ಮಾರ್ಟಿನ್ ಚಿತ್ರದ ಹೀರೋ ಧೃವ ಸರ್ಜಾ ಅವರು ಜೀ ಕನ್ನಡ ವಾಹಿನಿಯಲ್ಲಿದ್ದ ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದಿದ್ದಾರೆ. ಮಾರ್ಟಿನ್ ಚಿತ್ರದ ಬಿಡುಗಡೆಗೆ ಅನುಕೂಲವಾಗುವಂತೆ ಶಿವರಾಜ್ ಕುಮಾರ್ ತಮ್ಮ ಬೈರತಿ ರಣಗಲ್ ಚಿತ್ರವನ್ನು ಒಂದು ತಿಂಗಳು ಮುಂದೂಡಿದ್ದಾರೆ.
ಬೆಂಗಳೂರು (ಸೆ.04): ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಹ್ಯಾಟ್ರಿಕ್ ಹೋರೋ ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನಿಮಾ ಇಂದು (ಅ.4ರಂದು) ಬಿಡುಗಡೆ ಆಗಬೇಕಿತ್ತು. ಆದರೆ, ಈ ಸಿನಿಮಾ ಬಿಡುಗಡೆ ಮಾಡಿದರೆ ಮಾರ್ಟಿನ್ ಚಿತ್ರಕ್ಕೆ ಸಮಸ್ಯೆ ಆಗಲಿದೆ ಎಂದು ಒಂದೇ ಮಾತು ಹೇಳಿದ್ದಕ್ಕೆ ಅವರ ಸಿನಿಮಾವನ್ನೇ ಒಂದು ತಿಂಗಳು ಮುಂದೂಡಿಕೆ ಮಾಡಿದರು ಎಂದು ಹೇಳುತ್ತಾ ಮಾರ್ಟಿನ್ ಚಿತ್ರದ ನಾಯಕ ಧೃವ ಸರ್ಜಾ ಅವರು ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದರು.
ಹೌದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿವೆ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕಮಾಲ್ ಮಾಡಿವೆ. ಆದರೆ, ಇದೀಗ ಧೃವ ಸರ್ಜಾ ಅವರು ಕನ್ನಡ ಚಿತ್ರರಂಗವನ್ನು ಕೇವಲ ಪ್ಯಾನ್ ಇಂಡಿಯಾಗೆ ಸೀಮಿತ ಮಾಡದೇ ಜಾಗತಿಕ ಮಟ್ಟದಲ್ಲಿ (ಪ್ಯಾನ್ ವರ್ಲ್ಡ್) ಮಟ್ಟದಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡಬೇಕೆಂದು ನಿರ್ಧರಿಸಿ ವಿಶ್ವದ ದೊಡ್ಡ ದೊಡ್ಡ ಬಾಡಿ ಬಿಲ್ಡರ್‌ಗಳನ್ನು ಕನ್ನಡ ಚಿತ್ರಕ್ಕೆ ಕರೆಸಿ ನಟನೆ ಮಾಡಿಸಿದ್ದಾರೆ. ಇದೀಗ ದೊಡ್ಡ ಬಜೆಟ್‌ನ ಸಿನಿಮಾ ನಿರ್ಮಿಸಿ ಬಿಡುಗೆ ಮಾಡಬೇಕು ಎಂದು ದೇಶ, ವಿದೇಶಗಳಿಗೆ ಹೋಗಿ ಸುದ್ದಿಗೋಷ್ಠಿಗಳನ್ನು ನಡೆಸಿ ಬಂದಿದ್ದಾರೆ.
undefined
ಮೊದಲೇ ಕನ್ನಡ ಸಿನಿಮಾ ಆಗಿದ್ದರಿಂದ ಕನ್ನಡಿಗರೇ ತಮಗೆ ಮುಖ್ಯ ಎಂಬುದನ್ನು ಮಾತ್ರ ಧೃವ ಸರ್ಜಾ ಮರೆತಿಲ್ಲ. ಹೀಗಾಗಿ. ಅ.11ರಂದು ದಸರಾ ರಜೆಯ ವೇಳೆ ತಮ್ಮ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದ್ದರು. ಆದರೆ, ಇದಕ್ಕೊಂದು ಸಂಕಷ್ಟ ಎದುರಾಗಿತ್ತು. ಅದೇನೆಂದರೆ, ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ಬೈರತಿ ರಣಗಲ್ ಚಿತ್ರವು ಇದೇ ಅ.4ರಂದು ರಾಜ್ಯಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಬೈರತಿ ರಣಗಲ್ ಎಲ್ಲ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿದರೆ, ಅದರ ಮುಂದಿನ ವಾರ ಅಂದರೆ ಅ.11ರಂದು ಬಿಡುಗಡೆ ಆಗುವ ಮಾರ್ಟಿನ್ ಸಿನಿಮಾಗೆ ಥಿಯೇಟರ್‌ಗಳು ಸಿಗದೇ ಪರದಾಡಬೇಕಾಗುತ್ತದೆ. ಶಿವಣ್ಣ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದ್ದು, ಒಂದು ವಾರಕ್ಕೆ ಜನರು ಅವರ ಬೈರತಿ ರಣಗಲ್ ಸಿನಿಮಾ ಖಾಲಿ ಮಾಡಲು ಬಿಡುವುದಿಲ್ಲ ಎಂದರಿತುಕೊಂಡಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಡೈರೆಕ್ಟರ್: ಸಿನಿಮಾ ರಿಲೀಸ್‌ಗಿಲ್ಲ ಟೆನ್ಷನ್!
ಕೂಡಲೇ ಶಿವಣ್ಣನಿಗೆ ಒಂದು ಕರೆ ಮಾಡಿ ಮನವಿ ಮಾಡೋಣ ಎಂದುಕೊಂಡವರೇ ಧೃವ ಸರ್ಜ ಅವರು ಆಗಸ್ಟ್ ಕೊನೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ. ಅಣ್ಣಾ ನಿಮ್ಮ ಸಿನಿಮಾ ಬೈರತಿ ಅ.4 ರಂದು ರಿಲೀಸ್ ಮಾಡ್ತಿದ್ದೀರಾ ಎಂದು ಕೇಳಿದಾಗ ಶಿವಣ್ಣ ಹೌದು ಎಂದಿದ್ದಾರೆ. ಹಾಗಾದರೆ, ಅ.11ಕ್ಕೆ ನನ್ನ ಮಾರ್ಟಿನ್ ಸಿನಿಮಾ ರಿಲೀಸ್ ಇತ್ತು ಅಣ್ಣಾ, ನಮಗೆ ಥಿಯೇಟರ್ ಸಮಸ್ಯ ಆಗುತ್ತದೆ ಎಂದು ಹೇಳಿದ್ದಾರೆ. ಬೆಳಗ್ಗೆ ಕರೆ ಮಾಡಿ ಮಾತನಾಡಿದ ಧೃವ ಸರ್ಜಾಗೆ ಸಂಜೆ 5 ಗಂಟೆ ವೇಳೆಗೆ ಕರೆ ಮಾಡಿದ ಶಿವ ರಾಜ್‌ಕುಮಾರ್ ಅವರು, ಧೃವ ನೋಡಮ್ಮಾ ನಿನ್ನ ಸಿನಿಮಾ ರಿಲೀಸ್‌ಗೆ ಯಾವುದೇ ತೊಂದರೆ ಆಗೊಲ್ಲಮ್ಮಾ.. ಬೈರತಿ ರಣಗಲ್ ಸಿನಿಮಾವನ್ನು ಒಂದು ತಿಂಗಳು ಮುಂದೂಡಿಕೆ ಮಾಡಿದ್ದೇನೆ ಸಾಕಾ..? ಎಂದು ಹೇಳಿದ್ದಾರೆ. ಇದರಿಂದ ಧೃವ ಭಾವುಕರಾಗಿ ಅಣ್ಣಾ ಥ್ಯಾಂಕ್ಸ್ ಎಂದೇಳಿ ಕರೆ ಕಟ್ ಮಾಡಿದ್ದಾರೆ.
ಇದನ್ನೂ ಓದಿ: ಶಿವಣ್ಣನ ದೊಡ್ಡ ಮನಸ್ಸಿಗೆ ಧ್ರುವ ಸರ್ಜಾ ಫಿದಾ: ಮಾರ್ಟಿನ್ ಗೆ ದಾರಿ ಮಾಡಿಕೊಟ್ಟ ಬೈರತಿ ರಣಗಲ್
ಈ ಘಟನೆ ನಡೆದು ಒಂದು ತಿಂಗಳ ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆಗೆ ಬಂದ ಧೃವ ಸರ್ಜಾ ಅವರು ಈ ಎಲ್ಲ ವಿಚಾರಗಳನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಅವರಿಂದಾಗಿಯೇ ಮಾರ್ಟಿನ್ ಸಿನಿಮಾಗೆ ಬಂದಿದ್ದ ಒಂದು ಸಣ್ಣ ಅಡೆತಡೆ ದೂರವಾಗಿದೆ ಎಂದು ಹೇಳಿದರು. ಮುಂದುವರೆದು, ನಾವು ಕನ್ನಡ ಚಿತ್ರರಂಗವನ್ನು ಒಂದು ಹಂತಕ್ಕೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತೀವಿ ಎಂದು ಹೇಳುತ್ತಾರೆ. ಆದರೆ, ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಮೇಲೆ ತೆಗೆದುಕೊಂಡು ಹೋಗಿ ಇಟ್ಟುಬಿಟ್ಟಿದ್ದಾರೆ. ನಾವು ಅದನ್ನು ಹತ್ತಿಕೊಂಡು ಹೋದರೆ ಸಾಕು ಎಂದು ಹೇಳಿದ್ದಾರೆ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಪೊಗರು ಸಿನಿಮಾದ ಹಾಡಿಗೆ ಡ್ಯಾನ್ಸ್ ಕೂಡ ಮಾಡಿ ಇಡೀ ವೇದಿಕೆಯನ್ನು ರಂಜಿಸಿದ್ದಾರೆ.