ಬೆಂಗಳೂರಿಂದ ದಾವಣಗೆರೆ ಪ್ರಯಾಣದಲ್ಲಿ ಸಿಕ್ಕ ಜನರಿಗೆ 25 ಸಾವಿರ ರೂಪಾಯಿ ಹಂಚಿದ ನಟಿ ಅದಿತಿ ಪ್ರಭುದೇವ

Published : Apr 03, 2023, 10:44 AM ISTUpdated : Apr 05, 2023, 03:08 PM IST
ಬೆಂಗಳೂರಿಂದ ದಾವಣಗೆರೆ ಪ್ರಯಾಣದಲ್ಲಿ ಸಿಕ್ಕ ಜನರಿಗೆ 25 ಸಾವಿರ ರೂಪಾಯಿ ಹಂಚಿದ ನಟಿ ಅದಿತಿ ಪ್ರಭುದೇವ

ಸಾರಾಂಶ

ದಾನ ಮಾಡುತ್ತಿಲ್ಲ ನನ್ನಿಂದ ಜನರಿಗೆ ಖುಷಿ ಹಂಚುತ್ತಿರುವೆ. 25 ಸಾವಿರ ಹಣವನ್ನು ಗಿಫ್ಟ್‌ ಮಾಡಿ ಪ್ರಶ್ನೆ ಕೇಳಿ ಹಂಚಿದ ಅದಿತಿ ಪ್ರಭುದೇವ...  

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಇಷ್ಟು ದಿನ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಡುಗೆ, ಜ್ಯೂಸ್‌, ಸಿಂಪಲ್ ರೆಸಿಪಿ, ಸಿನಿಮಾ, ಫ್ಯಾಮಿಲಿ ಆಂಡ್ ಶಾಪಿಂಗ್ ಎಂದು ವಿಡಿಯೋ ಮಾಡುತ್ತಿದ್ದರು. ಈ ಸಲ ಡಿಫರೆಂಟ್ ಆಗಿರಬೇಕು ಎಂದು ಬೆಂಗಳೂರಿನಿಂದ ತಮ್ಮ ಹುಟ್ಟೂರು ದಾವಣಗೆರೆಗೆ ಪ್ರಯಾಣ ಮಾಡುವಾಗ ಕ್ರಿಯೇಟಿವ್ ಆಗಿ ಯೋಚಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗೆ ಮಿಶ್ರ ಅಭಿಪ್ರಯಾ ವ್ಯಕ್ತವಾಗಿದೆ. 

ಬೆಂಗಳೂರಿನಿಂದ ದಾವಣಗೆರೆ ಜರ್ನಿಯಲ್ಲಿ ಒಂದೊಳ್ಳೆ ನೆನಪುಗಳನ್ನು ಕ್ರಿಯೇಟ್ ಮಾಡೋಣ ಎಂದು ನಾನು ಒಂದು ಡಿಫರೆಂಟ್ ಯೋಚನೆ ಮಾಡಿರುವೆ. ಸುಮ್ಮನೆ ಕುಳಿತುಕೊಂಡು ಜರ್ನಿ ಮಾಡುವುದಕ್ಕೆ ಬೇಸರವಾಗುತ್ತದೆ ಹೀಗಾಗಿ ಖುಷಿ ಕೊಡುವ ವಿಚಾರ ಮಾಡೋಣ ಎಂದು. 25 ಸಾವಿರ ಹಣವನ್ನು ಒಂದು ಕವರ್‌ಗಳಲ್ಲಿ ಹಾಕುವೆ ನನ್ನ ಕೈಗೆ ಸಿಕ್ಕಷ್ಟು ಹಣವನ್ನು ಮತ್ತೊಂದು ಕವರ್‌ಗೆ ಹಾಕಿ ಪ್ಯಾಕ್ ಮಾಡುವೆ. ಒಂದರಲ್ಲಿ 2 ಸಾವಿರ ಇದೆ ಮತ್ತೊಂದರಲ್ಲಿ 6 ಸಾವಿರ ಇರಬಹುದು...ಆ ವ್ಯಕ್ತಿಗಳಿಗೆ ಅಗತ್ಯ ಎಷ್ಟಿರುತ್ತದೆ ಎಂದು ನನಗೆ ಗೊತ್ತಿಲ್ಲ ಆದರೆ ನನ್ನ ಮೂಲಕ ಅವರಿಗೆ ಸಹಾಯ ಆಗಬೇಕು. ಯಾರಿಗೋ ದಾನ ಮಾಡುತ್ತಿರುವ ಎನ್ನುವ ರೀತಿ ಬೇಡ ಹೀಗಾಗಿ ಪ್ರತಿಯೊಬ್ಬರಿಗೂ ಪುಟ್ಟ ಪುಟ್ಟ ಪ್ರಶ್ನೆ ಕೇಳುವೆ  ಉತ್ತರ ಕೊಟ್ಟವರಿಗೆ ಇದನ್ನು ಬಹುಮಾನ ರೀತಿಯಲ್ಲಿ ಕೊಡುವೆ' ಎಂದು ಅದಿತಿ ಪ್ರಭುದೇವ ಜರ್ನಿ ಆರಂಭಸಿದ್ದಾರೆ. 

ಮದ್ವೆ ಆದ್ಮೇಲೆ ಅದಿತಿ ಪ್ರಭುದೇವ ಬದಲಾಗಿದ್ದಾಳೆ?; ನಟಿ ತಾಯಿ ಕೊಟ್ಟ ಶಾಕಿಂಗ್ ಉತ್ತರವಿದು

ಕಾರಿನಲ್ಲಿ ಜರ್ನಿ ಆರಂಭಿಸಿರುವ ಅದಿತಿ ಪ್ರಭುದೇವ ರಸ್ತೆಯಲ್ಲಿ ಸಿಕ್ಕ ವಯಸ್ಕರು ಮತ್ತು ಮಕ್ಕಳನ್ನು ಮಾತನಾಡಿಸಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಸಣ್ಣ ಅಂಗಡಿ ನೋಡಿಕೊಳ್ಳುತ್ತಿರುವ ಲಕ್ಷ್ಮಮ್ಮ ಅವರನ್ನು ಭೇಟಿ ಮಾಡಿದ ನಟ ಸಾರ್ವಭೌಮ ಎಂದು ಯಾರನ್ನು ಕರೆಯುತ್ತಾರೆ ಎಂದು ಪ್ರಶ್ನೆ ಮಾಡಿದಿದ್ದಾರೆ ಅದಕ್ಕೆ ಉತ್ತರ ಪಡೆದು ಅವರಿಗ ಹಣ ಇರುವ ಕವರ್ ಕೊಟ್ಟಿದ್ದಾರೆ. ಹೀಗೆ ಪ್ರಯಾಣ ಮಾಡುತ್ತಾ ಮಾಡುತ್ತಾ ಮತ್ತೊಂದು ಅಂಗಡಿ ಬಳಿ ನಿಲ್ಲಿಸಿ ಅಲ್ಲಿರುವ ವ್ಯಕ್ತಿಗೆ ಪ್ರಶ್ನೆ ಮಾಡಿದ್ದಾರೆ. ಉತ್ತರ ಪಡೆದುಕೊಂಡು ಅವರಿಗೂ ಹಣ ಇರುವ ಗಿಫ್ಟ್‌ ಕೊಟ್ಟಿದ್ದಾರೆ. ಹೀಗೆ ಸಂಪೂರ್ಣ ಜರ್ನಿಯಲ್ಲಿ 25 ಸಾವಿರ ಹಣವನ್ನು ಕೊಟ್ಟು ಖುಷಿ ಪಟ್ಟಿದ್ದಾರೆ.  

'ಹೃದಯ ಶ್ರೀಮಂತಿಕೆಗೆ ಇನ್ನೊಂದು ಹೆಸರೇ ಅದಿತಿ ಪ್ರಭುದೇವ,ನಿಮ್ಮನ್ನು ನೋಡಿದ್ರೆ ನಮ್ಮ ಮನೆ ಮಗಳು ಅನ್ನಿಸುತ್ತೆ ನೀವು ಅಂದ್ರೆ ನಮಗೆ ತುಂಬಾ ಇಷ್ಟ ಮೇಡಮ್, You are a real heroine.ನಿಜ ಜೀವನದಲ್ಲೂ ನೀವು ಹೀರೋಯಿನ್ನೆನೆ.. ನೀವು ಜೀವಿಸುತ್ತಿರುವ ಜೀವನ  ತುಂಬಾ ಚೆನ್ನಾಗಿದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕೋಟ್ಯಾಧಿಪತಿ ಹೆಂಡತಿ ಅದಿತಿ ಪ್ರಭುದೇವ?; ಕೊಂಕು ಮಾಡುವವರಿಗೆ ಉತ್ತರ ಕೊಟ್ಟ ನಟಿ

ಮದುವೆಯಾಗಿ ಟ್ರೋಲ್?:

ರೈತನ ಮದುವೆ ಆಗಬೇಕು ಎಂದು ಆಸೆ ಹೇಳಿಕೊಂಡ ನಟಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅದಿತಿ ಪತಿ ಯಶಸ್ ಚಿಕ್ಕಮಗಳೂರು ರೈತ ಎಂದು ಎಷ್ಟು ಸಲ ಸ್ಪಷ್ಟನೆ ಕೊಟ್ಟರೂ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ. ಹೀಗಾಗಿ ಅವರಿಗೆಲ್ಲಾ ಒಂದೇ ಸಲ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ. 'ಹಳ್ಳಿ ಹುಡುಗ ಶ್ರೀಮಂತ ಹುಡುಗ ಅಂತ ಯಾರಾದರೂ ಬಂದು ನೋಡಿದ್ದಾರಾ? ಜನರ ಪ್ರಕಾರ ರೈತ ಅಂದ್ರೆ ಹರಿದಿರುವ ಬಟ್ಟೆ ಹಾಕೊಂಡು ಇರ್ಬೇಕಾ? ನನ್ನ ಅಜ್ಜ ಮಾವ ಎಲ್ಲಾ ರೈತರು.'ಹೈ-ಸಫೆಸ್ಟಿಕೇಟ್‌  ಆಗಿ ತುಂಬಾ ಚೆನ್ನಾಗಿದ್ದಾರೆ. ರೈತರು ಅಂತ ಹರಿದಿರುವ ಬಟ್ಟೆ ಹಾಕೋಬೇಕಾ? ಅವರೆಲ್ಲಾ ರೈತರಲ್ಲ ಅನ್ನ ಹಾಕೋನು ತುಂಬಾ ಘನತೆಯಿಂದ ಇರುವವನು ರೈತ.ಚೆನ್ನಾಗಿ ಬಟ್ಟೆ ಹಾಕೊಂಡು ಕೂಲಿಂಗ್ ಗ್ಲಾಸ್ ಹಾಕಿದವರು ರಿಚ್ ವ್ಯಕ್ತಿ ರೈತ ಅಲ್ಲ ಅಂತನಾ. ಮೊನ್ನೆ ತೋಟದ ಕಡೆ ಹೋಗಿ ಕಾಫಿ ತೋಟ ಕಬ್ಬು ಎಲ್ಲಾ ನೋಡ್ಕೊಂಡು ಬಂದಿದ್ದಾರೆ.ನನ್ನ ಹಣೆಯಲ್ಲಿ ಯಾರ ಹೆಸರು ಬರೆದಿದೆ ಅವರನ್ನು ಮದುವೆಯಾಗಿರುವೆ. ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್‌ ಅವರಷ್ಟು ಒಳ್ಳೆಯ ಕುಟುಂಬ ನನಗೆ ಸಿಕ್ಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?