ಮಾರ್ಟಿನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಡೈರೆಕ್ಟರ್: ಸಿನಿಮಾ ರಿಲೀಸ್‌ಗಿಲ್ಲ ಟೆನ್ಷನ್!

By Sathish Kumar KH  |  First Published Oct 4, 2024, 1:22 PM IST

ಮಾರ್ಟಿನ್ ಸಿನಿಮಾದ ನಿರ್ದೇಶಕ ಎ.ಪಿ. ಅರ್ಜುನ್ ಅವರು ನಿರ್ಮಾಪಕ ಉದಯ್ ಮೆಹ್ತಾ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ಪ್ರಚಾರದಲ್ಲಿ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಕೋರ್ಟ್ ಮದ್ಯಂತರ ಆದೇಶ ಮಾತ್ರ ಇಲ್ಲಿದೆ ನೋಡಿ..


ಬೆಂಗಳೂರು (ಅ.04): ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್‌ನಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿದ್ಧಗೊಂಡಿರುವ ಮಾರ್ಟಿನ್ ಸಿನಿಮಾ ವಿಚಾರವಾಗಿ ಸ್ವತಃ ನಿರ್ದೇಶಕ ಎ.ಪಿ. ಅರ್ಜುನ್ ಅವರೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅ.11ರಂದು ರಿಲೀಸ್ ಆಗಬೇಕಾಗ ಸಿನಿಮಾ ಡೇಟ್ ಮುಂದಕ್ಕೆ ಹೋಗುತ್ತಾ? ಇಲ್ಲ ಏನು ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಕನ್ನಡದ ಚಿತ್ರವೊಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಬ ಬಾಡಿ ಬಿಲ್ಡರ್ ಎನಿಸಿಕೊಂಡವರನ್ನು ಕರೆಸಿ ಮಾರ್ಟಿನ್ ಸಿನಿಮಾದಲ್ಲಿ ನಟನೆ ಮಾಡಿಸಲಾಗಿದೆ. ಹೀಗಾಗಿ, ಈ ಚಿತ್ರದ ನಟ ಧೃವ ಸರ್ಜಾ, ನಿರ್ಮಾಪಕ ಉದಯ್ ಮೆಹ್ತಾ ಸೇರಿದಂತೆ ಎಲ್ಲರೂ ಸಿನಿಮಾ ಪ್ರಚಾರದ ವೇಳೆ ಇದನ್ನು ಪ್ಯಾನ್ ವರ್ಲ್ಡ್ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಆದರೆ, ಸಿನಿಮಾ ರಿಲೀಸ್‌ಗೆ ಒಂದು ವಾರ ಬಾಕಿ ಇರುವಾಗ ಚಿತ್ರದ ನಿರ್ದೇಶಕ  ಎ.ಪಿ. ಅರ್ಜುನ್ ಅವರೇ ಮಾರ್ಟಿನ್ ಚಿತ್ರತಂಡದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಶಿವಣ್ಣನ ದೊಡ್ಡ ಮನಸ್ಸಿಗೆ ಧ್ರುವ ಸರ್ಜಾ ಫಿದಾ: ಮಾರ್ಟಿನ್ ಗೆ ದಾರಿ ಮಾಡಿಕೊಟ್ಟ ಬೈರತಿ ರಣಗಲ್

ಮಾರ್ಟಿನ್ ಸಿನಿಮಾ ನಿರ್ದೇಶಕ ಎ.ಪಿ.ಅರ್ಜುನ್ ಅವರು ಈ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಾನು ಈ ಸಿನಿಮಾದ ನಿರ್ದೇಶಕನಾದರೂ ನನ್ನ  ಹೆಸರು ಕೈಬಿಟ್ಟು ದೇಶದಾದ್ಯಂತ ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾ ಸಂಬಂಧಿಸಿದ ಒಪ್ಪಂದಗಳನ್ನು ನಿರ್ಮಾಪಕರು ಪಾಲಿಸಿಲ್ಲವೆಂದು ಆರೋಪ ಮಾಡಿದ್ದಾರೆ. ಸಿನಿಮಾದ ನಿರ್ದೇಶಕನಾದ ನನ್ನ ಹೆಸರನ್ನು ಎಲ್ಲಿಯೂ ಹೇಳದೇ, ನನ್ನನ್ನು ಕೈಬಿಟ್ಟು ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ದೇಶಕ ಎ.ಪಿ. ಅರ್ಜಿನ್ ಅವರು ನಿರ್ಬಂಧ ವಿಧಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 

ಚಲನಚಿತ್ರ ನಿರ್ಮಾಣದಲ್ಲಿ ನಿರ್ದೇಶಕರ ಪಾತ್ರ ಮಹತ್ವದ್ದಾಗಿದೆ. ನಿರ್ದೇಶಕರ ಹೆಸರನ್ನೇ ಕೈಬಿಟ್ಟು ಸಿನಿಮಾ ಪ್ರಚಾರ ಮಾಡದಂತೆ ಆದೇಶಿಸಲು ಮನವಿ ಮಾಡಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ಇವರ ಪ್ರತಿವಾದಿಗಳಾದ ನಿರ್ಮಾಪಕ ಮೆ.ಉದಯ್ ಮೆಹ್ತಾ, ವಾಸವಿ ಎಂಟರ್ ಪ್ರೈಸಸ್ ಗೆ ಹೈಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರ ಪ್ರಚಾರದಲ್ಲಿ ನಿರ್ದೇಶಕರನ್ನು ಕೈಬಿಡದಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮುಂದಿನ ವಾರ 3000 ಚಿತ್ರಮಂದಿರಗಳಲ್ಲಿ ಮಾರ್ಟಿನ್‌ ಸಿನಿಮಾ ತೆರೆಗೆ: ಧ್ರುವ ಸರ್ಜಾ ಹೇಳಿದ್ದೇನು?

ರಿಲೀಸ್‌ಗೆ ಸದ್ಯಕ್ಕೆನೂ ಸಮಸ್ಯೆಯಿಲ್ಲ: ಕನ್ನಡದ ಬಿಗ್ ಬಜೆಟ್ ಸಿನಿಮಾ ಮಾರ್ಟಿನ್ ಮೇಲೆ ಚಿತ್ರತಂಡ ಹಾಗೂ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ದಿನಾಂಕಗಳು ಮುಂದೂಡಿಕೆ ಆಗಿ ಇದೀಗ ಸಿನಿಮಾ ರಿಲೀಸ್ ಹಂತಕ್ಕೆ ಬಂದಾಗ ನಿರ್ಮಾಪಕ ಹಾಗೂ ನಿರ್ದೇಶಕರ ನಡುವಿನ ವೈಮನಸ್ಸು ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ, ನ್ಯಾಯಾಲಯದ ಮಧ್ಯಂತರ ಆದೇಶದಲ್ಲಿ ಸಿನಿಮಾ ಪ್ರಚಾರದಲ್ಲಿ ನಿರ್ಮಾಪಕರ ಹೆಸರನ್ನು ಕೈಬಿಡದಂತೆ ಆದೇಶ ಹೊರಡಿಸಲಾಗಿದೆ. ಇಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕು ಸ್ಥಗಿತ ಮಾಡುವಂತೆ ಯಾವುದೇ ಆದೇಶ ನ್ಯಾಯಾಲಯದಿಂದ ಬಂದಿಲ್ಲ. ಆದ್ದರಿಂದ ಸಿನಿಮಾಗೆ ರಿಲೀಸ್‌ಗೆ ಯಾವುದೇ ಆತಂಕ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

click me!