ಟ್ರಾಪ್ ಆಗೋದು ಆಮೇಲೆ ಒದ್ದಾಡೋದು ನಂಗೆ ಆಗಿಬರಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ಯಶ್..!

By Shriram Bhat  |  First Published Jul 31, 2024, 11:30 AM IST

ನಟ ಯಶ್ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟಾಗಿ ಕ್ರಿಯಾಶೀಲವಾಗಿಲ್ಲ. ಈ ಬಗ್ಗೆ ಯಶ್ ಮಾತನಾಡಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ನಟ ಯಶ್ ಏನು ಹೇಳಿದ್ದಾರೆ. 'ನಾನು ಈ ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಳನ್ನು ನಂಬೋದಿಲ್ಲ.. 


ಕನ್ನಡದ ನಟ, ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ನಟ ಯಶ್ (Rocking Star Yash) ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದು ಗೊತ್ತೇ ಇದೆ. ಈ ಎರಡೂ ಸಿನಿಮಾಗಳಿಗೆ ಯಶ್ ಕೇವಲ ನಟರಲ್ಲ, ನಿರ್ಮಾಪಕರೂ ಹೌದು. ಈ ಮೂಲಕ ಸ್ಟಾರ್ ನಟ ಯಶ್, ಕೇವಲ ನಟರಾಗಿ ಅಲ್ಲದೇ ನಿರ್ಮಾಪಕರಾಗಿಯೂ ಬೆಳೆಯುತ್ತಿದ್ದಾರೆ. ನಟ ಯಶ್ ಬಹಳಷ್ಟು ಕನಸು ಕಂಡಿದ್ದಾರೆ ಎನ್ನಲಾಗಿದ್ದು ಮುಂಬರುವ ದಿನಗಳಲ್ಲಿ ಒಂದೊಂದೇ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ಸಿನಿಮಾ ಟಾಕ್ಸಿಕ್ ಮೂಲಕ ನಟ ಯಶ್ ಪ್ಯಾನ್ ವಲ್ಟ್ಡ್‌ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ. ನಟನೆ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿ ಇನ್ನೂ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದಾರೆ ಯಶ. ಕನ್ನಡ ಸಿನಿಮಾರಂಗಕ್ಕೆ ಭಾರತೀಯ ಮಾರುಕಟ್ಟೆ ದೊರಕಿಸಿಕೊಟ್ಟಿದ್ದು ನಟ ಯಶ್ ಹಾಗೂ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು. ಈಗ ಜಾಗತಿಕ ಮಾರುಕಟ್ಟೆಗೆ ಅದನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ ಯಶ್ ಎನ್ನಲಾಗಿದೆ. 

Tap to resize

Latest Videos

undefined

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

ನಟ ಯಶ್ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟಾಗಿ ಕ್ರಿಯಾಶೀಲವಾಗಿಲ್ಲ. ಈ ಬಗ್ಗೆ ಯಶ್ ಮಾತನಾಡಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ನಟ ಯಶ್ ಏನು ಹೇಳಿದ್ದಾರೆ. 'ನಾನು ಈ ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಳನ್ನು ನಂಬೋದಿಲ್ಲ.. ಎಲ್ಲರೂ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟೈಮ್ ಕಳಿತಾರೆ. ಅವರಿಗೆ ಅಲ್ಲಿ ಏನೋ ಒಂದಿಷ್ಟು ಕಂಟೆಂಟ್‌ಗಳು ಬೇಕಾಗಿರ್ತವೆ.. ನೀವು ಆ ಒಂದು ಬಲೆಯಲ್ಲಿ ಸಿಕ್ಕಾಕೊಂಡ್ರೆ ಮುಗೀತು ಅಂತಾನೇ ಲೆಕ್ಕ!  

ಯಾಕಂದ್ರೆ, ಅಲ್ಲಿ ಅವ್ರು ಮಾಡೋದೇನು ಅಂದ್ರೆ, ತಮಗೆ ಎಷ್ಟು ಲೈಕ್ ಬಂದಿದೆ, ಎಷ್ಟು ಡಿಸ್‌ಲೈಕ್ ಬಂದಿದೆ ಅನ್ನೋದು. ಅದಕ್ಕಿಂತ ಹೆಚ್ಚಾಗಿ, ಅವ್ರಿಗೆ ಹೆಚ್ಚು ಲೈಕ್ಸ್ ಬಂದ್ರೆ ಅವ್ರು ಖುಷಿಯಾಗಿ ಇರ್ತಾರೆ, ಕಮ್ಮಿ ಲೈಕ್ಸ್ ಬಂದಿದ್ರೆ ಅವರು ಫುಲ್ ಬೇಸರಗೊಳ್ತಾರೆ. ಈ ಸೋಷಿಯಲ್ ಮೀಡಿಯಾ ಅನ್ನೋದು ಒಂಥರಾ ಟ್ರಾಪ್. ಅದರಲ್ಲಿ ಒಮ್ಮೆ ಸಿಕ್ಕಾಕೊಂಡ್ರೆ ಅದೆಷ್ಟೋ ಜನ ಅದ್ರಿಂದ ಹೊರಗೆ ಬರೋಕಾಗ್ದೇ ಒದ್ದಾಡ್ತಾ ಇರ್ತಾರೆ. 

ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...!

ತುಂಬಾ ಜನ್ರು ನನ್ನ ಹತ್ರ ಹೇಳ್ತಾರೆ, 'ನಾವು ಹೆಚ್ಚು ಹೆಚ್ಚು ಕೆಲಸಗಳಲ್ಲಿ ತೊಡಗಿಸಿಕೊಂಡು ಹೆಚ್ಚು ಹೆಚ್ಚು ಜನರ ಕಣ್ಣಿಗೆ ಬೀಳ್ತಾ ಇರ್ಬೇಕು ಅಂತ. ಅದಕ್ಕೇನೇ ಸಾಕಷ್ಟು ಜನರು ಸೋಷಿಯಲ್ ಮೀಡಿಯಾ ನೋಡ್ತಾ, ಅದ್ರಲ್ಲೇ ಕಾಲ ಕಳೀತಾ ಇರ್ತಾರಂತೆ. ಆದ್ರೆ ನನ್ನ ಪ್ರಕಾರ, ನಾವು ಎಷ್ಟು ಕೆಲಸ ಮಾಡ್ತೀವಿ ಅನ್ನೋದಕ್ಕಿಂತ ನಮ್ಮ ಕೆಲಸದ ಪರಿಣಾಮ ಎಷ್ಟು ಹೆಚ್ಚು ಆಗುತ್ತೆ ಅನ್ನೋದು ಮುಖ್ಯ. 

ನನಗೆ ಹೆಚ್ಚು ಹೆಚ್ಚು ಕೆಲಸ ಮಾಡೋದು, ಪರಿಶ್ರಮ ಪಡ್ಬೇಕು ಅಂತ ಹೇಳೋದು, ಅಂತಹ ಮಾತಲ್ಲೆಲ್ಲಾ ನಂಬಿಕೆ ಇಲ್ಲ. ನನ್ನ ಪ್ರಕಾರ, ನಿಮ್ಮ ಕೆಲಸದ ಕ್ವಾಂಟಿಟಿಗಿಂತ ಆ ಕೆಲಸದ ಕ್ವಾಲಿಟಿ ಮುಖ್ಯ. ನಿಮ್ಮ ಕೆಲಸ ಸುದ್ದಿಯಾಗೋದಕ್ಕಿಂತ ಆ ಕೆಲಸದ ಪರಿಣಾಮ ತುಂಬಾ ಜಾಸ್ತಿ ಆಗ್ಬೇಕು. ಬರೀ ಸುದ್ದಿಯಿಂದ ಏನೂ ಪ್ರಯೋಜನ ಇಲ್ಲ. ಕೆಲಸದ ಪರಿಣಾಮ ಸುದ್ದಿ ಆಗದಿದ್ದರೂ ಅದೇ ಸುದ್ದಿಗಿಂತಲೂ ಹೆಚ್ಚು ಪ್ರಯೋಜನ ಆಗುತ್ತೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ನಟ ಯಶ್. 

'ಡೆವಿಲ್' ಹೀರೋ ದರ್ಶನ್ ಬಗ್ಗೆ ನಟಿ ತನಿಷಾ ಡೇರ್ ಆಗಿ ಏನಂದ್ರು? ಯಾವ್ದು ಸ್ವಲ್ಪ ಓವರ್ ಆಯ್ತಂತೆ?

click me!