
ನಿಖಿಲ್ ಕುಮಾರಸ್ವಾಮಿಯವರ 'ಸೀತಾರಾಮ ಕಲ್ಯಾಣ'ಕ್ಕೆ ಭರ್ಜರಿ ಯಶಸ್ಸು ಸಿಗದೇ ಹೋದರೂ, ಸಿನಿಮಾಗಳಲ್ಲಿ ಓಡುತ್ತಿದೆ. ಈ ಚಿತ್ರ ಬಿಡುಗಡೆಯಾಗಿ 35 ದಿನಗಳಾಗಿವೆ. ಆದರೆ, ಪತ್ರಿಕೆಯೊಂದಕ್ಕೆ ನೀಡಿರುವ ಜಾಹೀರಾತಿನಲ್ಲಿ 38ನೇ ವಾರದಿಂದ ಯಶಸ್ವಿ ಪ್ರದರ್ಶನ... ಎಂದು ಹೇಳಲಾಗಿದೆ. ಈ ಅಚಾತುರ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರಾಲ್ ಆಗುತ್ತಿದೆ. ಟ್ರಾಲ್ ಹೈಕ್ಳಿಗೆ ಸಿಕ್ಕಿದರೆ ಕೇಳಬೇಕಾ?
'ಜಾಗ್ವಾರ್' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವೆಂದು ಈ ತಪ್ಪು ಮಾಹಿತಿ ಎಂದೇ ಆರೋಪಿಸಲಾಗುತ್ತಿದೆ.
ಸಿನಿಮಾ ನೋಡಿದರೆ, ರಚಿತಾ-ನಿಖಿಲ್ ಜೋಡಿಯನ್ನು ಥೇಟ್ ಸೀತಾ- ರಾಮನಂತಿದ್ದಾರೆಂದು ಹೇಳುವುದು ಗ್ಯಾರಂಟಿ. ಕ್ಲಾಸ್ ಅ್ಯಂಡ್ ಮಾಸ್ ಕಾಂಬಿನೇಷನ್‌ನಲ್ಲಿ ಇರುವ ಈ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂಬುವುದು ಎಲ್ಲರಿಗೂ ಗೊತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.