Rajadrohi Cinema: 40 ವರ್ಷಗಳ ಬಳಿಕ ಒಂದಾದ ಅನಂತ್​ನಾಗ್​-ಲಕ್ಷ್ಮಿ ಜೋಡಿ! ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್​ ಕಾತರ

Published : Jul 23, 2025, 04:53 PM ISTUpdated : Jul 23, 2025, 04:57 PM IST
Rajadrohi Film

ಸಾರಾಂಶ

70-80ರ ದಶಕದಲ್ಲಿ ಕಿಚ್ಚು ಹೊತ್ತಿಸಿದ್ದ ಅನಂತ್​ನಾಗ್​-ಲಕ್ಷ್ಮಿ ಜೋಡಿ 40 ವರ್ಷಗಳ ಬಳಿಕ ಜೊತೆಯಾಗಿ ನಟಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾವುದೀ ಚಿತ್ರ? ಡಿಟೇಲ್ಸ್​ ಇಲ್ಲಿದೆ... 

ಅನಂತನಾಗ್ ಮತ್ತು ಜ್ಯೂಲಿ ಲಕ್ಷ್ಮಿ ಜೋಡಿಯು ಚಂದನವನದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಈ ಜೋಡಿಯ ಕೆಮೆಸ್ಟ್ರಿಗೆ ಮನಸೋಲದವರೇ ಇಲ್ಲ. ಇವರಿಬ್ಬರ ಜೋಡಿ ಅಭಿನಯಿಸಿತು ಎಂದರೆ ಚಿತ್ರ ಸೂಪರ್​ಹಿಟ್​ ಎನ್ನುವ ಒಂದು ಕಾಲವಿತ್ತು. ಸುಮಾರು 13 ಚಿತ್ರಗಳಲ್ಲಿ ಅನಂತ್​ನಾಗ್​ ಮತ್ತು ಲಕ್ಷ್ಮೀ ಜೊತೆಯಾಗಿ ನಟಿಸಿದ್ದಾರೆ. 'ನಾ ನಿನ್ನ ಬಿಡಲಾರೆ', 'ಚಂದನದ ಗೊಂಬೆ', 'ಬೆಂಕಿಯ ಬಲೆ', 'ಮುದುಡಿದ ತಾವರೆ ಅರಳಿತು' ಸೇರಿದಂತೆ ಹಲವು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ಕೊಟ್ಟಿದ್ದಾರೆ. 1985ರ ‘ಸೇಡಿನ ಹಕ್ಕಿ’ ಇವರಿಬ್ಬರು ಜೊತೆಯಾಗಿ ನಟಿಸಿದ ಕೊನೆಯ ಚಿತ್ರ. ಇದರ ಅರ್ಥ ಇದೀಗ ಅನಂತ್​ನಾಗ್​ ಮತ್ತು ಲಕ್ಷ್ಮೀ ಅವರು ಜೊತೆಯಾಗಿ ನಟಿಸಿ 40 ವರ್ಷಗಳೇ ಸಂದಿವೆ.

ಆದರೆ, ಈ ಜೋಡಿಯ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಇದೆ. ಅದೇನೆಂದರೆ ಇವರಿಬ್ಬರೂ ಮತ್ತೆ ಜೊತೆಯಾಗಿ 40 ವರ್ಷಗಳ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪ್ಪ-ಅಮ್ಮನ ರೋಲ್​ನಲ್ಲಿ ಇವರು ಮಿಂಚಲಿದ್ದಾರೆ. 76 ವರ್ಷದ ಅನಂತ್​ ನಾಗ್​ ಹಾಗೂ 72 ವರ್ಷದ ಲಕ್ಷ್ಮೀ ಅವರು ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ರಾಜದ್ರೋಹಿ ಎನ್ನುವ ಚಿತ್ರದ ಮೂಲಕ. ಈ ಚಿತ್ರದಲ್ಲಿ ನಾಯಕನ ಅಪ್ಪ-ಅಮ್ಮ ಆಗಿ ಇವರು ನಟಿಸಿದ್ದಾರೆ ಎನ್ನಲಾಗಿದೆ.

ಸಮರ್ಥ ರಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿರುವ ಈ ಚಿತ್ರ ಆರಂಭವಾಗಿ ಕೆಲವು ವರ್ಷಗಳೇ ಕಳೆದಿದ್ದವು. ಇದೀಗ ಅದಕ್ಕೆ ಮುಹೂರ್ತ ಬಂದಿದ್ದು, ಮುಂದಿನ ತಿಂಗಳು ಅರ್ಥಾತ್​ ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅಪ್ಪ ಅಮ್ಮ ಮತ್ತು ಮಕ್ಕಳ ನಡುವಿನ ಸಂಬಂಧ ಸಾರುವ ಕೌಟುಂಬಿಕ ಚಿತ್ರವಿದು. ಈ ಜೋಡಿಯ ಜೊತೆಗೆ ಶರಣ್, ಅಭಿಜಿತ್, ಒರಟ ಪ್ರಶಾಂತ್, ನೀನಾಸಂ ಅಶ್ವತ್ಥ್, ಅಚ್ಯುತ್ ಕುಮಾರ್, ಕುರಿಬಾಂಡ್ ಸುನಿಲ್, ಬ್ಯಾಂಕ್ ಜನಾರ್ದನ್, ಪಟ್ರೆ ಅಜಿತ್, ಮಾನಸಿ, ಕುರಿ ಪ್ರತಾಪ್ ಮುಂತಾದ ದೊಡ್ಡ ತಾರಾ ಬಳಗವೇ ಇದೆ.

ಇನ್ನು ಲಕ್ಷ್ಮೀ ಅವರ ಕುರಿತು ಹೇಳುವುದಾದರೆ ಅವರು ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಈಗಲೂ ರಿಯಾಲಿಟಿ ಷೋಗಳಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅನಂತ್​ ನಾಗ್​ ಅವರು, 1990 ರ ದಶಕದ ದ್ವಿತೀಯಾರ್ಧದಲ್ಲಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಕೆಜಿಎಫ್: ಅಧ್ಯಾಯ 1ರಲ್ಲಿಯೂ ಕಾಣಿಇಕೊಂಡರು. ಈ ಅವಧಿಯಲ್ಲಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ವಿವಿಧ ಚಲನಚಿತ್ರ ಪ್ರಶಸ್ತಿಗಳಲ್ಲಿ ಬಹು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳನ್ನು ಗೆದ್ದರು . ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರವು 2013 ರಲ್ಲಿ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಈ ಸಾಲಿನ ಪದ್ಮಭೂಷಣ ಪ್ರಶಸ್ತಿ ಕೂಡ ಅವರಿಗೆ ನೀಡಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?