
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ 'ನ್ಯಾಷನಲ್ ಕ್ರಶ್' ಖ್ಯಾತಿಯ ನಟಿ. ಸ್ಯಾಂಡಲ್‌ವುಡ್ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ 'ಕರ್ನಾಟಕ ಕ್ರಶ್' ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಜೊತೆಗೆ ತೆಲುಗುಮ ಹಿಂದಿ ಹಾಗು ತಮಿಳು ಸಿನಿಮಾಗಳಲ್ಲಿ ನಿರಂತರವಾಗಿ ನಟಿಸುತ್ತ, ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ನಂಬರ್ ಒನ್ ನಟಿ ಎನ್ನಿಸಿಕೊಂಡಿದ್ದಾರೆ. ಅವರ ನಟನೆಯ ಆಲ್‌ಮೋಸ್ಟ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಅವರೀಗ ಸಿನಿಮಾ ಉದ್ಯಮಕ್ಕೆ 'ಲಕ್ಕಿ ಹೀರೋಯಿನ್' ಎನ್ನಿಸಿದ್ದಾರೆ.
ಸದ್ಯ ಸಿನಿಮಾ ಸಂಗತಿಯ ಬದಲು ನಟಿ ರಶ್ಮಿಕಾ ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಇದ್ಯಾವುದೇ ಭಾಷಾ ವಿವಾದ ಅಲ್ಲ, ಬದಲಿಗೆ ನಟಿ ರಶ್ಮಿಕಾ ಮಂದಣ್ಣ ಅವರು 'ಬಿಸಿನೆಸ್' ಶುರು ಮಾಡಿದ್ದು ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತ, ಭಾರೀ ಸಂಭಾವನೆ ಪಡೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬ್ಯುಸಿನೆಸ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.
ಈ ಬಗ್ಗೆ ರಶ್ಮಿಕಾ ಮಂದಣ್ಣ ಅವರು ತಮ್ಮ ತಾಯಿ ಜೊತೆ ವಿಡಿಯೋ ಕಾಲ್ ಸಂಭಾಷಣೆ ಮಾಡಿದ್ದಾರೆ. ಅದನ್ನು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ಅಭಿಮಾನಿಗಳೊಂದಿಗೆ ಕೂಡ ಈಶೇರ್ ಮಾಡಿಕೊಂಡಿದ್ದಾರೆ. ಇದನ್ನು ತಿಳಿದು ರಶ್ಮಿಕಾ ಅಭಿಮಾನಿಗಳು ಸಖತ್ ಖುಷಿ ಅನುಭವಿಸಿ ಅದನ್ನು ಕಾಮೆಂಟ್ ಮೂಲಕ ರಶ್ಮಿಕಾ ಅವರಿಗೆ ತಿಳಿಸಿದ್ದಾರೆ. ಇದೀಗ ಈ ಸುದ್ದಿ ಇಂಟರ್‌ನ್ಯಾಷನಲ್ ನ್ಯೂಸ್ ಎಂಬಂತೆ ವೈರಲ್ ಆಗ್ತಿದೆ.
ವಿಡಿಯೋ ಕಾಲ್‌ನಲ್ಲಿ ತಾಯಿಗೆ ರಶ್ಮಿಕಾ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ ಎಂಬುದು ಸರಿ.. . ಈ ಬಗ್ಗೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದಾರೆ. ರಶ್ಮಿಕಾ, ಅವರ ತಾಯಿ ಸುಮನ್ ಮಂದಣ್ಣ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ, 'ಇಂದು ನಾನು ತುಂಬಾ ಮುಖ್ಯವಾದ ಶೂಟಿಂಗ್‌ಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಅಮ್ಮ ನೀವು ಹೇಳಿದ ಬ್ಯುಸಿನೆಸ್ ನಾನು ಆರಂಭಿಸುತ್ತಿದ್ದೇನೆʼ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಸುಮನ್, ಮಗಳ ಹೊಸ ಕಾರ್ಯಕ್ಕೆ ಶುಭಾಶಯ ಕೋರಿದ್ದಾರೆ, ಹರಿಸಿ ಹಾರೈಸಿದ್ದಾರೆ.
ರಶ್ಮಿಕಾ ಮಂದಣ್ಣ ಭಾರೀ ಸ್ಟಾರ್ ನಟಿಯಾಗಿ ಸದ್ಯ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇಲ್ಲಿನ ಬಿಗ್ ಸ್ಟಾರ್ ನಟರೊಂದಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಜೊತೆಗೆ, ಇದೀಗ ಅವರು ಹೊಸ ಬಿಸಿನೆಸ್ ಶುರು ಮಾಡಿ ಮತ್ತೊಂದು ಸುದ್ದಿಗೆ ಕಾರಣರಾಗಿದ್ದಾರೆ. ಅದೆಲ್ಲಾ ಸರಿ, ನಟಿ ರಶ್ಮಿಕಾ ಅದೇನು ಬಿಸಿನೆಸ್ ಮಾಡ್ತಿದ್ದಾರೆ?
ರಶ್ಮಿಕಾ ತಾವು ಆರಂಭಿಸುತ್ತಿರುವ ಬ್ಯುಸಿನೆಸ್‌ನ ವಿವರಗಳನ್ನು ಗುಟ್ಟಾಗಿಟ್ಟಿದ್ದು, ಸೋಮವಾರ (ಜುಲೈ 20) ಈ ಬಗ್ಗೆ ರಿವೀಲ್ ಮಾಡೋದಾಗಿ ಹೇಳಿಕೊಂಡಿದ್ದರು. ರಶ್ಮಿಕಾ ಶುರು ಮಾಡುತ್ತಿರುವ ಹೊಸ ಬ್ಯುಸಿನೆಸ್ ಯಾವುದಿರಬಹುದು ಅನ್ನೋದು ಅವರ ಅಭಿಮಾನಿಗಳಿಗಿರುವ ಸಹಜ ಕುತೂಹಲ ಆಗಿದೆ. ರಶ್ಮಿಕಾ ಮಂದಣ್ಣ ಅವರ ಈ ಹೊಸ ಕಾರ್ಯಕ್ಕೆ ಅವರ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ. ಆದರೆ, ಇಂದು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೂಡ ನಟಿ ರಶ್ಮಿಕಾ ತಮ್ಮ ಬಿಸಿನೆಸ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಬದಲಿಗೆ, ತಮ್ಮ ಮುಂಬರುವ ಬಿಸಿನೆಸ್ 'ತಮ್ಮ ಮನಸ್ಸಿಗೆ, ಹೃದಯಕ್ಕೆ ಹಾಗೂ ಇಷ್ಟಕ್ಕೆ ತೀರಾ ಹತ್ತಿರ' ಎಂದಷ್ಟೇ ಹೇಳಿದ್ದಾರೆ.
ಈ ಮೂಲಕ ತಮ್ಮ ಮುಂಬರುವ ವಿಡಿಯೋಗಾಗಿ, ತಾವು ಮಾಡುತ್ತಿರೋ ಬಿಸಿನೆಸ್ ಬಗ್ಗೆ ತಿಳಿಯಲಿಕ್ಕಾಗಿ ತಮ್ಮ ಫ್ಯಾನ್ಸ್‌ಗಳಲ್ಲಿ ಕ್ಯೂರಿಯಾಸಿಟಿ ಸೃಷ್ಟಿಸಿ ಬಿಟ್ಟಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಅದೇನ್ ಮಾಡ್ತಿದಾರೆ ಎಂಬುದನ್ನು ಅರಿಯಲು ಇದೀಗ ಇಡೀ ಜಗತ್ಯು ಕಾಯುತ್ತಿದೆ. ಸದ್ಯದಲ್ಲೇ ಅದು ಗೊತ್ತಾಗಲಿದೆ..!
ಅಂದಹಾಗೆ, ರಶ್ಮಿಕಾ ಮಂದಣ್ಣ ಹಾಗೂ ಕನ್ನಡಿಗ ದೀಕ್ಷಿತ್ ಶೆಟ್ಟಿ ಅಭಿನಯದ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾ ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಇದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಈ ಸಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸಿದ್ದಾರೆ, ಮತ್ತು ಗೀತಾ ಆರ್ಟ್ಸ್ ಹಾಗೂ ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳಡಿ ನಿರ್ಮಾಣವಾಗಿದೆ. ಚಿತ್ರದ ಮೊದಲ ಹಾಡು ʻಸ್ವರವೇʼ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಡು ಜಗಮೆಚ್ಚುಗೆ ಗಳಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.