Gandhada Gudi: ಸಿಎಂ ಬೊಮ್ಮಾಯಿ ಅವರಿಗೆ ನಾವು ಸದಾ ಆಭಾರಿ ಎಂದ ಅಶ್ವಿನಿ ಪುನೀತ್ ರಾಜ್‍ಕುಮಾರ್

Suvarna News   | Asianet News
Published : Dec 08, 2021, 03:37 PM ISTUpdated : Dec 10, 2021, 02:46 PM IST
Gandhada Gudi:  ಸಿಎಂ ಬೊಮ್ಮಾಯಿ ಅವರಿಗೆ ನಾವು ಸದಾ ಆಭಾರಿ ಎಂದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಸಾರಾಂಶ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಅಪ್ಪು ಕನಸಿನ ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಪತ್ನಿ ಅಶ್ವಿನಿ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.   

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಪತ್ನಿ ಅಶ್ವಿನಿ (Ashwini Puneeth Rajkumar) ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  'ಗಂಧದ ಗುಡಿ' ಟೀಸರ್ ಬಿಡುಗಡೆಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಅವರು ಟ್ವೀಟ್ (Tweet) ಮಾಡಿದ್ದರು. ಈ ಟ್ವೀಟ್‌ಗೆ ಅಶ್ವಿನಿ ಅವರು ರಿಟ್ವೀಟ್ (Retweet) ಮಾಡುವ ಮೂಲಕ ಮಾಡಿ, ಈ 'ಗಂಧದ ಗುಡಿ'ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಪ್ರಾಕೃತಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಜನರಿಗೆ ಈ ಚಿತ್ರ ಪ್ರೇರಣೆಯಾಗಲಿ ಎಂದು ಬರೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಗಂಧದ ಗುಡಿ' ಸಾಕ್ಷ್ಯಚಿತ್ರ ಚಿತ್ರಕ್ಕೆ ಶುಭಹಾರೈಸಿದ್ದರು. ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ (PRK Productions) ನಿರ್ಮಿಸಿರುವ 'ಗಂಧದ ಗುಡಿ' ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಹಾಗೂ ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುವುದಾಗಿ ಸಿಎಂ ಬೊಮ್ಮಾಯಿ ಅವರು ಟ್ವೀಟರ್‌ನಲ್ಲಿ (Twitter) ತಿಳಿಸಿದ್ದರು.

Gandhada Gudi Teaser: ಪುನೀತ್ ರಾಜ್‌ಕುಮಾರ್ ಕನಸು ನನಸಾಗಿಸಿದ ಪತ್ನಿ!

ಡಿಸೆಂಬರ್‌ 6ರಂದು ಪುನೀತ್ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ 'ಗಂಧದ ಗುಡಿ' ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. 



ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದರೆ ಕೊನೆಯಲ್ಲಿ ಟೈಟಲ್ 'ಗಂಧದ ಗುಡಿ' ಎಂದು ರಿವೀಲ್ ಮಾಡಿದಾಗ ಡಾ.ರಾಜ್‌ಕುಮಾರ್ (Dr Rajkumar) ಅವರ ಧ್ವನಿ ನೀಡಲಾಗಿದೆ.. 'ನಿಮ್ಮ ಕೈ ಮುಗಿದು ಕೇಳ್ಕೊಳತ್ತೀನಿ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು, ಗಂಧದ ಗುಡಿಯನ್ನು ಉಳಿಸು,' ಎಂಬ ಸಂದೇಶ ಸಾರಲಾಗಿದೆ. ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Puneeth Rajkumar: 'ಗಂಧದ ಗುಡಿ'ಯ ಹಿಂದೆಂದೂ ಕಾಣದ ಸಿನಿಮಾ ಅನುಭವದ ಬಗ್ಗೆ ಅಶ್ವಿನಿ ಟ್ವೀಟ್

ಇನ್ನು 'ಗಂಧದ ಗುಡಿ' ಟೈಟಲ್ ಟೀಸರ್ ಬಿಡುಗಡೆಯಾದ ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ (YouTube) ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ. ಟ್ಯಾಲೆಂಟೆಡ್‌ ವ್ಯಕ್ತಿಗಳು ಕೈ ಜೋಡಿಸಿ ಮಾಡಿರುವ 'ಗಂಧದ ಗುಡಿ' ಸಾಕ್ಷ್ಯಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಡಾ.ರಾಜ್‌ಕುಮಾರ್ ಕುಟುಂಬ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?