ಅಂತೂ ಇಂತೂ ಧ್ರುವ ಸರ್ಜಾ ಸಿನಿಮಾದ ಸುದ್ದಿ ಬಂತು; ಮಾರ್ಚ್‌ 27ಕ್ಕೆ 'ಪೊಗರು'?

Suvarna News   | Asianet News
Published : Mar 21, 2020, 08:29 AM IST
ಅಂತೂ ಇಂತೂ ಧ್ರುವ ಸರ್ಜಾ ಸಿನಿಮಾದ ಸುದ್ದಿ ಬಂತು; ಮಾರ್ಚ್‌ 27ಕ್ಕೆ  'ಪೊಗರು'?

ಸಾರಾಂಶ

ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ಏನಾಗುತ್ತಿದೆ, ಸಿನಿಮಾ ಸೆಟ್ಟೇರಿ ಎರಡು ವರ್ಷ ಮೇಲಾಗುತ್ತಿದೆ. ಆದರೂ ಏನೂ ಸುದ್ದಿ ಇಲ್ಲ ಎಂದು ಬೇಸರ ಮಾಡಿಕೊಂಡಿರುವವರಿಗೆ ಈಗ ಹೊಸ ನ್ಯೂಸ್‌ ಕೊಟ್ಟಿದೆ ಚಿತ್ರತಂಡ. 

ಇದೇ ತಿಂಗಳು 27ರಂದು ಚಿತ್ರದ ಮೊದಲ ಹಾಡು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಆ ಮೂಲಕ ಪೊಗರು ಚಿತ್ರ, ಅಭಿಮಾನಿಗಳ ಸಂಭ್ರಮದ ಅಖಾಡದಲ್ಲಿ ಸದ್ದು ಮಾಡಲು ಹೊರಟಿದೆ.

ನಂದ ಕಿಶೋರ್‌ ನಿರ್ದೇಶನದ, ಬಿ ಕೆ ಗಂಗಾಧರ್‌ ನಿರ್ಮಾಣದ ಈ ಚಿತ್ರದ ಮೊದಲ ಹಾಡಾಗಿ ಅನಾವರಣಗೊಳ್ಳುತ್ತಿರುವುದು ಟೈಟಲ್‌ ಸಾಂಗ್‌. ಕರಾಬ್‌ ಎಂದು ಸಾಗುವ ಈ ಹಾಡನ್ನು ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿಹಾಡಿದ್ದಾರೆ. ಇದರ ವಿಡಿಯೋ ರೂಪದ ಹಾಡು ಬಿಡುಗಡೆ ಆಗುತ್ತಿದ್ದು, ಸದ್ಯದಲ್ಲಿ ದೊಡ್ಡ ಮಟ್ಟದಲ್ಲಿ ಆಡಿಯೋ ಲಾಂಚ್‌ ಮಾಡುವ ಪ್ಲಾನ್‌ ಚಿತ್ರತಂಡದ್ದು. ಸಾಕಷ್ಟುಪೋರ್ಸ್‌ ಆಗಿಯೇ ಹಾಡು ಮೂಡಿ ಬಂದಿದೆ. ಚಿತ್ರದಲ್ಲಿ ನಾಯಕನ ಖದರ್‌ ಹೇಳುವ ಹಾಡು ಇದಾಗಿದ್ದು, ಈಗಾಗಲೇ ಚಿತ್ರದ ಡೈಲಾಗ್‌ ಟೀಸರ್‌ ನೋಡಿದವರಿಗೆ ಹಾಡು ಯಾವ ರೀತಿಯಲ್ಲಿರುತ್ತದೆ ಎಂಬ ಅಂದಾಜು ಇರುತ್ತದೆ. ಅವರ ಊಹೆಗೆ ತಕ್ಕಂತೆ ಮೊದಲ ಹಾಡನ್ನು ರೂಪಿಸಲಾಗಿದೆ ಎಂಬುದು ನಿರ್ದೇಶಕರ ಮಾತು.

ಕನ್ನಡಕ್ಕೆ ನಾನಿ ಎಂಟ್ರಿ; 'ಕೋರಿ' ರಿಮೇಕ್‌ನಲ್ಲಿ ಧ್ರುವ ಸರ್ಜಾ!

ಮಾ.27ರಂದು ಮಧ್ಯಾಹ್ನ 12.12ಕ್ಕೆ ಯೂಟ್ಯೂಬ್‌ ನಲ್ಲಿ ಹಾಡು ಬಿಡುಗಡೆ ಆಗಲಿದೆ. ಚಂದನ್‌ ಶೆಟ್ಟಿಸಂಗೀತದಲ್ಲಿ ಒಟ್ಟು ಐದು ಹಾಡುಗಳು ಮೂಡಿ ಬಂದಿದ್ದು, ವಿ ಹರಿಕೃಷ್ಣ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಗೆ ನೋಡಿದರೆ ಚಿತ್ರೀಕರಣ ಬಹುತೇಕ ಮುಗಿದಿದೆ. ನಾಯಕನ ಇಂಟ್ರಡಕ್ಷನ್‌ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಕೊರೋನಾ ವೈರಸ್‌ ಭೀತಿ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗೆ ಹಾಡಿನ ಚಿತ್ರೀಕರಣ ಮುಗಿಸಲಾಗುತ್ತಿದ್ದು. ಹೈದರಾಬಾದ್‌ ನಲ್ಲಿ ಸದರಿ ಹಾಡಿನ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲಾನ್‌ ಮಾಡಿಕೊಂಡಿದ್ದರು. ಆದರೆ, ಕೊರೋನಾ ಮಾರಿ ಆವರಿಸಿಕೊಂಡಿರುವ ಕಾರಣ ಚಿತ್ರೀಕರಣವನ್ನು ಮುಂದೂಡಿದ್ದಾರೆ.

'ನಟಭಯಂಕರ' ಹೀರೋಗೆ 'ಭರ್ಜರಿ' ಹುಡುಗನ ಸಾಥ್!

ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಾಲ್ಕು ಮಂದಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ಗಳ ಜತೆಗೆ ಡಾಲಿ ಧನಂಜಯ್‌, ಕುರಿ ಪ್ರತಾಪ್‌, ಚಿಕ್ಕಣ್ಣ, ನಟಿ ಮಯೂರಿ, ತಾರಾ, ರವಿ ಶಂಕರ್‌ ಮುಂತಾದವರು ನಟಿಸಿದ್ದಾರೆ. ಧ್ರುವ ಸ್ಜಅರ್‍ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದು, ಮುಂದಿನ ವಾರದಿಂದ ಚಿತ್ರಕ್ಕೆ ಡಬ್ಬಿಂಗ್‌ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಏಪ್ರಿಲ್‌ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ನಿರ್ದೇಶಕರದ್ದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?