಮಾ ಸಹಿ ಮಾಡಿದ ನಂತರ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಸದ್ಯ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿರುವೆ. ತುಂಬಾ ವಿಭಿನ್ನವಾಗಿ ಏನಾದರೂ ಬಂದರೆ ಒಪ್ಪಿಕೊಳ್ಳುವೆ.ಕರ್ನಾಟಕದ ಒಳಗೆ ಬೈಕ್ (Bike) ಮೂಲಕ ಸಾಕಷ್ಟು ಜಾಗಗಳನ್ನು ನೋಡಿರುವೆ.ಅದರಲ್ಲೂ ಎರಡು ದಿನಗಳ ಕಾಲ ಲಡಾಖ್ ಅದ್ಭುತವಾಗಿತ್ತು.ಒಂದು ನಿಮಿಷವೂ ಗಮನ ಕಳೆದುಕೊಳ್ಳಲು ಆಗುವುದಿಲ್ಲ ಎಲ್ಲಿ ಯಾವಾಗ ರಸ್ತೆ ತಿರುವು ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.ರಸ್ತೆಯಲ್ಲಿ Rash ಡ್ರೈವರ್‌ಗಳ ಬಗ್ಗೆ ಎಚ್ಚರವಾಗಿರಬೇಕು. ದಾರಿಯಲ್ಲಿ ನಾವು ಸೈನಿಕರನ್ನು ಭೇಟಿ ಮಾಡಿದೆವು. ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಹಾಗಿಲ್ಲ ಆದರೆ ಅವರು ನಮಗೆ ಒತ್ತಾಯ ಮಾಡಿ ಟೀ ಕೊಟ್ಟರು.' ಎಂದಿದ್ದಾರೆ ಭೂಮಿ.

 

click me!