7 ಕೋಟಿ ಖರ್ಚು ಮಾಡಿ ಮದ್ವೆ ಮಾಡ್ದೆ, ಅಯ್ಯೋ... ಅನ್ನೋಕಾಗತ್ತಾ? ಡಿವೋರ್ಸ್​ ಕುರಿತು ಅನು ಮನದ ಮಾತು

By Suchethana DFirst Published Jul 31, 2024, 11:54 AM IST
Highlights

ವಿಚ್ಛೇದನ ವಿಷಯ ಬಂದಾಗ ಯಾಕೆ ಹೀಗಾಗುತ್ತಿದೆ ಎನ್ನುತ್ತಲೇ ಮದುವೆ ಮತ್ತು ಡಿವೋರ್ಸ್​ ಕುರಿತು ನಟಿ ಅನು ಪ್ರಭಾಕರ್​ ಹೇಳಿದ್ದೇನು? 
 

ನಿಜ. ಹಿಂದೂಗಳ ಪ್ರಕಾರ ಮದುವೆ ಎನ್ನೋದು ಇಬ್ಬರ ನಡುವಿನ ಬಾಂಧವ್ಯವಲ್ಲ, ಬದಲಿಗೆ ಎರಡು ಕುಟುಂಬಗಳ ಸಂಬಂಧ, ಎರಡು ಕುಟುಂಬಗಳ ನಡುವಿನ ಸಾಮರಸ್ಯದ ಬಂಧ. ಇದನ್ನು ಒಪ್ಪಿಕೊಳ್ಳೋಣ. ಆದರೆ ಮದ್ವೆನೇ ವರ್ಕ್​ ಆಗಿಲ್ಲಾ ಎಂದ್ರೆ...? ಆಗ್ಲೂ ಎರಡು ಕುಟುಂಬಗಳ ನಡುವಿನ ಸಂಬಂಧವಪ್ಪಾ... ಡಿವೋರ್ಸ್​ಆಗ್ಬೇಡಿ ಎನ್ನೋಕಾ ಆಗತ್ತಾ? ಆ ಮದುವೆ ಯಾಕೆ ಮುರಿದು ಬೀಳ್ತಾ ಇದೆ ಎನ್ನೋದು ಆ ದಂಪತಿಗೆ ಮಾತ್ರನೇ ಗೊತ್ತಿರತ್ತೆ. ಅದು ಗಂಡನೇ ಆಗಿರ್ಬೋದು, ಇಲ್ಲಾ ಹೆಂಡ್ತಿನೇ ಆಗಿರ್ಬೋದು... ಅವರು ಯಾವ ಸಿಚುವೇಷನ್​ನಲ್ಲಿ ಇದ್ದಾರೆ, ಅವರಿಗೆ ಏನು  ಆಗ್ತಿದೆ, ಮದುವೆ ಯಾಕೆ ಹೀಗಾಗ್ತಿದೆ, ಇಬ್ಬರ ನಡುವೆ ಹೊಂದಾಣಿಕೆ ಯಾಕೆ ಸಾಧ್ಯವಾಗ್ತಿಲ್ಲ... ಹೀಗೆ ವಿಷ್ಯ ಏನೇ  ಇರಲಿ... ಅದು ಗೊತ್ತಿರೋದು ಅವರಿಬ್ಬರಿಗೆ ಮಾತ್ರ. ಇಂಥ ಸಂದರ್ಭದಲ್ಲಿ ವಿಚ್ಛೇದನಕ್ಕೆ ಅವರು ಇಷ್ಟಪಟ್ಟರೆ ಅದನ್ನು ಕುಟುಂಬದವರು ವಿರೋಧಿಸೋದು ಯಾಕೆ ಅಂತನೇ ಅರ್ಥವಾಗ್ತಿಲ್ಲ....

-- ಇದು ನಟಿ ಅನು ಪ್ರಭಾಕರ್​ ಮನದಾಳದ ಮಾತು. ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ವಿಚ್ಛೇದನದ ಕುರಿತು ಮಾತನಾಡಿದ್ದಾರೆ. ಸೆಲೆಬ್ರಿಟಿಗಳು ಅಥವಾ ಕೆಲವು ಪ್ರತಿಷ್ಠಿತ ಕುಟುಂಬಗಳಲ್ಲಿ ಮದುವೆ, ಡಿವೋರ್ಸ್​ ಎನ್ನುವುದು ಮಾಮೂಲು. ಆದರೆ ಸಾಮಾನ್ಯ ವರ್ಗದವರ ವಿಷಯಕ್ಕೆ ಬಂದಾಗ ವಿಚ್ಛೇದನ ಎನ್ನುವುದು ಕುಟುಂಬಸ್ಥರಿಂದ ಅರಗಿಸಿಕೊಳ್ಳಲು ಸಾಧ್ಯವಾಗದ ಮಾತು. ಗಂಡ ಬಿಟ್ಟ ಹೆಣ್ಣು ಎನ್ನಿಸಿಕೊಳ್ಳುವ ಮಗಳ ಬಗ್ಗೆ ಚಿಂತಿಸುವ ಅಪ್ಪ-ಅಮ್ಮಂದಿರು ಅದೆಷ್ಟೋ ಮಂದಿ. ಇದೇ ಕಾರಣಕ್ಕೆ  ತಾನೆ ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆ ಮಾತು ಮಾಡಿರುವುದು. ಪತಿಯೇ ಪರಮೇಶ್ವರ, ಪತಿಯೇ ಪರದೈವ ಎನ್ನುವ ಮಾತು ಹಿಂದೂಗಳಲ್ಲಿ ತಲೆತಲಾಂತರಗಳಿಂದಲೂ ಬಂದಿದೆ. ಏನೇ ಆದರೂ ಹೆಣ್ಣು ಪತಿಯ ಮನೆಯಲ್ಲಿ ಸಹಿಸಿಕೊಂಡು ಬಾಳಬೇಕು. ಮನೆಯಿಂದ ಹೊರಟ ಆಕೆ ಗಂಡನ ಮನೆಗೆ ಹೊಸಲು ದಾಟಿ ಹೋದರೆ, ಆಕೆಯ ಹೆಣ ಪತಿಯ ಮನೆಯಿಂದ ಬರಬೇಕು ಎನ್ನುವ ಮಾತು ಇದೆ. ಈ ಮಾತು ಬಂದಿರುವ ಕಾರಣ ಏನೇ ಇದ್ದಿರಬಹುದು. ಆದರೆ ಇಂದು ಅದೆಷ್ಟೋ ಹೆಣ್ಣುಮಕ್ಕಳು ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆಯಿಂದ ಪತಿಯ ಮನೆಯಲ್ಲಿಯೇ ಹೆಣವಾಗುತ್ತಿರುವುದು ಮಾತ್ರ ವಿಪರ್ಯಾಸ. ಇದಕ್ಕೆ ಕಾರಣ ಗಂಡನಿಂದ ಬೇರೆಯಾಗಲು ಆಕೆಗೆ ಅವಕಾಶಗಳೇ ಇಲ್ಲದಿರುವುದು.  ಏಕೆಂದ್ರೆ ಡಿವೋರ್ಸ್​ ಎನ್ನುವುದು ಎಷ್ಟೋ ಹೆಣ್ಣು ಮಕ್ಕಳ ತವರಿನವರಿಗೆ ಅರಗಿಸಿಕೊಳ್ಳಲಾಗದ ಸತ್ಯ!

Latest Videos

ಅನುಶ್ರೀ ಅಂತ ಹೆಸ್ರು ಬದಲಾಯಿಸ್ತೇನೆ ಅಂದ್ರು ಪಾರ್ವತಮ್ಮಾ... ಪ್ಲೀಸ್​ ಬೇಡಮ್ಮಾ ಎಂದು ರಿಕ್ವೆಸ್ಟ್​ ಮಾಡಿದೆ...

ಅದೇ ರೀತಿ ಹೆಣ್ಣಿನಿಂದ ಚಿತ್ರಹಿಂಸೆ ಅನುಭವಿಸುವ ಗಂಡಸರೂ ಇಲ್ಲದಿಲ್ಲ. ಆದರೆ ಎಷ್ಟೋ ಕಾರಣಗಳಿಗೆ ಆ ದಾಂಪತ್ಯ ಜೀವನದಿಂದ ಹೊರಕ್ಕೆ ಬರಲು ಸಾಧ್ಯವಾಗದೇ ಇರಬಹುದುದ. ಇದನ್ನೇ ಅನು ಪ್ರಭಾಕರ್​ ಕೂಡ ಹೇಳಿದ್ದಾರೆ. ದಂಪತಿ ನಡುವೆ ಏನೇ ಸಮಸ್ಯೆ ಆಗಿರಲಿ. ಅದು ಹೆಣ್ಣು ಅಥವಾ ಗಂಡು ಯಾರೇ ಆಗಿರಬಹುದು. ಡಿವೋರ್ಸ್​ಗೆ ಅವರು ಮನಸ್ಸು ಮಾಡಿದಾಗ ಕುಟುಂಬಸ್ಥರು ಅದಕ್ಕೆ ಸಪೋರ್ಟ್​ ಮಾಡಬೇಕು ಎಂದಿದ್ದಾರೆ. ಕೆಲವು ಘಟನೆಗಳನ್ನು ನಾನು ನೋಡಿದ್ದೇನೆ. ಅಯ್ಯೋ ಏಳು ಕೋಟಿ ಖರ್ಚು ಮಾಡಿ ಮದುವೆ ಮಾಡಿದೆ... ಈಗ ಡಿವೋರ್ಸ್​ ಅಂದ್ರೆ... ಅಂತೆಲ್ಲಾ ಹೇಳ್ತಾರೆ. ಸರಿ. ಖರ್ಚೇನೋ ಮಾಡಿದ್ರಿ. ಆದರೆ ಮಗಳಿಗೆ ಡಿವೋರ್ಸ್ ಕೊಡಿಸದೇ ಅವಳು ಹೆಣ ಆಗುವುದನ್ನು ನೋಡಬೇಕಾ ಎನ್ನುವ ಪ್ರಶ್ನೆಯನ್ನು ಅನು ಮುಂದಿಟ್ಟಿದ್ದಾರೆ. ಹೆಣ್ಣು ಮಕ್ಕಳ ಕೊಲೆ ಮಾಡುವ ಎಷ್ಟೋ ಘಟನೆಗಳನ್ನು ನೋಡುತ್ತಿದ್ದೇವೆ. ಆಗ ಗೋಳೋ ಎನ್ನುವ ಬದಲು, ಆಕೆಗೆ ಡಿವೋರ್ಸ್​ ಕೊಡಿಸಬಾರದಾ ಎನ್ನುವುದು ಅವರ ಮಾತು. 

ಇನ್ನು ಅನು ಪ್ರಭಾಕರ್ ಕುರಿತು ಹೇಳುವುದಾದರೆ, ಇವರು 1999ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ಅಭಿನಯದ 'ಹೃದಯ ಹೃದಯ' ಸಿನಿಮಾದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು.  ನಂತರ ರಮೇಶ್ ಅರವಿಂದ್ ಕೆಲ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡರು.  ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಹಲವು ಅಭಿನಯಿಸಿದರು.  2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರ ಜೊತೆ ಅನು ಮದುವೆಯಾಯಿತು,  2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು.  2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಈ ಜೋಡಿಗೆ ಮಗಳಿದ್ದಾಳೆ. 

ವಿಷ್ಣುವರ್ಧನ್​ ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ತಿದ್ಯಾಕೆ? ಅವರ ಒಡನಾಟ ಹೇಗಿತ್ತು? ಅನು ಪ್ರಭಾಕರ್ ಮನದಾಳದ ಮಾತು...

click me!