ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

By Shriram Bhat  |  First Published Jul 31, 2024, 10:21 AM IST

ಮಾಲಾಶ್ರೀಯವರ ಅಮೋಘ ಅಭಿನಯ ಎಲ್ಲರ ಹೃದಯ ಗೆದ್ದಿಬಿಟ್ಟಿತ್ತು. ಮಡಿವಂತಿಕೆ, ಮೈ ಚಳಿ ಸೇರಿದಂತೆ ಚಿತ್ರರಂಗಕ್ಕೆ ಬೇಡವಾದ ಎಲ್ಲವನ್ನೂ ಬಿಟ್ಟು ಆ ಕಾಲದಲ್ಲಿ ನಟಿಯಾಗಿ ಬೆಳೆದಿದ್ದರು ಮಾಲಾಶ್ರೀ. ಕನ್ನಡದ ಕನಸಿನ ರಾಣಿ ಎಂಬ ಬಿರುದು ಪಡೆದು ಮರೆದರು. ಬಳಿಕ, ಪಾರ್ವತಮ್ಮನವರ..


ಕನ್ನಡದ ಕನಸಿನ ರಾಣಿ ಖ್ಯಾತಿಯ ನಟಿ ಮಾಲಾಶ್ರೀ, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದವರು. 1989ರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾಲಾಶ್ರೀ (Malashri), 90ರ ದಶಕವನ್ನು ಸಂಪೂರ್ಣ ಎಂಬಂತೆ ಆಳಿ, ಕೂಡ ಕನ್ನಡ ಸಿನಿಮಾ ಉದ್ಯಮದಲ್ಲಿ ರಾಣಿಯಂತೆ ಮೆರೆದವರು. ಕಲ್ಪನಾ, ಆರತಿ, ಭಾರತಿ ಹೀಗೆ ಯಾರ ಹೆಸರನ್ನೇ ಹೇಳಿದರೂ, ಅಥವಾ ನಂತರದ ಪ್ರೇಮಾ, ರಮ್ಯಾ, ರಾಧಿಕಾ ಹಾಗೂ ರಕ್ಷಿತಾರನ್ನೇ ಲೆಕ್ಕಕ್ಕೆ ತೆಗೆದುಕೊಂಡರೂ ಮಾಲಾಶ್ರೀ ಅವರಷ್ಟು ಕನ್ನಡ ಸಿನಿಮಾರಂಗವನ್ನೇ ಅಕ್ಷರಶಃ ಆಳಿದವರು ಯಾರೂ ಇಲ್ಲ. 

ಪಾರ್ವತಮ್ಮ ರಾಜ್‌ಕುಮಾರ್ (Dr Rajkumar) ಫ್ಯಾಮಿಲಿಯ ಶ್ರೀ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ನಿರ್ಮಾಣದ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಟಿ ಮಾಲಾಶ್ರೀ. ಡಾ ರಾಜ್‌ಕುಮಾರ್ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ 'ನಂಜುಂಡಿ ಕಲ್ಯಾಣ' ಸಿನಿಮಾದಲ್ಲಿ ನಟಿಸಿದ ಮಾಲಾಶ್ರೀ, ಸಿನಿಮಾ ತೆರೆಗೆ ಬಂದ ದಿನವೇ ಸೂಪರ್ ಸ್ಟಾರ್ ಅಗಿಬಿಟ್ಟರು. ನಂಜುಂಡಿ ಕಲ್ಯಾಣ (Nanjundi Kalyana) ಸೂಪರ್ ಹಿಟ್ ಆಗುವ ಮೂಲಕ ನಟಿ ಮಾಲಾಶ್ರೀಗೆ ಮೊದಲ ಚಿತ್ರದಲ್ಲೇ ಲಾಟರಿ ಹೊಡೆದಿತ್ತು. 

Tap to resize

Latest Videos

undefined

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?

ಮಾಲಾಶ್ರೀಯವರ ಅಮೋಘ ಅಭಿನಯ ಎಲ್ಲರ ಹೃದಯ ಗೆದ್ದಿಬಿಟ್ಟಿತ್ತು. ಮಡಿವಂತಿಕೆ, ಮೈ ಚಳಿ ಸೇರಿದಂತೆ ಚಿತ್ರರಂಗಕ್ಕೆ ಬೇಡವಾದ ಎಲ್ಲವನ್ನೂ ಬಿಟ್ಟು ಆ ಕಾಲದಲ್ಲಿ ನಟಿಯಾಗಿ ಬೆಳೆದಿದ್ದರು ಮಾಲಾಶ್ರೀ. ಕನ್ನಡದ ಕನಸಿನ ರಾಣಿ ಎಂಬ ಬಿರುದು ಪಡೆದು ಮರೆದರು. ಬಳಿಕ, ಪಾರ್ವತಮ್ಮನವರ ನಿರ್ಮಾಣದಲ್ಲೇ ಮತ್ತೆ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ 'ಗಜಪತಿ ಗರ್ವಭಂಗ' ಹಾಗೂ ಶಿವರಾಜ್‌ಕುಮಾರ್ ಜೋಡಿಯಾಗಿ 'ಮೃತ್ಯುಂಜಯ' ಸಿನಿಮಾದಲ್ಲಿ ಮಾಲಾಶ್ರೀ ಅಭಿನಯಿಸಿ ತಮ್ಮ ಗೆಲುವು ಆಕಸ್ಮಿಕವಲ್ಲ ಎಂಬುದನ್ನೂ ಪ್ರೂವ್ ಮಾಡಿಬಿಟ್ಟರು. 

ಅದೆಂಥಹ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಮಾಲಾಶ್ರೀ ಅವರನ್ನು ಕನ್ನಡ ಪ್ರೇಕ್ಷಕರು ಒಪ್ಪಿಕೊಂಡು ಅವರ ನಟನೆಯ ಚಿತ್ರಕ್ಕೆ ಖಾಯಂ ಪ್ರೇಕ್ಷಕರಾಗಿಬಿಟ್ಟರು. ಅಂದು ನಟಿ ಮಾಲಾಶ್ರೀ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂದಿತ್ತು. ಅದೇ ಸ್ಥಿತಿಯಲ್ಲಿ ಕನ್ನಡದ ಕನಸುಗಾರ ನಟ-ನಿರ್ಮಾಪಕ ರವಿಚಂದ್ರನ್ ಕೂಡ ಇದ್ದರು. ಕನ್ನಡದ ಅಂದಿನ ಯಾವ ಸೂಪರ್‌ ಸ್ಟಾರ್‌ ಹೀರೋಗೂ ಇಲ್ಲದ ಬೇಡಿಕೆ ಮಾಲಾಶ್ರೀ ಅವರಿಗೆ ಬಂದುಬಿಟ್ಟಿತ್ತು. 

ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...!

ಅದಕ್ಕೆ ತಕ್ಕಂತೆ ಮಾಲಾಶ್ರೀ ಕೂಡ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ದಿನಕ್ಕೆ 2 ಅಥವಾ 3 ಕಾಲ್‌ಶೀಟ್‌ನಲ್ಲಿ ಮಾಲಾಶ್ರೀ ಕೆಲಸ ಮಾಡುತ್ತಿದ್ದರೂ ಹಲವು ನಿರ್ಮಾಪಕರು ಮಾಲಾಶ್ರೀ ಕಾಲ್‌ಶೀಟ್ ಸಿಗದೇ ಕಂಗಾಲಾಗಿದ್ದರು. ಅವರಲ್ಲಿ ನಟ-ನಿರ್ಮಾಪಕರಾದ ರವಿಚಂದ್ರನ್ ಸಹ ಒಬ್ಬರು. ರಾಮಾಚಾರಿ ಚಿತ್ರಕ್ಕಾಗಿ ನಟ ರವಿಚಂದ್ರನ್ ಅವರು ಮಾಲಾಶ್ರೀ ಅವರ 10 ದಿನಗಳ ಕಾಲ್‌ಶೀಟ್‌ ಕೇಳಿದ್ದರು. ಆದರೆ, ಮಾಲಾಶ್ರೀ ಅವರು ಆ ಸಮಯದಲ್ಲಿ ಅದೆಷ್ಟು ಬ್ಯುಸಿ ಇದ್ದರು ಎಂದರೆ, ರವಿಚಂದ್ರನ್ ಅವರ ಕನಸಿನ 'ರಾಮಾಚಾರಿ' ಸಿನಿಮಾಗೆ ಕೇವಲ 10 ದಿನಗಳ ಕಾಲ್‌ಶೀಟ್ ಕೊಡುವುದು ಕೂಡ ಸಾಧ್ಯವೇ ಇರಲಿಲ್ಲ. 

ಕಷ್ಟಪಟ್ಟು ಹೇಗೋ ಕೊನೆಗೆ ಸಾಕಷ್ಟು ಕಾಲದ ಬಳಿಕ ರಾಮಾಚಾರಿಗೆ ಕೆಲವೇ ದಿನಗಳ ಡೇಟ್ಸ್ ಕೊಟ್ಟು ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಅಂದು 'ಶಾಂತಿ ಕ್ರಾಂತಿ' ಸೋಲಿನಿಂದ ಕಂಗೆಟ್ಟಿದ್ದ ರವಿಚಂದ್ರನ್ ಅವರು, ಮಾಲಾಶ್ರೀ ನಟನೆಯ 'ರಾಮಾಚಾರಿ' ಚಿತ್ರದ ಮೂಲಕ ದೊಡ್ಡ ಗೆಲುವಿನ ನಗೆ ಬೀರಿದ್ದರು. ಮಾಲಾಶ್ರೀ-ರವಿಚಂದ್ರನ್ ಮಧ್ಯೆ ಬೇರೆ ಯಾವುದೇ ಸಮಸ್ಯೆ ಆಗಿರಲಿಲ್ಲ, ಕೇವಲ ಡೇಟ್ಸ್‌ ಸಮಸ್ಯೆ ಆಗಿತ್ತು. ಡೇಟ್ಸ್ ಹೊಂದಾಣಿಕೆ ಆಗುತ್ತಲೇ ಸಮಸ್ಯೆ ಪರಿಹಾರ ಕಂಡಿತ್ತು. 

ಡೆವಿಲ್' ಹೀರೋ ದರ್ಶನ್ ಬಗ್ಗೆ ನಟಿ ತನಿಷಾ ಡೇರ್ ಆಗಿ ಏನಂದ್ರು? ಯಾವ್ದು ಸ್ವಲ್ಪ ಓವರ್ ಆಯ್ತಂತೆ?

ಕನ್ನಡದ ಸೂಪರ್ ಸ್ಟಾರ್‌ ಆಗಿ ಮಾಲಾಶ್ರೀ ಮಿಂಚಿದ್ದ ಕಾಲವನ್ನು ಕನ್ನಡದ ಸುವರ್ಣ ಯುಗ ಎಂದೂ ಹೇಳಬಹುದು. ಅದು ವೈಯಕ್ತಿಕವಾಗಿ ಮಾಲಾಶ್ರೀ ಅವರಿಗೂ ಗೋಲ್ಡನ್‌ ಕಾಲ. ಮಾಲಾಶ್ರೀ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು, ಅವರು ಕಾಲ್‌ಶೀಟ್ ಕೊಟ್ಟರೆ ನಿರ್ಮಾಪಕರು ಲಾಭ ಗಳಿಸುತ್ತಿದ್ದರು. ಆದರೆ, ನಟಿ ಮಾಲಾಶ್ರೀ ಕಾಲ್‌ಶೀಟ್‌ಗಾಗಿ ಅಂದು ಯಾರನ್ನೂ ಗೋಳು ಹುಯ್ದುಕೊಂಡವರಲ್ಲ. ಡಬಲ್ ಕಾಲ್‌ಶೀಟ್ ಹಾಗೂ ನೈಟ್‌ ಶಿಪ್ಟ್ ಕೆಲಸ ಮಾಡಿದ್ದರೂ ಮಾಲಾಶ್ರೀ ಹಲವರಿಗೆ ಕಾಲ್‌ಶೀಟ್ ಕೊಡಲು ಸಾಧ್ಯವೇ ಇರಲಿಲ್ಲ. 

ಪರಿಸ್ಥಿತಿ ಹಾಗಿದ್ದರೂ, ಸ್ಟಾರ್ ನಟಿಯಾಗಿದ್ದರೂ ಮಾಲಾಶ್ರೀ ಅವರು ಅಂದು ಯಾರಿಗೂ ಅವಮಾನ ಮಾಡಿರಲಿಲ್ಲ. ಡೇಟ್ಸ್ ಕೇಳಿದ ಯಾರಿಗೂ ಆಗಲ್ಲ ಎಂದಿರಲಿಲ್ಲ. ಆದರೆ, ಎಲ್ಲರೂ ಅನಿವಾರ್ಯವಾಗಿ ಕಾಯಲೇಬೇಕಿತ್ತು. ಅಂದು ಹಾಗೆ ಮಾಲಾಶ್ರೀ ಅವರಿಗೆ ಕಾದ ರವಿಚಂದ್ರನ್ ಅವರು ಆಮೇಲೆ ಅವರಿಂದ ಲಾಭವನ್ನೇ ಮಾಡಿಕೊಂಡರು. ಹೀಗಾಗಿ, ಕಾದ ನೋವು ರವಿಚಂದ್ರನ್‌ಗೆ ಇರಲಿಲ್ಲ, ಕಾಯಿಸಿದೆ ಎಂಬ ಅಪರಾಧಿ ಭಾವ ಮಾಲಾಶ್ರೀ ಅವರಿಗೂ ಉಂಟಾಗಲಿಲ್ಲ. 

ಶ್‌!..ಹುಶಾರಾಗಿರಿ, ಶ್ರಾವಣ ಮಾಸದಲ್ಲಿ ತಲೆಯೊಳಗೆ ಹುಳ ಬಿಡಲು ಪ್ಲಾನ್ ಮಾಡಿದೆ ಉಪೇಂದ್ರ & ಟೀಮ್!

click me!