
ರಾಜಕುಮಾರ, ಕೆಜಿಎಫ್, ಸಲಾರ್, ಕಾಂತಾರದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ಇಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಸಿನಿಮಾದ ( Rishab Shetty Kantara Movie 1 ) ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದೆ. ಈ ವಿಡಿಯೋದಿಂದ, ಸಿನಿಮಾಕ್ಕಾಗಿ ಹಾಕಿದ ಭಾರಿ ಶ್ರಮ ಮತ್ತು ಅದರ ಅದ್ದೂರಿತನ ಏನು ಎನ್ನೋದು ಗೊತ್ತಾಗುವುದು.
ಮೂರು ವರ್ಷಗಳ ಶೂಟಿಂಗ್!
ಶೂಟಿಂಗ್ ಮುಗಿದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ, 250 ದಿನಗಳಿಗೂ ಹೆಚ್ಚು ಕಾಲ ನಡೆದ ಶೂಟಿಂಗ್ ಪಯಣ ಹೇಗಿತ್ತು ಎನ್ನೋದು ತೋರಿಸುತ್ತದೆ. ಮೂರು ವರ್ಷಗಳ ನಿರಂತರ ಶ್ರಮದ ಫಲವೇ ಈ ಸಿನಿಮಾ.
ಬಹುನಿರೀಕ್ಷಿತ ಸಿನಿಮಾ!
ಸಾವಿರಾರು ಸಿಬ್ಬಂದಿ ಪ್ರತಿ ಹಂತದಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ. ಈ ಮೇಕಿಂಗ್ ವಿಡಿಯೋ ರಿಷಬ್ ಶೆಟ್ಟಿ ಅವರ ಕಥೆ ಹೇಳುವ ಶೈಲಿ ಮತ್ತು ಅವರ ನಿಖರತೆಗೆ ಒಂದು ಗೌರವವಾಗಿದೆ. 'ಕಾಂತಾರ ಚಾಪ್ಟರ್ 1' ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಸೇರಿದಂತೆ ಇಡೀ ತಂಡ ಸಿನಿಮಾಗೆ ಅದ್ಭುತ ದೃಶ್ಯ ಮತ್ತು ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.
ಸಿನಿಮಾ ರಿಲೀಸ್ ಯಾವಾಗ?
ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದರಿಂದ ಸಿನಿಮಾ ತನ್ನ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡೇ ವಿವಿಧ ಭಾಷೆ ಮತ್ತು ಪ್ರದೇಶಗಳ ಪ್ರೇಕ್ಷಕರನ್ನು ತಲುಪಲಿದೆ.
ಗಡಿಗಳನ್ನು ಮೀರಿ ಬೆಳೆಯುತ್ತಿರೋ ಸಿನಿಮಾ!
'ಕಾಂತಾರ ಚಾಪ್ಟರ್ 1' ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಭಾರತೀಯ ಸಿನಿಮಾದ ಗಡಿಗಳನ್ನು ಮೀರಿ ಬೆಳೆಯುತ್ತಿದೆ. ಜಾನಪದ, ನಂಬಿಕೆ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಆಚರಿಸುವ ಒಂದು ಆಳವಾದ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ನೀಡಲಿದೆ.
ರಿಷಬ್ ಶೆಟ್ಟಿ ಏನಂತಾರೆ?
“ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಎನ್ನೋದು ನನ್ನ ಕನಸು. 3 ವರ್ಷಗಳ ಪರಿಶ್ರಮ, 250 ದಿನಗಳ ಶೂಟಿಂಗ್, ಎಷ್ಟೇ ಕಷ್ಟಬಂದರೂ ಕೂಡ ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ತಂಡ, ನನ್ನ ನಿರ್ಮಾಪಕರು ಕೈ ಬಿಡಲಿಲ್ಲ. ಪ್ರತಿದಿನ ಸೆಟ್‌ನಲ್ಲಿ ಸಾವಿರಾರು ಜನರನ್ನು ನೋಡ್ತಿದ್ದಾಗ ಇದು ಸಿನಿಮಾವಲ್ಲ, ಶಕ್ತಿ ಎನ್ನೋದು ನನಗೆ ಅರ್ಥ ಆಯ್ತು. ಕಾಂತಾರ ಪ್ರಪಂಚಕ್ಕೆ ನಿಮಗೆಲ್ಲರಿಗೂ ಸ್ವಾಗತ” ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.