
ಶಿವಮೊಗ್ಗ (ಮಾ. 06): ಭದ್ರಾವತಿಯ ಬೆಡಗಿ, ಮಿಸ್ ಸುಪ್ರಾ ಇಂಟರ್‌ನ್ಯಾಶನಲ್ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಆಶಾ ಭಟ್ ಇದೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಜಂಗ್ಲೀ’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ನಾಯಕನಾಗಿರುವ ಈ ಸಿನಿಮಾಕ್ಕೆ ಇಬ್ಬರು ನಾಯಕಿಯರು. ಅವರಲ್ಲೊಬ್ಬಾಕೆ ಆಶಾ ಭಟ್. ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗುತ್ತಿದೆ.
’ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!
ಕನ್ನಡತಿ ಹುಡುಗಿ ಆಶಾ ಮೂಲತಃ ಭದ್ರಾವತಿಯವರು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಓದುತ್ತಿರುವಾಗಲೇ ಒದಗಿಬಂದದ್ದು ಮಿಸ್ ಸುಪ್ರಾ ಅಡಿಷನ್. ಸಣ್ಣ ಆತಂಕದಲ್ಲೇ ಭಾಗವಹಿಸಿದ ಈ ನೀಳ ಸುಂದರಿ ಮುಂದೆ ಸೌಂದರ್ಯ ಸ್ಪರ್ಧೆಯ ಒಂದೊಂದೇ ಮೆಟ್ಟಿಲುಗಳನ್ನು ಏರಿದರು. 2014ರಲ್ಲಿ ಪೋಲೆಂಡ್‌ನಲ್ಲಿ ನಡೆದ ‘ಮಿಸ್ ಸುಪ್ರಾ ಇಂಟರ್‌ನ್ಯಾಶನಲ್’ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಈ ಸ್ಪರ್ಧೆಯಲ್ಲಿ ಭುವನ ಸುಂದರಿ ಕಿರೀಟ ಧರಿಸಿ ವಿಶ್ವದ ಗಮನ ಸೆಳೆದರು. ಈ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ನಾರಿ ಆಶಾ.
ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!
ಈಕೆ ವಿಶ್ವ ಸುಂದರಿಯಾಗಿ ಗುರುತಿಸಿಕೊಂಡ ಹೊತ್ತಿಗೆ ಸಾಕಷ್ಟುಸಿನಿಮಾ ಅವಕಾಶಗಳು ಬರತೊಡಗಿದವು. ಸ್ಯಾಂಡಲ್‌ವುಡ್‌ನ ಮಂದಿಯೂ ಆಶಾರನ್ನು ಸಂಪರ್ಕಿಸಿದ್ದರು. ಆದರೆ ಎಜುಕೇಶನ್ ಫಸ್ಟ್, ಸಿನಿಮಾ ನೆಕ್ಸ್ಟ್‌ಅಂತಿದ್ದ ಆಶಾ ಎಲ್ಲ ಆಫರ್‌ಗಳನ್ನೂ ನಯವಾಗಿ ತಿರಸ್ಕರಿಸಿದರು. ಇವೆಲ್ಲ ಆಗಿ ಭರ್ತಿ 5 ವರ್ಷ ಕಳೆದಿದೆ.
ಈ ನಡುವೆ ಕೆಲವೊಂದು ಫ್ಯಾಶನ್ ಶೋ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಸಿನಿಮಾದಲ್ಲಿ ಆಶಾ ಹೆಸರು ಕೇಳಿ ಬಂದಿರಲಿಲ್ಲ. ಇದೀಗ ಬಾಲಿವುಡ್ ಸಿನಿಮಾಕ್ಕೆ ಎಂಟ್ರಿ ಕೊಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಬಾಲಿವುಡ್‌ನಲ್ಲಿರುವ ದೀಪಿಕಾ ಪಡುಕೋಣೆ ಥರ ಈಕೆಯೂ ಹೆಸರು ಮಾಡ್ತಾಳಾ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.