ಭೀಮ ಸಿನಿಮಾದ ಖಡಕ್ ವಿಲನ್ ಬ್ಲ್ಯಾಕ್ ಡ್ರ್ಯಾಗನ್ ಮಂಜು ಅವರು ಅಸಲಿಯಾಗಿ ಬೆಳೆದಿದ್ದು ಸ್ಲಮ್‌ನಲ್ಲಿ. ಅವರ ಅಮ್ಮ ಮನೆಗೆಲಸ ಮಾಡುತ್ತಿದ್ದರು. ಇದರ ನಡುವೆಯೂ ಡ್ರಾಗನ್ ಮಂಜು ವಿದ್ಯಾಭ್ಯಾಸ ಮತ್ತು ಜಿಮ್ ಮಾಡಿದ್ದು ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ..
ಬೆಂಗಳೂರು (ಸೆ.09): ಭೀಮ ಸಿನಿಮಾದ ಖಡಕ್ ವಿಲನ್ ಅಜಾನುಬಾಹು ಬಾಡಿ ಬಿಲ್ಡರ್ ಬ್ಲ್ಯಾಕ್ ಡ್ರಾಗನ್ ಮಂಜು ಅವರ ಬಾಲ್ಯ ಜೀವನ ತುಂಬಾ ಕಷ್ಟಕರವಾಗಿತ್ತು. ಸಣ್ಣ ವಠಾದಲ್ಲಿ 7 ಜನ ವಾಸವಿದ್ದು, ಅಮ್ಮ ಮನೆ ಮನೆಗಳಲ್ಲಿ ಕೆಲಸ ಮಾಡಿ ಎಲ್ಲರನ್ನು ಸಾಕಿದ್ದಾರೆ. ಅದರಲ್ಲಿಯೂ ನಾಲ್ವರು ಹೆಣ್ಣು ಮಕ್ಕಳ ನಂತರ ಜನಿಸಿದ ಒಬ್ಬ ಮಗನನ್ನು ಬಾಡಿ ಬಿಲ್ಡರ್ ಮಾಡಿಸುವುದಕ್ಕೆ ತಾನು ಜೀವನ ಪೂರ್ತಿ ದುಡಿದು ಸಂಪಾದಿಸಿದ್ದ ಚಿನ್ನದ ಒಡವೆ, ಅಪ್ಪನ ಬೈಕ್ ಮಾಡಿ ಹಣ ಕೊಟ್ಟಿದ್ದರು. ಆದರೆ, ಮಗನಿಗೆ ಸುಖಕರ ಜೀವನ ಬಂದಿದೆ, ಅಮ್ಮನನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು ಎಂದರೆ ಈಗ ಅವರೇ ಜೀವಂತವಾಗಿಲ್ಲ.
ಈ ಬಗ್ಗೆ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ್ದ ಬಾಡಿ ಬಿಲ್ಡರ್ ಮಂಜು ಅವರು, ನಾವು ಒಂದು ಸಣ್ಣ ವಠಾರದಲ್ಲಿ 11 ಮನೆಗಳಿದ್ದವು. ಅದರಲ್ಲಿ ತುಂಬಾ ಸಣ್ಣ ಮನೆಯಲ್ಲಿ ನಾಲ್ವರು ಅಕ್ಕಂದಿರು ಹಾಗೂ ನಾನೊಬ್ಬ ತಮ್ಮ ಮತ್ತು ಅಪ್ಪ-ಅಮ್ಮ ವಾಸವಾಗಿದ್ದೆವು. ಅದರಲ್ಲಿ ತುಂಬಾ ಬಡತನದಲ್ಲಿಯೇ ಜೀವನ ಮಾಡಿದ್ದೇವೆ. ಅದು ತುಂಬಾ ದೊಡ್ಡ ನೆನಪು, ಮರೆಲಾಗದ ನೆನಪು ಅದು. ಅಲ್ಲಿಂದ ವಾಕೆಬಲ್ ಡಿಸ್ಟೆನ್ಸ್‌ನಲ್ಲಿ ಶಾಲೆ ಇತ್ತು. ಆ ಜರ್ನಿ ತುಂಬಾ ದೊಡ್ಡದು, ಆ ಏರಿಯಾದಲ್ಲಿ ನಾನು ತುಂಬಾ ಪಳಗಿದ್ದೇನೆ. ನಾನು ಹೇಳಿಕೊಳ್ಳುವಷ್ಟು ಓದಿಲ್ಲ. ಆದರೆ, ಪಿಯುಸಿ ಓದಿದ್ದೇನೆ. ಅದು ಕೂಡ ನಾನು ಸಂಜೆ ಕಾಲೇಜಿಗೆ ಹೋಗಿ ಪಿಯುಸಿ ಕಲಿತಿದ್ದೇನೆ. ಬೆಳಗ್ಗೆ ನಾನು ಕೆಲಸಕ್ಕೆ ಹೋಗಿ ಅಪ್ಪ ಅಮ್ಮನ ದುಡಿಮೆಗೆ ಆಸರೆ ಆಗುತ್ತಿದ್ದೆನು. ಸಂಜೆ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದರು.
undefined
ಬೀಪ್ ಪದಗಳನ್ನು ಬಳಸಿರುವ ಖಡಕ್ ಪೊಲೀಸ್ ಪ್ರಿಯಾ; ಭೀಮಾ ನಾಯಕಿಯಾ ರಿಯಲ್ ಗಂಡ ಇವರೇ ನೋಡಿ!
ಬಡತನದಲ್ಲಿದ್ದರೂ ಜಿಮ್‌ನಲ್ಲಿ ಬಾಡಿ ಬಿಲ್ಡ್ ಮಾಡಿದ್ದೇಗೆ ಗೊತ್ತಾ.?
ಯಾವುದನ್ನ ನಾವು ತಿಳಿದುಕೊಳ್ಳದೇ ನೀರಿಗೆ ಇಳಿದರೆ ಅಪಾಯ ಆಗುತ್ತದೆ. ಬಾಡಿ ಬಿಲ್ಡಿಂಗ್ ಪ್ರೋಸೆಸ್ ಎಷ್ಟು ಕಷ್ಟ, ಎಷ್ಟು ಡೀಪ್ ಇದೆ ಎಂದು ತಿಳಿದುಕೊಂಡರೆ ಇದಕ್ಕೆ ಯಾರೂ ಕೈ ಹಾಕುವುದಿಲ್ಲ. ಆದರೆ, ನಾನು ಜಿಮ್‌ಗೆ ಯಾವುದಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡ ನಂತರವೇ ಜಿಮ್‌ಗೆ ಹೋಗಲು ಆರಂಭಿಸಿದೆ. ಅದಕ್ಕೆ ಒಂದು ಜೋಶ್ ಇರುತ್ತದೆ. ಯಾವುದೇ ಕ್ರೀಡಾಪಟುವನ್ನು ನಾವು ನೋಡಿದಾಕ್ಷಣ ಆತನ ಪ್ರತಿಭೆ ಏನಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ, ಯಾವುದೇ ಬಾಡಿ ಬಿಲ್ಡರ್ ಅನ್ನು ನೋಡಿದಾಕ್ಷಣ ಆತನನ್ನು ಸುಲಭವಾಗಿ ಎಲ್ಲರೂ ಗುರುತಿಸಬಹುದು. ನಾವು ಕೂಡ ಅದೇ ರೀತಿ ನೋಡಿಯೇ ಪ್ರೊಫೆಷನ್ ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳಿದರು.
ಜಿಮ್ ಮತ್ತು ಬಾಡಿ ಬಿಲ್ಡಿಂಗ್ ಎನ್ನುವುದಕ್ಕೆ ನಾವು ಒಂದು ಸಾರಿ ಹೋಗಿಬಿಟ್ಟಿದ್ದೇವೆ ಎಂದರೆ ಅದನ್ನು ಪುನಃ ನಾವು ಬಿಡುವುದಕ್ಕೆ ಆಗುವುದಿಲ್ಲ. ಇದಕ್ಕೆ ಖರ್ಚು ಮಾಡಲಿಕ್ಕೆ ಸುಮಾರು ಹಣ ಹೊಂದಿಸಬೇಕಿತ್ತು. ನಾನು ಕೆಲಸ ಮಾಡಿದ ಬಹುತೇಕ ಭಾಗವನ್ನು ಬಾಡಿ ಬಿಲ್ಡಿಂಗ್‌ಗೆ ವ್ಯಯ ಮಾಡುತ್ತಿದ್ದೆನು. ನಾನು ಓಪನ್ ಆಗಿ ಹೇಳಬೇಕೆಂದರೆ ನಮ್ಮ ಮನೆಯಲ್ಲಿದ್ದ ಬೈಕ್ ಹಾಗೂ ಅಮ್ಮನ ಚಿನ್ನದ ಒಡವೆಗಳನ್ನು ಮಾರಿಕೊಂಡು ಜಿಮ್‌ಗೆ ಹಗಿದ್ದೇನೆ. ಆಗ ನಮೆ ಗೊತ್ತಾಗಲಿಲ್ಲ. ಏನು ಮಾಬೇಕು ಎಂಬುದು ತಿಳಿಯದೇ ಜಿಮ್‌ಗೆ ತುಂಬಾ ಹಣ ಖರ್ಚು ಮಾಡಿದ್ದೇನೆ. ನಾನು ಪಟ್ಟ ಶ್ರಮದ ಪ್ರತಫಲವೇ ಈದ ದೇವರು ಕಣ್ತೆರೆದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಮಂಜು ಹೇಳಿದರು.
ಸರ್ಕಾರಿ ನೌಕರಿ ತೊರೆದು ಕಲಾ ಸೇವೆಗೆ ಬಂದ ಮಿಮಿಕ್ರಿ ಗೋಪಿ
ಅಮ್ಮನನ್ನು ಮನೆ ಕೆಲಸಕ್ಕೆ ಹೋಗುವುದನ್ನು ಬಿಡಿಸಲಾಗಲಿಲ್ಲ:
ನಾನು ಬೆಳಕ್ಕೆ ಕೆಲಸಕ್ಕೆ ಹೋಗುತ್ತಿದ್ದೆನು. ನಂತರ ಸಂಜೆಯಿಂದ ಒಬ್ಬ ವ್ಯಕ್ತಿಗೆ ಪರ್ಸನಲ್ ಬಾಡಿಗಾರ್ಡ್ ಆಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ರಾತ್ರಿ ಹೋದರೆ ಮಧ್ಯರಾತ್ರಿ 2 ಗಂಟೆ ಅಥವಾ ಬೆಳಗ್ಗಿನ ಜಾವ 4 ಗಂಟೆಗೆ ವಾಪಸ್ ಬರುತ್ತಿದ್ದೆ. ಅಲ್ಲಿವರೆಗೂ ಅಮ್ಮ ಮತ್ತು ನಮ್ಮನೆ ಪ್ರೀತಿಯ ನಾಯಿ ಇಬ್ಬರೂ ನನಗಾಗಿ ಕಾಯುತ್ತಿದ್ದರು. ನನ್ನಮ್ಮ ಮನೆ ಮನೆಯಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾರೆ. ನಾನು ಅಮ್ಮನ್ನು ಮನೆ ಕೆಲಸಕ್ಕೆ ಹೋಗುವುದನ್ನು ಬಿಡಿಸಬೇಕು ಎಂದು ಹಗಲು-ರಾತ್ರಿ ವಿಶ್ರಮಿಸದೇ ಕೆಲಸ ಮಾಡುತ್ತಿದ್ದೆನು. ಅಮ್ಮನನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು ಎಂದು ಕನಸು ಕಂಡಿದ್ದೆನು. ಆದರೆ, ಕೊನೆಗೂ ನನ್ನಮ್ಮನನ್ನು ಮನೆ ಕೆಲಸಕ್ಕೆ ಹೋಗುವುದನ್ನು ಬಿಡಿಸಲಾಗಲೇ ಇಲ್ಲ. ನನಗೆ ಅಮ್ಮನನ್ನು ಸುಖವಾಗಿ ನೋಡಿಕೊಳ್ಳುವ ಶಕ್ತಿ ಬರುವ ಮುನ್ನವೇ ದೇವರು ಅವರನ್ನು ಕರೆದುಕೊಂಡುಬಿಟ್ಟ ಎಂದು ಮಂಜು ಕಣ್ಣೀರಿಟ್ಟರು.