Gandhada Gudi: ಟೀಸರ್‌ಗೆ ಒಂದೇ ದಿನ 30 ಲಕ್ಷ ವ್ಯೂ, ಒಂದೇ ಒಂದು ಡಿಸ್‌ಲೈಕ್ ಇಲ್ಲ

By Kannadaprabha NewsFirst Published Dec 8, 2021, 12:49 PM IST
Highlights
  • ಗಂಧದಗುಡಿ(Gandhada gudi) ಟೈಟಲ್ ಟೀಸರ್ ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ
  • ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್

ನಟ ಪುನೀತ್‌ರಾಜ್‌ಕುಮಾರ್(Puneeth Rajkumar) ಅವರ ಬಹುದೊಡ್ಡ ಕನಸು ‘ಗಂಧದಗುಡಿ’(Gandhada gudi) ಸಾಕ್ಷ್ಯ ಚಿತ್ರ. ಇದರ ಟೈಟಲ್ ಟೀಸರ್(Title teaser) ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ. ಖ್ಯಾತ ಛಾಯಾಗ್ರಾಹಕ ಅಮೋಘವರ್ಷ ಜತೆ ರೂಪಿಸಿರುವ ಈ ಪ್ರಕೃತಿ ಸೌಂದರ್ಯದ ಟೈಟಲ್ ಟೀಸರ್ ಈ ಮಟ್ಟಕ್ಕೆ ಹಿಟ್ ಆಗಿದ್ದು, ಚಿತ್ರಮಂದಿರದಲ್ಲಿ ದೊಡ್ಡ ಪರದೆ ಮೇಲೆ ಮೂಡಿದಾಗ ಯಾವ ಮಟ್ಟಕ್ಕೆ ಗೆಲ್ಲುತ್ತದೆಂಬ ನಿರೀಕ್ಷೆಯ ಮಾತುಗಳು ಆಗಲೇ ಶುರುವಾಗಿವೆ.

"

ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯಲ್ಲಿ ಪುನೀತ್‌ ರಾಜ್‌ಕುಮಾರ್ ವರ್ಕೌಟ್ (Workout) ಮಾತ್ರವಲ್ಲದೇ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ, ಅಲ್ಲಿನ ಸುಂದರ ತುಣುಕನ್ನು ಡಾಕ್ಯುಮೆಂಟರಿ (Documentary) ಮೂಲಕ 2021ರ ಕನ್ನಡ ರಾಜ್ಯೋತ್ಸವಕ್ಕೆ ಜನರ ಮುಂದಿಡಲು ರೆಡಿಯಾಗಿದ್ದರು ಆದರೆ ಹೃದಯಘಾತದಿಂದ (Heart attack) ಅವರೇ ನಮ್ಮನ್ನು ಅಗಲಿದರು. ಪಿಆರ್‌ಕೆ ಸಂಸ್ಥೆ ನಡೆಸುತ್ತಿರುವ ಅವರ ಪತ್ನಿ ಅಶ್ವಿನಿ, ಪುನೀತ್‌ ಕನಸು ನನಸು ಮಾಡಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಸಾಥ್‌ನೊಂದಿಗೆ ಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಿದ್ದಾರೆ. 

Gandhada Gudi Documentary: ಪುನೀತ್‌ಗೆ ಕೈ ಜೋಡಿಸಿದ್ದು ಈ ಅಮೋಘವರ್ಷ!

ಹೌದು! ಇಂದು ಪುನೀತ್ ಅವರ ಗಂಧದ ಗುಡಿ (Gandhadagudi) ಟೈಟಲ್ ಟೀಸರ್ ಬಿಡುಗಡೆಯಾಗಿದೆ.  ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. ಸಹ ನಿರ್ದೇಶಕರಾಗಿ ಅಂಕಿತ್, ಪ್ರೊಡಕ್ಷನ್ ಮುಖ್ಯಸ್ಥರಾಗಿ ಸತೀಶ್, ಪ್ರೊಡಕ್ಷನ್ ಕಂಟ್ರೋಲರ್ ಆಗಿ ಋಷ್ಯಶೃಂಗ, ಲೈನ್ ಪ್ರೊಡ್ಯೂಸರ್ ಆಗಿ ಸುಧೀಂದ್ರ ಕುಮಾರ್, ಸ್ಕ್ರಿಪ್‌ನ ಫ್ಲೌಂಜ್ ರೈಟರ್ಸ್ ಬ್ಲಾಕ್ ಬರೆದಿದ್ದಾರೆ. ಟ್ಯಾಲೆಂಟೆಡ್‌ ವ್ಯಕ್ತಿಗಳು ಕೈ ಜೋಡಿಸಿ ಮಾಡಿರುವ ಡಾಕ್ಯುಮೆಂಟರ್‌ಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಡಾ.ರಾಜ್‌ಕುಮಾರ್ ಕುಟುಂಬ. 

ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. Based on true Events ಎಂದು ಆರಂಭದಲ್ಲಿ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಟಾರ್ಚ್‌ ಆನ್ ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆನಂತರ ಗನ್ ಲೋಡ್ (Gun Load) ಮಾಡಿಕೊಳ್ಳುವುದು, ಬುಡು ಬುಡುಕೆಯವರು ಏನೋ ಪೂಜೆ ಮಾಡುವುದು... ಹೀಗೆ ಒಂದಾದ ಮೇಲೊಂದು ದೃಶ್ಯಗಳು ಅದ್ಭುತವಾಗಿದೆ. ಚಲಿಸುತ್ತಿರುವ ಮೋಡಿಗಳು, ಹಸಿರು ಬಣ್ಣದ ಹಾವು, ಕೊಡಲಿ ಹಿಡಿದುಕೊಂಡು ನಡೆಯುತ್ತಿರುವ ಅರಣ್ಯ ಅಧಿಕಾರಿಗಳು...ಪದೇ ಪದೇ ಈ ಟೈಟಲ್ ಟೀಸರ್ ನೋಡಬೇಕು ಎಂದೆನಿಸುವುದರಲ್ಲಿ ಅನುಮಾವಿಲ್ಲ. 

ಅಂಡರ್ ವಾಟರ್ (Under Water) ಸ್ವಿಮ್ ಮಾಡುವುದು, ಕಾಡಿನಲ್ಲಿ ಟೆಂಟ್ ಹಾಕಿಕೊಂಡು ಉಳಿದುಕೊಂಡಿರುವುದು, ಸೂರ್ಯೋದಯ ವೀಕ್ಷಿಸಿರುವುದು, ಸಣ್ಣ ರಸ್ತೆಯೂ ಬಿಡದೇ ಪ್ರಯಾಣ ಮಾಡಿರುವುದು, ಜಲಪಾತದ ತುದಿಯಲ್ಲಿ ನಿಂತು ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಿರುವುದು ಹೀಗೆ ಪ್ರತಿಯೊಂದರ ಸಣ್ಣ ತುಣುಕು ಟೀಸರ್‌ನಲ್ಲಿ ಸೇರಿಸಲಾಗಿದೆ.  ಟೈಟಲ್ 'ಗಂಧದ ಗುಡಿ' ಎಂದು ರಿವೀಲ್ ಮಾಡಿದಾಗ ರಾಜ್‌ಕುಮಾರ್ (Dr Rajkumar) ಅವರ ಧ್ವನಿ ನೀಡಲಾಗಿದೆ. 'ನಿಮ್ಮ ಕೈ ಮುಗಿದು ಕೇಳ್ಕೊಳತ್ತೀನಿ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು, ಗಂಧದ ಗುಡಿಯನ್ನು ಉಳಿಸು,' ಎಂದು ಆಗ್ರಹಿಸಿದ್ದಾರೆ.  ಟೈಟಲ್ ಟೀಸರ್ ನೋಡುವಾಗ ಅದೆಷ್ಟೋ ಅಭಿಮಾನಿಗಳ ಕಣ್ಣಂಚಲಿ ನೀರು ಕಾಣಬಹುದು. ವಿಡಿಯೋದಲ್ಲಿ ಅಪ್ಪು ನಗು ನೋಡಿ ಮೊದಲ ಬಾರಿ ಎಲ್ಲರೂ ಅತ್ತಿದ್ದಾರೆ.

click me!