ತೆಲುಗು ನಟ ಗಗನ್ ಕನ್ನಡ ಸಿನಿಮಾ 'ಗಾಂಗೇಯ' ಹಾಡುಗಳ ಬಿಡುಗಡೆ; ಯಾರೆಲ್ಲಾ ಬಂದಿದ್ರು?

Published : Sep 09, 2024, 11:37 AM IST
ತೆಲುಗು ನಟ ಗಗನ್ ಕನ್ನಡ ಸಿನಿಮಾ 'ಗಾಂಗೇಯ' ಹಾಡುಗಳ ಬಿಡುಗಡೆ; ಯಾರೆಲ್ಲಾ ಬಂದಿದ್ರು?

ಸಾರಾಂಶ

ತೆಲುಗು ಸಿನೆಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಗಗನ್ 'ಗಾಂಗೇಯ' ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಜಯಶೇಖರ್ ರೆಡ್ಡಿ, ರಾಮಚಂದ್ರ ಶ್ರೀನಿವಾಸಕುಮಾರ್ ನಿರ್ಮಾಣ ಮಾಡಿದ್ದಾರೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ 'ಗಾಂಗೇಯ' ಸಿನೆಮಾ ತಯಾರಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಸಿನೆಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಮಾಜಿ ಅಧ್ಯಕ್ಷರಾದ ಭಾ.ಮ. ಹರೀಶ್, ನರಸಿಂಹಲು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ದೊಡ್ಡಪ್ಪ ಚೆಲುವಮೂರ್ತಿ ಮುಂತಾದ ಗಣ್ಯರು ಕನ್ನಡ ಅವತರಣಿಕೆಯ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದರು.

ತೆಲುಗು ಸಿನೆಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಗಗನ್ 'ಗಾಂಗೇಯ' ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಜಯಶೇಖರ್ ರೆಡ್ಡಿ, ರಾಮಚಂದ್ರ ಶ್ರೀನಿವಾಸಕುಮಾರ್ ನಿರ್ಮಾಣ ಮಾಡಿದ್ದಾರೆ.

ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಜಾತಿ,ಧರ್ಮಗಳ ಸಂಘರ್ಷ ಹೆಚ್ಚುತ್ತಿದೆ. ಸರ್ವ ಜಾತಿ,ಧರ್ಮಗಳ ಸಮನ್ವಯತೆ ಸಾರುವ ಉದ್ದೇಶದಿಂದ 'ಗಾಂಗೇಯ' ಸಿನೆಮಾ ಮಾಡಲಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಂ.ರಾಮಚಂದ್ರ ಶ್ರೀನಿವಾಸಕುಮಾರ್, ಗ್ರಾಮೀಣ ಪ್ರದೇಶದ ಯುವಕರು ಕೆಲಸ ಮಾಡಲು ನಗರಕ್ಕೆ ಬಂದಾಗ ಸಂಭವಿಸುವ ಘಟನೆಗಳೇ ಸಿನೆಮಾದ ಕಥಾವಸ್ತು. 

ಗಾಂಗೇಯ ಎಂದರೆ ಸುಬ್ರಹ್ಮಣ್ಯ ದೇವರ ಹೆಸರು, ಭೀಷ್ಮನ ಹೆಸರು ಸಹ ಅದೇ. ಅದ್ದೂರಿಯಾಗಿ ಸಿನೆಮಾ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ, ಆಂದ್ರ, ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.

ಯುವಕಲಾವಿದರು ಹಾಗೂ ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಹುಟ್ಟುಹಾಕಲಾಗಿದೆ.ನಮ್ಮ ವಿಜಯ ಗೌತಮಿ ಆರ್ಟ್ ಮೂವೀಸ್  ಸಂಸ್ಥೆವತಿಯಿಂದ ವರ್ಷಕ್ಕೆ 10ಸಿನೆಮಾ ಮಾಡುವುದಾಗಿ ಘೋಷಣೆ ಮಾಡಿದರು ನಿರ್ದೇಶಕ, ನಿರ್ಮಾಪಕ, ರಾಮಚಂದ್ರ ಶ್ರೀನಿವಾಸ ಕುಮಾರ್.

ಪವಿತ್ರಾ ಗೌಡ ಹಳೆಯ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆ? ಅಂಥದ್ದು ಏನಿದೆ ಅದ್ರಲ್ಲಿ ನೋಡಿ..!

'ಈ ಹಿಂದೆ ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದೆ. ಗಾಂಗೇಯ ನನ್ನ ಮೊದಲ ಕನ್ನಡ ಸಿನೆಮಾ. ಸಮಾಜಕ್ಕೆ ಸಂದೇಶ ನೀಡುವನಿಟ್ಟಿನಲ್ಲಿ ನಿರ್ದೇಶಕರು ಸಿನೆಮಾ ಕಥೆ ಬರೆದಿದ್ದಾರೆ .ಅವರು ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾತ್ರಕ್ಕೆ ತಯಾರಿ ಮಾಡಿಕೊಂಡು ನಟಿಸುತ್ತಿದ್ದೇನೆ' ಎಂದರು ನಟ ಗಗನ್. 

ಖ್ಯಾತ ನಟ ಸುಮನ್ ಸೇರಿದಂತೆ ಇನ್ನಿತರ ತಾರಾಗಣವಿದೆ. ರಾಪ್ ರಾಕ್ ಶಕೀಲ್ ಸಂಗೀತ, ಅದುಸುಮಿಲಿ ವಿಜಯ್ ಕುಮಾರ್ ಛಾಯಾಗ್ರಹಣ,ಕೋಟಗಿ ವೆಂಕಟೇಶ ರಾವ್ ಸಂಕಲನ ಸಿನೆಮಾಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!