Kabzaa ಅಮೆಜಾನ್‌ ಪ್ರೈಮ್‌ಗೆ ಉಪೇಂದ್ರ-ಸುದೀಪ್ ಕಬ್ಜ ಓಟಿಟಿ ಹಕ್ಕು ಮಾರಾಟ!

By Vaishnavi Chandrashekar  |  First Published Oct 6, 2022, 10:36 AM IST

ದೊಡ್ಡ ಮೊತ್ತಕ್ಕೆ ಮಾರಾಟವಾಯ್ತು ಕಬ್ಜ ಸಿನಿಮಾ. ಸಿನಿಮಾ ಬಿಡುಗಡೆ ಆದ್ಮೇಲೆ ಮೊತ್ತ ರಿವೀಲ್ ಮಾಡ್ತಾರಂತೆ.


ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ರಿಮಾರ್ಕಬಲ್ ಹಿಸ್ಟರ್ ಕ್ರಿಯೇಟ್ ಮಾಡುತ್ತಿದೆ. ಕೋಟಿ ಬಜೆಟ್ ಸಿನಿಮಾಗಳು ಮಾಡುತ್ತಿದ್ದಾರೆ, ಪ್ಯಾನ್ ಇಂಡಿಯಾ ಸಿನಿಮಾಗಳಾಗುತ್ತಿದೆ, ಉತ್ತರ ಭಾರತದಿಂದ ಸ್ಟಾರ್‌ಗಳು ಸೌತ್ ಕಡೆ ಮುಖ ಮಾಡುತ್ತಿದ್ದಾರೆ. ಹೊಸ ಅಲೆ ಸೃಷ್ಟಿ ಮಾಡಿದ ಕೆಜಿಎಫ್ ಮತ್ತು ಕಾಂತಾರ ನಂತರ ಲಿಸ್ಟ್‌ ಸೇರಿಕೊಂಡಿರುವುದು ಕಬ್ಜ ಸಿನಿಮಾ. ಸ್ಟೋರಿ ಮೇಕಿಂಗ್‌, ಟೈಟಲ್, ಫಿಲ್ಮಂ ಟೀಂ ಪ್ರತಿಯೊಂದು ವಿಚಾರದಲ್ಲೂ ಸುದ್ದಿ ಮಾಡುತ್ತಿರುವುದು ಕಬ್ಜ ಸಿನಿಮಾ.

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್‌ ಕಾಂಬಿನೇಶನ್‌ನ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ ಚಿತ್ರ ಬಿಡುಗಡೆ ದಿನಾಂಕ ರಿವೀಲ್ ಆಗಿಲ್ಲ ಆದರೆ ಓಟಿಟಿ ರೈಟ್ಸ್‌ ಮಾರಾಟವಾಗಿದೆ. ಜನಪ್ರಿಯ ಒಟಿಟಿ ಅಮೆಜಾನ್‌ ಪ್ರೈಮ್‌ಗೆ ಮಾರಾಟಗೊಂಡಿದೆ. ಎಲ್ಲಾ ಭಾಷೆಯ ಓಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ಖರೀದಿಸಿದೆ ಎನ್ನುತ್ತಾರೆ ನಿರ್ದೇಶಕ ಆರ್‌ ಚಂದ್ರು.

Tap to resize

Latest Videos

‘ಓಟಿಟಿ ಪ್ರಸಾರದ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ಗೆ ನೀಡಲಾಗಿದೆ. ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಎಷ್ಟುಮೊತ್ತ ಎಂಬುದು ಸಿನಿಮಾ ಬಿಡುಗಡೆ ಆದ ಮೇಲೆ ತಿಳಿಸಲಾಗುವುದು. ಆದರೆ, ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟಗೊಂಡಿದೆ. ಪ್ರತಿಷ್ಠಿತ ಸಂಸ್ಥೆ ಚಿತ್ರಕ್ಕೆ ದೊಡ್ಡ ಮೊತ್ತ ಕೊಟ್ಟಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಒಳ್ಳೆಯ ಸಿನಿಮಾ ಮಾಡಿದರೆ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ ಎಂಬುದಕ್ಕೆ ಕಬ್ಜ ಸಿನಿಮಾ ಸಾಕ್ಷಿ’ ಎನ್ನುತ್ತಾರೆ ಚಂದ್ರು.

ನನ್ನ ಹಾರ್ಟ್ ಬೆಂಗಳೂರಿನಲ್ಲಿದೆ; 'ಕಬ್ಜ' ಕ್ವೀನ್ ಶ್ರೀಯಾ ಶರಣ್

ಒಂದೇ ದಿನದಲ್ಲಿ 10 ಮಿಲಿಯನ್‌ ಗಡಿ ದಾಟಿದ ಟೀಸರ್:

‘ಕಬ್ಜ’ ಚಿತ್ರದ ಟೀಸರ್‌ ಬಿಡುಗಡೆ ಆದ 24 ಗಂಟೆ ಅವಧಿಯಲ್ಲಿ 10 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಟೀಸರ್‌ ಅಧಿಕೃತವಾಗಿ ಬಿಡುಗಡೆ ಆಗಿದ್ದು, ಈ ಒಂದೇ ಆನಂದ್‌ ಯೂಟ್ಯೂಬ್‌ನಲ್ಲೇ ಟೀಸರ್‌ 10 ಮಿಲಿಯನ್‌ ಗಡಿ ದಾಟುವ ಮೂಲಕ ಹೊಸ ದಾಖಲೆ ಮಾಡಿದೆ. ಒಂದೇ ದಿನದಲ್ಲಿ ಯೂಟ್ಯೂಬ್‌ನಲ್ಲಿ ನಂ.1 ಟ್ರೆಂಡಿಂಗ್‌ ಪಟ್ಟಕ್ಕೇರಿರುವ ‘ಕಬ್ಜ’ ಚಿತ್ರದ ಟೀಸರ್‌ ಸೆ.17ರಂದು ಬಹುಭಾಷಾ ನಟ ರಾಣಾ ದಗ್ಗುಬಾಟಿ ಬಿಡುಗಡೆ ಮಾಡಿದ್ದರು. ಉಪೇಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಿದ್ದ ಟೀಸರ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಣಾ ದಗ್ಗುಬಾಟಿ ಹಾಗೂ ನಟಿ ಶ್ರೀಯಾ ಶರಣ್‌ ಅವರು ಆಗಮಿಸಿದ್ದರು. ಉಪೇಂದ್ರ, ನಿರ್ದೇಶಕ ಆರ್‌ ಚಂದ್ರು, ನಿರ್ಮಾಪಕ ಕೆ ಪಿ ಶ್ರೀಕಾಂತ್‌, ಉದ್ಯಮಿ ಬಿ ಆರ್‌ ಶೆಟ್ಟಿ, ಛಾಯಾಗ್ರಾಹಕ ಎ ಜೆ ಶೆಟ್ಟಿ, ಕಲಾ ನಿರ್ದೇಶಕ ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು. ಟೀಸರ್‌ ಈವೆಂಟ್‌ನಲ್ಲಿ ಚಿತ್ರತಂಡ ಹೇಳಿದ ಮಾತುಗಳು ಇಲ್ಲಿವೆ.

Kabzaa ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್‌; ಚಿತ್ರತಂಡದಿಂದ ಸಕ್ಸಸ್‌ ಮೀಟ್‌

ನಾನು ಉಪ್ಪಿ ಅಭಿಮಾನಿ: ರಾಣಾ ದಗ್ಗುಬಾಟಿ

ಉಪೇಂದ್ರ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್‌ ಇಂಡಿಯಾ ಸಿನಿಮಾ, ಸ್ಟಾರ್‌ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್‌ ವರ್ಷನ್‌ ನೋಡುತ್ತಿದ್ದೆ. ಆಗಲೇ ಅವರು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದಾರೆ. ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ ಕೂಡ. ಅವರ ನಟನೆಯ ‘ಕಬ್ಜ’ ಸಿನಿಮಾ ಖಂಡಿತ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ‘ಕಬ್ಜ’ ಚಿತ್ರದ ನಂತರ ಕನ್ನಡ ಚಿತ್ರರಂಗದಂತ್ತ ಇನ್ನಷ್ಟುದೊಡ್ಡ ಮಟ್ಟದಲ್ಲಿ ಇಡೀ ಇಂಡಿಯಾ ತಿರುಗಿ ನೋಡುತ್ತದೆ.

click me!